ಜನರಿಗೆ ಉಚಿತ ಹೆಲ್ಮೆಟ್: ಪೊಲೀಸ್ ಅಧಿಕಾರಿಯ ಬರ್ಥಡೆ ಸ್ಪೆಶಲ್!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಕೆಲವರು ತಮ್ಮ ಜನ್ಮದಿನವನ್ನು ಕೇಕ್ ಕತ್ತರಿಸಿ, ದುಂದು ವೆಚ್ಚ ಮಾಡುವ ಮೂಲಕ ಆಚರಣೆ ಮಾಡುತ್ತಾರೆ. ಆದರೆ ಮೈಸೂರಿನ ಪೊಲೀಸ್ ಇನ್ಸಪೆಕ್ಟರ್ ಓರ್ವರು ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಐಎಸ್ಐ ಗುರುತಿನ ಹೆಲ್ಮೆಟ್ ನ್ನು ವಿತರಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಗಮನ ಸೆಳೆದಿದ್ದಾರೆ.

ಮೈಸೂರು ಮೃಗಾಲಯದ ಎದುರು ನಗರದ ಸಿದ್ದಾರ್ಥ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಐಎಸ್ಐ ಗುರುತಿನ ಹೆಲ್ಮೆಟ್ ನ್ನು ಉಚಿತವಾಗಿ ವಿತರಿಸಿದರು. ಬಳಿಕ ಮಾತನಾಡಿದ ಅವರು ಅನವಶ್ಯಕ ದುಂದುವೆಚ್ಚಗಳನ್ನು ಮಾಡಿ ಜನ್ಮದಿನವನ್ನು ಆಚರಿಸುವ ಬದಲು ನಾಲ್ಕು ಜನರಿಗೆ ಉಪಯೋಗವಾಗುವಂಥ ಯಾವುದಾದರೂ ಕಾರ್ಯ ನಡೆಸಿದರೆ ಆತ್ಮತೃಪ್ತಿ ಹಾಗೂ ಖುಷಿ ಸಿಗಲಿದೆ. ಇದರಿಂದ ಐಎಸ್ಐ ಗುರುತಿನ ಹೆಲ್ಮೆಟ್ ವಿತರಿಸುತ್ತಿದ್ದೇನೆ.[ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು: ಬೈಕ್ ಭಸ್ಮ]

For his birthday an Inspector distributes Helmets to people in mysuru

ಕೆಲವರು ಪೊಲೀಸರು ಎಲ್ಲಿ ನಮ್ಮನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುತ್ತಾರೋ ಎಂಬ ಭಯದಿಂದ 50, 100 ರೂ.ಗಳನ್ನು ನೀಡಿ ಕಳಪೆ ಹೆಲ್ಮೆಟ್ ಗಳನ್ನು ಖರೀದಿಸಿ ಧರಿಸುತ್ತಾರೆ. ಇದು ಸುರಕ್ಷಿತವಾಗಿರಲಾರದು. ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ. ನಿಮ್ಮನ್ನೇ ನಂಬಿದ ಕುಟುಂಬ ನಿಮಗಾಗಿ ಕಾಯುತ್ತಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು ಮಾತನಾಡಿ ಕೇವಲ ಬೆದರಿಸಿ ದಂಡ ವಸೂಲಿ ಮಾಡುವ ಪೊಲೀಸರನ್ನಷ್ಟೇ ನೋಡಿದ್ದೇವು ಆದರೆ ನಮ್ಮ ಬಗೆಗೆ ನಿಜವಾದ ಕಾಳಜಿ ಇರುವ ಪೊಲೀಸರು ಇದ್ದಾರೆ ಎಂಬುದನ್ನು ತಿಳಿದು ಸಂತಸವಾಯಿತು ಎಂದರು. ಈ ಸಂದರ್ಭದಲ್ಲಿ ಸುಮಾರು 50ಕ್ಕೂ ಅಧಿಕ ಹೆಲ್ಮೆಟ್ ಗಳನ್ನು ವಿತರಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A cop in Mysuru distributed Helmets to the people without taking a single rupee. This is a gift to people for my birthday, Inspector Hareesh Kumar told.
Please Wait while comments are loading...