ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು –ಮೈಸೂರು ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 05 : ಬೆಂಗಳೂರು - ಮೈಸೂರಿನಲ್ಲಿ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೊಂದು ಸಂತಸದ ಸುದ್ದಿ. ಬಹುದಿನಗಳ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ.

ಹೌದು ಮೈಸೂರು ಬೆಂಗಳೂರು ನಡುವಿನ ರೈಲು ಹಳಿ ವಿದ್ಯುಧೀಕರಣ ಕಾಮಗಾರಿ ಸಂಪೂರ್ಣಗೊಂಡಿದೆ. ಇದೇ ಹಿನ್ನೆಲೆ ಮೊದಲ ಬಾರಿಗೆ ಈ ಮಾರ್ಗದಲ್ಲಿ ಎಲೆಕ್ಟ್ರಿಕ್ ಇಂಜಿನ್ ಟೆಸ್ಟ್ ರನ್ ಜೋಡಿ ಹಳಿಯಲ್ಲಿ ಸಂಚರಿಸಿದ್ದು ಸಫಲಗೊಂಡಿರುವುದಕ್ಕಾಗಿ ಮೈಸೂರು ರೈಲ್ವೆ ಇಲಾಖೆ ಸಿಬ್ಬಂದಿ ವರ್ಗ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಆರಂಭದ ದಿನಗಳಲ್ಲಿ ಶತಾಬ್ದಿ ಎಕ್ಸ್‍ಪ್ರೆಸ್ ರೈಲು ಪ್ರಯಾಣ ಆರಂಭಿಸಲಿದ್ದು, ನಂತರ ಇತರ ರೈಲುಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿ ಓಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

First electric train comes in Mysuru

ಮೈಸೂರು ಬೆಂಗಳೂರು ನಡುವಿನ ರೈಲು ಹಳಿ ವಿದ್ಯುಧೀಕರಣ ಪೂರ್ಣಗೊಂಡ ಪರಿಣಾಮ, ಸುರಕ್ಷತಾ ಅಧಿಕಾರಿಗಳು ಹಳಿಯ ಕ್ಷಮತೆ, ಕಾಮಗಾರಿಯನ್ನು ಟೆಸ್ಟ್ ರನ್ ಮೂಲಕ ಪರಿಶೀಲಿಸಿದ್ದಾರೆ. ಒಂದು ವೇಳೆ ಇದು ಸಫಲಗೊಂಡಲ್ಲಿ ಇನ್ಮುಂದೆ ಬೆಂಗಳೂರು -ಮೈಸೂರು ಮಾರ್ಗದ ಎಲ್ಲಾ ರೈಲು ಮಾರ್ಗಗಳು ಎಲೆಕ್ಟ್ರಿಕ್ ಇಂಜಿನ್ ಸಹಾಯದ ಮೂಲಕವೇ ಸಂಚರಿಸಲಿದೆ.

ವೇಗದೂತವಾಗಲಿದೆ ಈ ಉಗಿಬಂಡಿ : ಬೆಂಗಳೂರು - ಮೈಸೂರು ಅಥವಾ ಮೈಸೂರು - ಬೆಂಗಳೂರು ಮಾರ್ಗದಲ್ಲಿ ದಿನನಿತ್ಯ ಷ್ಟು ರೈಲುಗಳು ಸಂಚರಿಸದರೂ ಸಾಲದು. ಕಾರಣ ಜನವೋ ಜನ. ಕೇವಲ 3 ಗಂಟೆ ಅವಧಿಯಲ್ಲಿ ಸಂಚರಿಸಬೇಕಾದ ರೈಲು ಕೆಲವೊಮ್ಮೆ ಇಂಜಿನ್ ಕೆಟ್ಟು ಹೋಯಿತು ಎಂದು ಗಂಟೆಗಟ್ಟಲೇ ನಿಲ್ಲುವುದಂಟು. ಅಷ್ಟೇ ಅಲ್ಲದೇ ಇದರ ವೇಗವೂ ಕಡಿಮೆ. ಆದರೆ ಎಲೆಕ್ಟ್ರಿಕ್ ಟ್ರೈನ್ ಓಡಾಡಲೂ ಶುರುವಿಟ್ಟುಕೊಂಡರೆ ಡೀಸೆಲ್ ಇಂಜಿನ್ ಗಿಂತ ವೇಗವಾಗಿ ಸಂಚರಿಸಲಿದೆ ಎನ್ನುತ್ತಾರೆ ಅಧಿಕಾರಿ ವರ್ಗ.

ವಾಯುಮಾಲಿನ್ಯ ಹತೋಟಿಗೆ :ಸಾಮಾನ್ಯವಾಗಿ ಡೀಸೆಲ್ ಇಂಜಿನ್ ಗಳು ಹೊಗೆಸಹಿತವಾಗಿರುತ್ತದೆ. ಆದರೆ ಇನ್ಮುಂದೆ ಹಳಿಗಳಿಗೆ ಇಳಿಯಲಿರುವ ಎಲೆಕ್ಟ್ರಿಕ್ ಇಂಜಿನ್ ಇಂತಹ ಹೊಗೆರಹಿತ ಇಂಜಿನ್ ಗಳಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲದೇ ಇದರ ನಿರ್ವಹಣಾ ವೆಚ್ಚವೂ ಡೀಸೆಲ್ ಇಂಜಿನ್ ಗಿಂತ ಕಡಿಮೆ.

ಸಮಯದ ಉಳಿತಾಯ :ಮೈಸೂರಿನಿಂದ ದಿನನಿತ್ಯ 20ಕ್ಕೂ ಹೆಚ್ಚು ರೈಲುಗಳು ರಾಜ್ಯದ ಮೂಲೆ -ಮೂಲೆಗೂ ಸಂಚರಿಸಲಿದೆ.. ಇಲ್ಲಿಂದ ಬೆಂಗಳೂರಿಗೆ ತೆರಳುವ ಅನೇಕ ಗಾಡಿಗಳು ಡೀಸೆಲ್ ಇಂಜಿನ್ ನಿಂದ ಎಲೆಕ್ಟ್ರಿಕ್ ಗೆ ಬದಲಿಸಿಕೊಳ್ಳಲು 30 ನಿಮಿಸಗಳ ಕಾಲಾವದಿ ಬೇಕು. ಆದರೆ ಎಲೆಕ್ಟ್ರಿಕ್ ಇಂಜಿನ್ ಸಂಚರಿಸಿದ್ದಲ್ಲಿ ಅಲ್ಲಿ ಬದಲಿಸುವ ಪ್ರಮೇಯವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.

ಒಟ್ಟಾರೆ, ಮೈಸೂರು - ಬೆಂಗಳೂರು ನಡುವೆ ವಿದ್ಯುದ್ದೀಕರಣದ ರೈಲು ಸಂಚರಕ್ಕೆ ಗ್ರೀನ್ ಸಿಗ್ನಲ್ ಬಿದ್ದಲ್ಲಿ ಪ್ರಯಾಣಿಕರಿಗೆ ಬಹುದಿನಗಳ ವರಪ್ರಸಾದ ಸಿಕ್ಕಿದ ಅನುಭವವೇ ಸರಿ..

English summary
Electrification of the Mysuru – Bengaluru double railway track, history was created. The electric loco chugged into Mysuru railway station from Bengaluru as a part of the test run.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X