ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡಹಬ್ಬಕ್ಕೆ ದಿನಗಣನೆ ಆರಂಭ: ಆಗಸ್ಟ್ 23ರಂದು ನಡೆಯಲಿದ್ಯಾ ಗಜಪಡೆಗೆ ಸ್ವಾಗತ ?

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 07: ನಾಡಹಬ್ಬ ದಸರಾಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಉತ್ಸವದ ಪ್ರಮುಖ ಆಕರ್ಷಣೆ ಗಜಪಡೆಯನ್ನು ಸಜ್ಜುಗೊಳಿಸುತ್ತಿದೆ. ಈ ಬಾರಿ ಎರಡು ಹೊಸ ಆನೆ ಸೇರಿದಂತೆ 12 ಆನೆಗಳನ್ನು ದಸರಾ ಮಹೋತ್ಸವಕ್ಕೆ ಕರೆತರಲು ನಿರ್ಧರಿಸಲಾಗಿದೆ.

ಈ ಸಾಲಿನ ದಸರಾ ಉತ್ಸವ ಅ.10 ರಿಂದ 19ರವರೆಗೆ ನಡೆಯಲಿದ್ದು, ಈಗಾಗಲೇ ವಿವಿಧ ಆನೆ ಶಿಬಿರಗಳು ಆರೋಗ್ಯ ಸ್ಥಿತಿ, ಸದೃಢತೆ ಅನ್ವಯ 15 ಆನೆಗಳ ಪಟ್ಟಿ ಸಿದ್ಧಗೊಳಿಸಿದೆ. ಅವುಗಳಲ್ಲಿ 12 ಆನೆಗಳನ್ನು ದಸರಾ ಮಹೋತ್ಸವಕ್ಕೆ ಬಳಸಿಕೊಳ್ಳಲು ಅರಣ್ಯ ಇಲಾಖೆ ಉದ್ದೇಶಿಸಿದೆ.

ಪ್ರವಾಸೋದ್ಯಮ ಕೇಂದ್ರಿತ ದಸರಾ ಆಚರಣೆ: ಸಿಎಂ ಕುಮಾರಸ್ವಾಮಿಪ್ರವಾಸೋದ್ಯಮ ಕೇಂದ್ರಿತ ದಸರಾ ಆಚರಣೆ: ಸಿಎಂ ಕುಮಾರಸ್ವಾಮಿ

ಪ್ರತಿ ಬಾರಿ 12 ಆನೆಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಪ್ರಮುಖವಾಗಿ 9 ಆನೆಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ದಸರಾ ಮಹೋತ್ಸವಕ್ಕೆ ಆನೆಗಳನ್ನು ಆಯ್ಕೆ ಮಾಡಲು ಕಳೆದ 15 ದಿನದ ಹಿಂದೆ ಡಿಎಸ್ಎಫ್ ಸಿದ್ದರಾಮಪ್ಪ ಹಾಗೂ ಪಶು ವೈದ್ಯ ನಾಗರಾಜು ಸೇರಿ ಬಳ್ಳೆ, ಬಂಡೀಪುರ, ಕೆ ಗುಡಿ, ತಿತಿಮತಿ, ಮತ್ತಿಗೋಡು, ದುಬಾರೆ ಸೇರಿದಂತೆ ವಿವಿಧ ಆನೆ ಕ್ಯಾಂಪ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ನಾಡಹಬ್ಬ ದಸರಾದಲ್ಲಿ ಪರಿಸರ ಸ್ನೇಹಿ ದೀಪಾಲಂಕಾರಕ್ಕೆ ವ್ಯವಸ್ಥೆನಾಡಹಬ್ಬ ದಸರಾದಲ್ಲಿ ಪರಿಸರ ಸ್ನೇಹಿ ದೀಪಾಲಂಕಾರಕ್ಕೆ ವ್ಯವಸ್ಥೆ

ಆನೆಗಳ ಆರೋಗ್ಯ ಸ್ಥಿತಿ, ದೈಹಿಕ ಸದೃಢತೆ, ವಯಸ್ಸು, ದೃಷ್ಟಿ, ಮದದ ಸ್ಥಿತಿ, ವರ್ತನೆ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅನುಭವ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

 12 ಆನೆಗಳು ಆಯ್ಕೆ ಸಮಿತಿ ಸಭೆಯಲ್ಲಿ ಅಂತಿಮ

12 ಆನೆಗಳು ಆಯ್ಕೆ ಸಮಿತಿ ಸಭೆಯಲ್ಲಿ ಅಂತಿಮ

ಪರಿಶೀಲನೆಯ ವೇಳೆ ಎಲ್ಲಾ ಆನೆಗಳು ಸದೃಢವಾಗಿರುವುದನ್ನು ಕಂಡು ಬಂದಿರುವುದರಿಂದ ಒಟ್ಟು 15 ಆನೆಗಳ ಪಟ್ಟಿ ಸಿದ್ಧಪಡಿಸಿದ್ದಾರೆ. ಇನ್ನು ಡಿಎಸ್ಎಫ್ ಸಿದ್ದರಾಮಪ್ಪ ಚಳಕಾಪುರೆ ನೇತೃತ್ವದಲ್ಲಿ ಆಯ್ಕೆ ಮಾಡಿರುವ ಈ ಆನೆಗಳಲ್ಲಿ ಅಂತಿಮವಾಗಿ 12 ಆನೆಗಳನ್ನು ಆಯ್ಕೆ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ.

ದಸರಾದ ಹೊಸ ಆನೆಗಳು

ದಸರಾದ ಹೊಸ ಆನೆಗಳು

ಪ್ರಸ್ತುತ ಆಯ್ಕೆ ಮಾಡಲಾಗಿರುವ 12 ಆನೆಗಳಲ್ಲಿ ಎರಡು ಹೊಸ ಆನೆಗಳು ಮುಂದಿನ ದಿನಗಳಲ್ಲಿ ದಸರಾ ಮಹೊತ್ಸವದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಲು ಬಳಸಿಕೊಳ್ಳಲು ಅರಣ್ಯ ಇಲಾಖೆ ಸಜ್ಜಾಗಿದೆ. ಮತ್ತಿಗೂಡು ಶಿಬಿರದಲ್ಲಿರುವ 37 ವರ್ಷದ ದ್ರೋಣ, ದುಬಾರೆ ಶಿಬಿರದ 37 ವರ್ಷದ ಧನಂಜಯ್ ಈ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಹೊಸ ಆನೆಗಳು.

 ಈ ಬಾರಿಯ ಆನೆಗಳ ಪಟ್ಟಿ

ಈ ಬಾರಿಯ ಆನೆಗಳ ಪಟ್ಟಿ

ಅರ್ಜುನ ( 58 ) ಬಳ್ಳೆ ಅರಣ್ಯ, ಬಲರಾಮ (60) ತಿತಿಮತಿ, ಅಭಿಮನ್ಯು(58 ) ತಿತಿಮತಿ, ಗೋಪಾಲಸ್ವಾಮಿ (35 ) ತಿತಿಮತಿ, ವಿಕ್ರಮ (44 ) ದುಬಾರೆ, ಗೋಪಿ (35) ದುಬಾರೆ, ದ್ರೋಣ ( 37 ) ಮತ್ತಿಗೋಡು, ಧನಂಜಯ ( 37 ) ದುಬಾರೆ, ವಿಜಯ ( 60 ) ದುಬಾರೆ, ಕಾವೇರಿ ( 39 ) ದುಬಾರೆ, ವರಲಕ್ಷ್ಮಿ 61 ) ಮತ್ತಿಗೋಡು, ಚೈತ್ರಾ ( 46 ) ಬಂಡೀಪುರ, ಗಜೇಂದ್ರ ( 62 ) ಕೆ. ಗುಡಿ, ಹರ್ಷ( 50) ದುಬಾರೆ, ಪ್ರಶಾಂತ್ ( 61 ) ದುಬಾರೆ ಆನೆಗಳು ಫೈನಲ್ ಲಿಸ್ಟ್ ನಲ್ಲಿದೆ.

 ಆಗಸ್ಟ್ 23ರಿಂದ ಗಜಪಯಣ ಆರಂಭ

ಆಗಸ್ಟ್ 23ರಿಂದ ಗಜಪಯಣ ಆರಂಭ

ಅರವತ್ತು ವರ್ಷ ದಾಟಿದ ಆನೆಗಳು ಗಜಪಡೆಯಲ್ಲಿ ಸ್ಥಾನ ಪಡೆದಿವೆ. ಎರಡನೇ ತಲೆಮಾರಿನ ಗಜಪಡೆ ಸೃಷ್ಟಿ ಮಾಡಲು ಎರಡು ಆನೆಗಳಿಗೆ ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ.
ಮೊದಲ ಹಂತದಲ್ಲಿ 6 ಆನೆಗಳನ್ನು ಗಜಪಯಣದಲ್ಲಿ ಕರೆತರಲಾಗುತ್ತದೆ.

ಹೊಸ ಆನೆಗಳನ್ನು ಮೊದಲು ಕರೆತಂದು ಭಾರ ಹೊರುವ ತಾಲೀಮು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 23ರಿಂದ ಗಜಪಯಣ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

English summary
Forest Department is planning to bring two new elephants this time in the wake of Dasara festival. Total of 12 elephants are scheduled to be brought to the Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X