ದಸರೆ ಹಿನ್ನೆಲೆ : ಕೆಎಸ್ ಆರ್ ಟಿ ಸಿಯಿಂದ ನೂತನ ಬಸ್ ವ್ಯವಸ್ಥೆ

Posted By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 14 : ವಿಶ್ವವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕೆ.ಎಸ್.ಆರ್.ಟಿ.ಸಿ ಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮೈಸೂರು ದಸರಾ: ಇಲ್ಲಿದೆ ಕಾರ್ಯಕ್ರಮದ ಪಟ್ಟಿ

ನಿನ್ನೆ ವಿಧಾನಸೌದದ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ 23 ಐಷಾರಾಮಿ ಬಸ್‌ಗಳ ಸಂಚಾರಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದರು. ಈ 23 ಬಸ್‌ಗಳಲ್ಲಿ 8 ಬಸ್‌ಗಳನ್ನು ಮೈಸೂರು ಡಿಪೋಗೆ ನೀಡಿದ್ದು, ಈ 8 ಬಸ್‌ಗಳನ್ನು ಮೈಸೂರು ಕೆಎಸ್ ಆರ್‌ಟಿಸಿ ಡಿಪೋದ ಅಧಿಕಾರಿಗಳು ದಸರಾಗೆ ಬಳಸಿಕೊಳ್ಳಲು ಇಂದು ಚಾಲನೆ ನೀಡಲಾಯಿತು.

For tourists' convenience in Dasara festival, KSRTC decided to provide special buses for Mysuru

ಮೈಸೂರು ಗ್ರಾಮಾಂತರ ಘಟಕ ವಿಭಾಗೀಯ ನಿಯಂತ್ರಣ ಅಧಿಕಾರಿ ವಾಸು ಚಾಲನೆ ನೀಡಿದರು. ದಸರಾ ಹಿನ್ನಲೆ ಹೈದರಾಬಾದ್, ಪಣಜಿ,ಪೂನಾ, ತಿರುಪತಿ,ಕೊಯಂಬತ್ತೂರ್, ತಿರುಚೂರು ಸೇರಿದಂತೆ ಹಲವು ಕಡೆ ಪ್ರಯಾಣಿಸಲಿದೆ. ರಾತ್ರಿ 8ಗಂಟೆಗೆ, ಚೆನ್ನೈ, 8:05 ಕ್ಕೆ ಸಿಕಂದ್ರಾಬಾದ್, ಮೈಸೂರು, ಬೆಂಗಳೂರು, ಬೆಳಿಗ್ಗೆ 5.30ಕ್ಕೆ ವಿರಾಜಪೇಟೆಗೆ ಬಸ್ ಗಳು ಸಂಚರಿಸಲಿವೆ. ಇವುಗಳಲ್ಲದೆ ಇದೇ ತಿಂಗಳ 21 ರಿಂದ ಅಕ್ಟೋಬರ್ 5 ರವರೆಗೆ 125 ವಿಶೇಷ ಸಮಾನ್ಯ ಬಸ್‌ಗಳು ರಾಜ್ಯ ಪ್ರಮುಖ ಸ್ಥಳಗಳು ಹಾಗೂ ಯಾತ್ರಾ ಸ್ಥಳಗಳಲ್ಲಿ ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.

For tourists' convenience in Dasara festival, KSRTC decided to provide special buses for Mysuru

ಬಸ್‌ಗಳು 13.8 ಮೀಟರ್ ಉದ್ದವಿದ್ದು, 49 ಸೀಟ್‌ಗಳನ್ನು ಒಳಗೊಂಡಿವೆ. ಪ್ರತಿಯೊಂದು ವಿಂಡೋ ಸಹ ಎಮರ್ಜೆನ್ಸಿ ಎಕ್ಸಿಟ್ ಒಳಗೊಂಡಿದೆ. ಇದು ಆಟೋಮೆಟಿಕ್ ಚಾಲನೆಯನ್ನು ಮಾಡಬಹುದಾಗಿದ್ದು ಡ್ರೈವರ್‌ಗೆ ಅಫಘಾತ ಸಂದರ್ಭದಲ್ಲಿ ವಿಶೇಷ ರಕ್ಷಣೆ ಒಳಗೊಂಡಿದೆ. ಇದರ ಬೆಲೆ 1 ಕೋಟಿ 7 ಲಕ್ಷ ಎಂದು ಕೆಎಸ್ ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
For tourists' convenience in Dasara festival, KSRTC decided to provide special buses for Mysuru. The state festival will be started from Sep 21st to 30th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ