ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ಮಂಜುನಾಥ್ ಇನ್ನಿಲ್ಲ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮಾರ್ಚ್ 17: ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ಮಂಜುನಾಥ್ ಗುರುವಾರ ಸಂಜೆ 6.45ಕ್ಕೆ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರು ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 15ದಿನಗಳ ಹಿಂದೆ ಬೈಪಾಸ್ ಸರ್ಜರಿ ನಡೆಸಲಾಗಿತ್ತು. ಆನಂತರ ಆರೋಗ್ಯವಾಗಿಯೇ ಇದ್ದ ಅವರು ಗುರುವಾರ ಹೃದಯಾಘಾತಕ್ಕೊಳಗಾಗಿ ಹಠಾತ್ ಸಾವನ್ನಪ್ಪಿದ್ದಾರೆ.ಮಾಜಿ ಸಚಿವರೂ, ಕಾಂಗ್ರೆಸ್ ನ ಹಿರಿಯ ಮುಖಂಡರಾದ ದಿವಂಗತ ಟಿ.ಎನ್.ನರಸಿಂಹ ಮೂರ್ತಿಯವರ ಪುತ್ರರಾದ ಇವರು ಪತ್ನಿ ಆಶಾ ಮತ್ತು ಪುತ್ರ ಪ್ರಪುಲ್ಲರನ್ನು ಅಗಲಿದ್ದಾರೆ.[ಮೈಸೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ]

Former MLC N Manjunath is no more

ಮೈಸೂರಿನ ಎನ್.ಆರ್.ಮೊಹಲ್ಲಾ ನಿವಾಸಿಯಾಗಿದ್ದ ಎನ್. ಮಂಜುನಾಥ್ ಅವರು ಕಾಂಗ್ರೆಸ್ ಎಸ್ ಸಿ ಘಟಕದ ರಾಜ್ಯಾಧ್ಯಕ್ಷರೂ, ಎಐಸಿಸಿ ವೀಕ್ಷಕರಾಗಿದ್ದರು. ಮೈಸೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು.

ಗೃಹ ಸಚಿವ ಪರಮೇಶ್ವರ್, ವಿಧಾನ ಪರಿಪತ್ ಸದಸ್ಯ ಜಿ.ರಘು ಆಚಾರ್ ಮಂಜುನಾಥ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ . ಇಂದು (ಮಾರ್ಚ್ 17) ಮಧ್ಯಾಹ್ನ ಎರಡುಗಂಟೆಯ ಸುಮಾರಿಗೆ ಮೃತರ ಅಂತ್ಯಕ್ರಿಯೆ ಮೈಸೂರಿನಲ್ಲಿಯೇ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Member of Legislative council N Manjunath passes away by cardiac arrest in Narayana Hrudayalaya Bengaluru. He had a bypass sergery two weeks before. Cremetion will be held today at Mysuru.
Please Wait while comments are loading...