ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ. 15 ರಿಂದ ಮೈಸೂರಿನಿಂದ ವಿಮಾನಗಳ ಹಾರಾಟ: ಪ್ರತಾಪ್ ಸಿಂಹ

By Yashaswini
|
Google Oneindia Kannada News

ಮೈಸೂರು, ಸೆಪ್ಟೆಂಬರ್ 2: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಮೈಸೂರು ವಿಮಾನ ನಿಲ್ದಾಣದಲ್ಲಿ ಸ್ಥಗಿತಗೊಂಡಿದ್ದ ವಿಮಾನಗಳ ಹಾರಾಟವನ್ನು ಮತ್ತೆ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದೇ ಸೆಪ್ಟೆಂಬರ್ 15 ರಿಂದ ವಿಮಾನಗಳ ಹಾರಾಟ ಆರಂಭವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಕೃಷ್ಣರಾಜರನ್ನು ಏಕವಚನದಲ್ಲಿ ಕರೆದಿದ್ದಕ್ಕೆ ಯದುವೀರ್ ಬೇಸರಕೃಷ್ಣರಾಜರನ್ನು ಏಕವಚನದಲ್ಲಿ ಕರೆದಿದ್ದಕ್ಕೆ ಯದುವೀರ್ ಬೇಸರ

Flight service to begin from Sep 15 from Mysuru – Chennai

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೈಸೂರು ಮತ್ತು ಚೆನ್ನೈ ನಡುವೆ ವಿಮಾನಗಳ ಹಾರಾಟ ಕೇಂದ್ರ ಸರ್ಕಾರದ ಉಢಾನ್ ಯೋಜನೆಯಡಿಯಲ್ಲಿ ಆರಂಭವಾಗಲಿದ್ದು, ಸಂಜೆ ವೇಳೆಯಲ್ಲಿ ಚೆನ್ನೈ‌ನಿಂದ ಮೈಸೂರಿಗೆ ಬಂದು, ಮತ್ತೆ ಮೈಸೂರಿನಿಂದ ಚೆನ್ನೈ ಗೆ ಹೊರಡಲಿದೆ ಎಂದರು. ಈ ಸಂಬಂಧ ಟ್ವಿಟರ್ ನಲ್ಲಿ ಕೇಂದ್ರ ವಿಮಾನಯಾನ ಖಾತೆ ಸಚಿವ ಜಯಂತ್ ಸಿನ್ಹಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

English summary
“The air service between Mysuru and Chennai will begin from September 15,” said MP Pratap Simha. “The air service will begin under Udaan project of the central government. Flight will reach Mysuru in evening and will again fly back to Chennai,” he said. He thanked minister for Civil Aviation Jayant Sinha and Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X