ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗಸನಹುಂಡಿ ಬಳಿ ಬೋನಿಗೆ ಬಿದ್ದ ಹೆಣ್ಣು ಹುಲಿ ನೋಡಲು ಜಮಾಯಿಸಿದ ಜನ

|
Google Oneindia Kannada News

ಮೈಸೂರು, ಅಕ್ಟೋಬರ್. 29: ಕಳೆದ ಕೆಲವು ತಿಂಗಳಿನಿಂದಲೂ ಮನೆಯಲ್ಲಿ ಸಾಕಿದ್ದ ಪ್ರಾಣಿಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ಕೊಂದು ಆತಂಕ ಸೃಷ್ಟಿಸಿದ್ದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಅಗಸನಹುಂಡಿ ಬಳಿ 3 ವರ್ಷದ ಹೆಣ್ಣು ಹುಲಿ ಸೆರೆಯಾಗಿದ್ದು, ಈ ಹುಲಿ ಗ್ರಾಮದಲ್ಲಿರುವ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಕೊಲ್ಲುತ್ತಿತ್ತು. ಇದರಿಂದ ಜನರು ಆತಂಕಗೊಂಡು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

Forest department has been able to capture a female tiger in Agasana Hundi

ಸಾರ್ವಜನಿಕರ ದೂರಿನ ಮೇರೆಗೆ ವಾರದ ಹಿಂದೆ ಸೋಮೇಗೌಡರ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನಿರಿಸಿದ್ದರು. ಜತೆಗೆ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೂ ಮೊಕ್ಕಂ ಹೂಡಿದ್ದರು.

ಈಗ ಬಂಡೀಪುರದಲ್ಲಿ ಸಫಾರಿಗೆ ಹೋದಾಗಲೆಲ್ಲ ಹುಲಿರಾಯ ಕಾಣಿಸುತ್ತಾನಂತೆ!ಈಗ ಬಂಡೀಪುರದಲ್ಲಿ ಸಫಾರಿಗೆ ಹೋದಾಗಲೆಲ್ಲ ಹುಲಿರಾಯ ಕಾಣಿಸುತ್ತಾನಂತೆ!

ಇದೀಗ ಹುಲಿ ಸೆರೆಯಾಗಿದ್ದು, ಹುಲಿ ನೋಡಲು ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ. ಕೊನೆಗೆ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಟ್ಟರು. ಸೆರೆಯಾದ ಹುಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯದಿಂದ ಹೊರಬಂದಿತ್ತು ಎನ್ನಲಾಗಿದೆ.

 ಬಂಡೀಪುರದ ಕಾಡಾನೆಗೆ ಸಫಾರಿ ವಾಹನವೇ ಟಾರ್ಗೆಟ್, ಯಾಕಿರಬಹುದು? ಬಂಡೀಪುರದ ಕಾಡಾನೆಗೆ ಸಫಾರಿ ವಾಹನವೇ ಟಾರ್ಗೆಟ್, ಯಾಕಿರಬಹುದು?

Forest department has been able to capture a female tiger in Agasana Hundi

ಜಾಗ್ವಾರ್ ರಾಜಾ ಮರಣ
ಅಲ್ಲಿ ಹುಲಿ ಸೆರೆಯಾಗಿದ್ದರೆ ಇತ್ತ ಮೈಸೂರು ಮೃಗಾಲಯದಲ್ಲಿದ್ದ 13 ವರ್ಷದ ಜಾಗ್ವಾರ್ ರಾಜಾ ಸಾವಿಗೀಡಾಗಿದೆ. ಕೋಬ್ರಾ ಕಡಿತದಿಂದಾಗಿ ಅನಾರೋಗ್ಯಕ್ಕೀಡಾಗಿದ್ದ ಜಾಗ್ವಾರ್ ರಾಜಾ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ (ಅ.29) ಮರಣ ಹೊಂದಿದ್ದಾನೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.

English summary
Forest department has been able to capture a female tiger in Agasana Hundi at HD Kote taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X