ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಬೆಟ್ಟದ ಕಪ್ಪು ನಂದಿಯು ಬಿಳಿಯಾಗಿದ್ದು ಹೇಗೆ?

By Yashaswini
|
Google Oneindia Kannada News

ಮೈಸೂರು, ಅಕ್ಟೋಬರ್ 5 : ಚಾಮುಂಡಿ ಬೆಟ್ಟ ಎಂದ ಕೂಡಲೇ ಥಟ್ಟನೆ ನೆನಪಾಗೋದೇ ತಾಯಿ ಚಾಮುಂಡಿ ಹಾಗೂ ಮಂಡಿಯೂರಿ ಕುಳಿತ ಕಪ್ಪು ಬಣ್ಣದ ನಂದಿ. ಎರಡೂ ಕಡೆ ದರ್ಶನ ಪಡೆಯದಿದ್ದರೆ ಮೈಸೂರಿಗೆ ಬಂದದ್ದೆ ವ್ಯರ್ಥವೆನಿಸುತ್ತದೆ. ಆದರೆ ಈಗ ಅಚ್ಚರಿ ಎನಿಸುವಂತೆ ಶತಮಾಗಳಷ್ಟು ಹಳೆಯದಾದ ಈ ಕಪ್ಪು ಬಣ್ಣದ ನಂದಿಯೂ ಬಿಳಿ ಬಣ್ಣಕ್ಕೆ ಪರಿವರ್ತನೆಯಾಗಿದೆ.

ಚಾಮುಂಡಿ ಬೆಟ್ಟದ ಮಧ್ಯ ಭಾಗದಲ್ಲಿ ಮಂಡಿಯೂರಿ ಕುಳಿತ ಬೃಹತ್ ಗಾತ್ರದ ಕಪ್ಪು ನಂದಿ ವಿಗ್ರಹ ಈಗ ಬಿಳಿ ನಂದಿ ವಿಗ್ರಹವಾಗಿದೆ. ವಿಗ್ರಹ ಯಾವ ಬಣ್ಣದಲ್ಲಿದೆ ಅಂತ ಕೇಳಿದರೆ ಬಹುತೇಕರ ಉತ್ತರ ಕಪ್ಪು ಎಂದೇ ಇರುತ್ತದೆ. ಏಕೆಂದರೆ, ದಶಕಗಳಿಂದ ಈ ವಿಗ್ರಹ ಇರುವುದು ಕಪ್ಪು ಬಣ್ಣದಲ್ಲಿ. ಹೀಗಾಗಿ ಬೆಟ್ಟದ ನಂದಿಯ ಯಾವುದೇ ಫೋಟೋ ನೋಡಿದರೂ ಅದು ಕಪ್ಪು ಬಣ್ಣದಲ್ಲೇ ಇದೆ. ಆದರೆ ಇಂತಹ ನಂದಿಯ ಬಣ್ಣ ಈಗ ಬಿಳಿ ಬಣ್ಣಕ್ಕೆ ಬದಲಾಗಿದೆ.

Finally Chamundeshwari hills Nandi idol back to original colour white

ಈ ವಿಗ್ರಹದ ಮೂಲ ಬಣ್ಣ ಬಿಳಿ. ಆದರೆ ಎಣ್ಣೆ ಮಜ್ಜನ ಮಾಡಿಸಿ, ಈ ವಿಗ್ರಹ ಮೂಲ ಬಣ್ಣವನ್ನು ಕಳೆದುಕೊಂಡು ಕಪ್ಪಾಗಿತ್ತು. ಈ ನಂದಿ ವಿಗ್ರಹಕ್ಕೆ ಸುಮಾರು 350 ವರ್ಷಗಳ ಇತಿಹಾಸ ಇದೆ. ನಂದಿ ವಿಗ್ರಹ 16 ಅಡಿ ಎತ್ತರ ಹಾಗೂ 24 ಅಡಿ ಅಗಲವಿದೆ. ಇದು ದೇಶದ ಮೂರನೇ ಅತಿ ಎತ್ತರದ ನಂದಿ ವಿಗ್ರಹವಾಗಿದೆ.

Finally Chamundeshwari hills Nandi idol back to original colour white

1659ರಲ್ಲಿ ಯದುವಂಶದ ದೊಡ್ಡ ದೇವರಾಜ ಒಡೆಯರ್ ಅವರು ಈ ವಿಗ್ರಹ ಪ್ರತಿಷ್ಠಾಪಿಸಿದ್ದರು. ಕಳೆದ ನಾಲ್ಕೈದು ದಶಕಗಳಿಂದ ಜನತೆ ಕಪ್ಪು ನಂದಿಯನ್ನು ನೋಡಿದ್ದರು. ಇದೀಗ ಧಾರ್ಮಿಕ ದತ್ತಿ ಇಲಾಖೆಯವರು ನಂದಿ ವಿಗ್ರಹವನ್ನು ರಾಸಾಯನಿಕದಿಂದ ಸ್ವಚ್ಛಗೊಳಿಸಿರುವುದರಿಂದ ನಂದಿ ವಿಗ್ರಹ ಸಂಪೂರ್ಣ ಬೆಳ್ಳಗಾಗಿದೆ. ಮೂಲ ರೂಪಕ್ಕೆ ಬಂದಿರುವ ನಂದಿಯನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

English summary
Finally Mysuru Chamundeshwari hills Nandi idol back to original colour white. After the effort by government to clean Nandi idol by chemicals, now it is in white colour. People throng in to the place to see Nandi idol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X