ಮೈಸೂರು: ಮೇವು ಸಾಗಿಸುತ್ತಿದ್ದ ಲಾರಿಗೆ ಬೆಂಕಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಎಚ್.ಡಿ.ಕೋಟೆ, ಅಕ್ಟೋಬರ್, 31: ಮೇವು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಗುಲಿ ಬೆಂಕಿ ಹತ್ತಿಕೊಂಡು ಸುಟ್ಟು ಬೂದಿಯಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಮಟಕೆರೆ ಗ್ರಾಮದಲ್ಲಿ ನಡೆದಿದೆ.

Fodder vehicle burnt in fire accident near HD Kote

ಮಟಕೆರೆ ಗ್ರಾಮದಿಂದ ಮೇವು ಖರೀದಿಸಿ ಲಾರಿಯಲ್ಲಿ ತುಂಬಿಕೊಂಡು ಗುಂಡ್ಲಪೇಟೆ ಕಡೆಗೆ ಹೋಗುತಿದ್ದ ವೇಳೆ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಟಕೆರೆ ಗೇಟ್ ಬಳಿ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ತಿರುವು ಪಡೆಯತಿದ್ದಾಗ ರಸ್ತೆಗೆ ಅಡ್ಡವಾಗಿ ಹಾಕಿದ್ದ ವಿದ್ಯುತ್ ತಂತಿಗೆ ಜೋಳದ ಸೋಗು ತಗುಲಿ ಬೆಂಕಿ ಹತ್ತಿಕೊಂಡಿದೆ, ಸ್ಥಳಕ್ಕೆ ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಲಾರಿಗೆ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ ಸಾರ್ವಜನಿಕರು ಚಾಲಕನಿಗೆ ಲಾರಿ ನಿಲ್ಲಿಸುವಂತೆ ತಿಳಿಸಿದ್ದಾರೆ. ಲಾರಿಯಿಂದ ಕೆಳಗಿಳಿದ ಚಾಲಕ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಲು ಮುಂದಾಗಿದ್ದಾನೆ. ಬೆಂಕಿಯು ಲಾರಿ ಪೂರ್ತಿ ವ್ಯಾಪಿಸುತ್ತಿದ್ದಂತೆ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಲಾರಿಯ ಕ್ಯಾಬಿನ್ ಸೇರಿದಂತೆ ಶೇ.40 ಭಾಗ ಸುಟ್ಟು ಹೋಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fodder vehicle was burnt in fire accident by electrical circuit near Matakere village, HD Kote taluk, Myosre district on Monday (Oct 31).
Please Wait while comments are loading...