ನಂಜನಗೂಡಿನಲ್ಲಿ ಸ್ಮಶಾನಕ್ಕಾಗಿ ಮಗುವಿನ ಶವವಿರಿಸಿ ಪ್ರತಿಭಟನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 26: ಮಗುವಿನ ಶವವಿಟ್ಟುಗೊಂಡು ಸ್ಮಶಾನ ಜಾಗ ನಿಗದಿಪಡಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಅಹಲ್ಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಇದೇ ಗ್ರಾಮದ ಮಂಜುನಾಥ್ ಎಂಬುವವರ ಪುತ್ರ 2 ವರ್ಷದ ಕೈಲಾಸ್ ಕುಮಾರ್ ಅನಾರೋಗ್ಯದಿಂದ ಮೃತನಾಗಿದ್ದನು. ಆದರೆ ಸ್ಮಶಾನ ಜಾಗಕ್ಕೆ ಪರದಾಟ ಉಂಟಾಗಿದ್ದು, ಗ್ರಾಮದಲ್ಲಿ ಜನರು ಸತ್ತರೆ ಹೂಳಲು ಸ್ಮಶಾನವಿಲ್ಲ ಹೀಗಾಗಿ ಸ್ಮಶಾನ ಜಾಗ ನಿಗದಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

For the offering of cemetery fields : nanjangud villagers protest

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿ ಜನರು ಅನುಭವಿಸುತ್ತಿರುವ ಸಂಕಷ್ಟವಾಗಿದ್ದು. ಸ್ಥಳಕ್ಕೆ ತಹಸೀಲ್ದಾರ್ ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ವಿಷಯ ತಿಳಿದ ಬಳಿಕ ಸ್ಥಳಕ್ಕಾಗಮಿಸಿದ ಉಪತಹಸೀಲ್ದಾರ್ ರಾಮಪ್ರಿಯನ್ ಸ್ಮಶಾನಕ್ಕೆ ಜಾಗ ನೀಡುವುದಾಗಿ ಭರವಸೆ ನೀಡಿದರು. ಹೀಗಾಗಿ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟು ಖಾಸಗಿ ಜಮೀನಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
For the offering of cemetery fields : nanjangud taluk ahalya villagers protest in mysuru
Please Wait while comments are loading...