ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತರ ಕಣ್ಣೀರು ಒರೆಸಿ, ಅಳಬೇಡಿ: ಸಿಎಂಗೆ ಮಾಜಿ ಸಚಿವ ಎ.ಮಂಜು ಟಾಂಗ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 16 : ಸಿಎಂ ಕುಮಾರಸ್ವಾಮಿ ರಾಜ್ಯದ ರೈತರ ಕಣ್ಣೀರು ಒರೆಸುವುದನ್ನು ಬಿಟ್ಟು, ತಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಕೊಟ್ಟಂತಹ ಅವಕಾಶ ರಾಜ್ಯದ ಯಾವುದೇ ಮುಖ್ಯಮಂತ್ರಿಗೆ ನೀಡಿಲ್ಲ. ರೈತರ ಕಣ್ಣೀರು ಒರೆಸುವುದು ಅವರ ಕೆಲಸ. ಜನರು ಸಿಎಂ ಕಣ್ಣೀರು ಒರೆಸುವ ಕೆಲಸವಾಗಬಾರದು.

ಹಾಗಾದ್ರೆ.. ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಗೆ ಅಸಲಿ ಕಾರಣಕರ್ತರಾರು?ಹಾಗಾದ್ರೆ.. ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಗೆ ಅಸಲಿ ಕಾರಣಕರ್ತರಾರು?

ಇದನ್ನೆಲ್ಲಾ ನೋಡುತ್ತಿದ್ದರೆ ರಾಜ್ಯದಲ್ಲಿ ಅವರು ಯಾವುದೇ ರೀತಿಯ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ ಅನ್ನಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಸರ್ಕಾರದ ನಡೆ ಬಗ್ಗೆ ತಿಳಿಸಬೇಕಿದೆ.

Former minister A. Manju Said Chief Minister kumaraswamy does not cry

ಇತ್ತೀಚೆಗೆ ಕುಮಾರಸ್ವಾಮಿ ಅವರು ನಾನು ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೀನಿ ಎಂದಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಗೆ ಅನೇಕ ಉನ್ನತ ಖಾತೆಗಳ‌ನ್ನು ನೀಡಿದೆ. ಆದರೆ ಜೆಡಿಎಸ್ ಮುಖಂಡರ ಕೆಲವೊಂದು ಹೇಳಿಕೆ ಸರಿ ಅಲ್ಲ ಎಂದು ಖಂಡಿಸಿದರು.

ರಾಜ್ಯದ ಹಿತಕ್ಕಾಗಿ ಪತ್ರ ಬರೆಯುವುದನ್ನು ತಪ್ಪು ಎಂದು ಬಿಂಬಿಸುವುದು ಸರಿ ಅಲ್ಲ. ಪತ್ರದ ಮೂಲಕ ತಿಳಿಸುವುದು ಮೊದಲಿನಿಂದ ನಡೆದುಕೊಂಡು ಬಂದಿದೆ. ಜೆಡಿಎಸ್ ನಮ್ಮ ಪಕ್ಷದ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದೆ.

ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..

ಯಾರೇ ಮಂತ್ರಿಯಾಗಲಿ ಕೇವಲ ಜನಾಂಗದ ಅಭಿವೃದ್ಧಿಗೆ ತೊಡಗಬಾರದು. ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಲು ಮುಂದಾಗಬೇಕು. ಕುಮಾರಸ್ವಾಮಿ ಹೇಳಿರುವಂತೆ ನಾವು ಅವರಿಗೆ ವಿಷ ಕೊಟ್ಟಿಲ್ಲ.! ಅವರು ಕೇಳಿದ ಪ್ರಮುಖ ಖಾತೆಗಳನ್ನೇ ಕೊಟ್ಟಿದ್ದೇವೆ.

ಕಾಂಗ್ರೆಸ್ ನಾಯಕರು, ಶಾಸಕರು ತಪ್ಪು ಮಾಡಿರೋ ರೀತಿಯಲ್ಲಿ ಕುಮಾರಸ್ವಾಮಿ ಮಾತನಾಡುತ್ತಿರುವುದು. ಸರಿಯಲ್ಲ. ಅವರ ಇತ್ತೀಚಿನ ಹೇಳಿಕೆಗಳಿಂದಾಗಿ ನೋವಾಗಿದೆ. ಓರ್ವ ಕಾಂಗ್ರೆಸ್ಸಿಗನಾಗಿ ನನಗೆ ನೋವಾಗಿದೆ ಎಂದು ಎಚ್ ಡಿಕೆ ವಿರುದ್ಧ ನೋವಿನ ಬಾಣ ಬಿಟ್ಟರು.

English summary
Former minister A. Manju Said Chief Minister kumaraswamy does not cry, instead of wiping farmers' tears. Their work is to wipe farmers' tears.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X