ಮೈಸೂರಿನಲ್ಲಿ ಹನಿಟ್ರ್ಯಾಪ್ ನಡೆಸುತ್ತಿದ್ದ ನಾಲ್ವರ ಬಂಧನ

Posted By:
Subscribe to Oneindia Kannada

ಮೈಸೂರು, ಜನವರಿ 31 : ಹನಿ ಟ್ರ್ಯಾಪ್ ನಡೆಸಿದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸುಲಿಗೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಬಂಧಿತರನ್ನು ಅರವಿಂದ ನಗರ ನಿವಾಸಿ ಗೀತಾ (35), ಕೆ.ಎನ್. ಪುರದ ನಿವಾಸಿ ಮಂಜುನಾಥ(22) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ಬಾಲಕರ ಬಾಲಮಂದಿರದ ವಶಕ್ಕೆ ನೀಡಲಾಗಿದೆ. ಬಂಧಿತರಿಂದ 15,650 ರೂ. ನಗದು ಮತ್ತು 95 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊ‍ಳ್ಳಲಾಗಿದೆ.

Four trapped for alleged honeytrap

ಆರ್ ಎಂ ಸಿ ವ್ಯಾಪಾರಿ ಸಣ್ಣಸ್ವಾಮಿ ಅವರಿಗೆ ಪರಿಚಯವಿದ್ದ ಅನು ಎಂಬ ಹುಡುಗಿಯು ತನ್ನೊಂದಿಗೆ ಮಾತನಾಡಲು ಬರುವಂತೆ ಡಿ.20 ರಂದು ಕುವೆಂಪುನಗರದ ಬಸ್ ಡಿಪೋ ಬಳಿ ಅವರನ್ನು ಬರಹೇಳಿದ್ದರು. ನಂತರ ಅಲ್ಲಿಂದ ಅರವಿಂದ ನಗರದ ನಿವಾಸಿ ಗೀತಾ ಎಂಬುವವರ ಮನೆಗೆ ಕರೆದುಕೊಂಡು ಹೋಗಿ ಆ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅಲ್ಲಿಗೆ ಬಂದ ಮೂವರು, ವ್ಯಾಪಾರಿಗೆ ಪ್ರಾಣ ಬೆದರಿಕೆ ಹಾಕಿ ಅವರ ಬಳಿ ಇದ್ದ 90 ಸಾವಿರ ರೂ. ನಗದು, ಒಂದು ಚಿನ್ನದ ಸರ ಮತ್ತು ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಈ ಪ್ರಕರಣದ ಆರೋಪಿ ಗೀತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತನಗೆ ಪರಿಚಯವಿದ್ದ ಇತರೆ ಮೂವರ ಜತೆ ಸೇರಿಕೊಂಡು ಈ ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಆರೋಪಿ ಮಂಜುನಾಥನ ವಿರುದ್ಧ ಈಗಾಗಲೇ ಮಂಡ್ಯ ಜಿಲ್ಲೆಯ ಅರಕೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಪತ್ತೆದಾರಿ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಸಿ.ಗೋಪಾಲ್, ಇನ್ಸ್ಪೆಕ್ಟರ್ ಕೆ.ಸಿ.ಪ್ರಕಾಶ್, ಪ್ರಸನ್ನಕುಮಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysore CCB police has nabbed four persons including a woman who were indulged in honeytrap in the city. Using this trick these persons had robbed a vendor recently. Based on the complaint given by the vendor, police successfully chased and nabbed the culprits.
Please Wait while comments are loading...