ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಬಲ ಬೆಲೆಗಾಗಿ ಎಚ್.ಡಿ.ಕೋಟೆಯಲ್ಲಿ ರೈತರ ಪ್ರತಿಭಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಎಚ್.ಡಿ.ಕೋಟೆ, ಸೆಪ್ಟೆಂಬರ್ 26: ಸಮರ್ಪಕ ನೀರು, ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳ ಈಡೇರಿಕೆಗಾಗಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಮಿನಿವಿಧಾನಸೌಧ ಮುಂಭಾಗ ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನಕಾರ್ಯದÀರ್ಶಿ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಪಾಲ್ಗೊಂಡಿದ್ದರು.

ತಾಲೂಕಿನ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿವಹಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, , ತಾರಕ ಎಡದಂಡೆ ಮತ್ತು ಬಲದಂಡೆ ನಾಲೆಗಳ ಕಾಮಗಾರಿ ಪೂರ್ಣಗೊಳಿಸಿ ಸಮರ್ಪಕವಾಗಿ ನೀರು ಹರಿಸಬೇಕು ಎಂದರು,

Farmers protest in H.D.Kote for Prime minister interference

ರೈತರು ಬೆಳೆದಿರುವ ಬೆಳೆಗೆ ಬೆಂಬಲ ಬೆಲೆ ನೀಡಿ, ಖರೀದಿ ಕೇಂದ್ರವನ್ನು ತೆರೆಯಬೇಕು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಕೇಂದ್ರಸ್ಥಾನದಲ್ಲಿ ಉಳಿದು, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ತಾಲೂಕು ಮಟ್ಟದ ರೈತರ ಸಭೆಯನ್ನು ನಿಗದಿತ ಸಮಯಕ್ಕೆ ಕರೆದು ಎಲ್ಲ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು ಎಂದರು.

ಹತ್ತಿ ಬೆಳೆಗೆ ಕನಿಷ್ಠ ಬೆಲೆಯನ್ನು ನಿಗದಿ ಮಾಡಬೇಕು, ಕಾವೇರಿ ಅಚ್ಚುಕಟ್ಟು ರೈತರನ್ನು ರಕ್ಷಣೆ ಮಾಡಿ, ಕೆರೆ ಒತ್ತುವರಿಯನ್ನು ತೆರೆವು ಮಾಡಿ ಸಂರಕ್ಷಿಸಬೇಕು, ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸಿ, ಕಾವೇರಿ ಮತ್ತು ಮಹದಾಯಿ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ಬಳಿಕ ಬೇಡಿಕೆಗಳು ಒಳಗೊಂಡ ಮನವಿ ಪತ್ರವನ್ನು ತಹಸೀಲ್ದಾರ್ ಎಂ.ನಂಜುಂಡಯ್ಯ ಅವರಿಗೆ ನೀಡಿದರು.

ತಾಲೂಕು ರೈತಸಂಘದ ಅಧ್ಯಕ್ಷ ಜಕ್ಕಹಳ್ಳಿ ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಪಳನಿಸ್ವಾಮಿ, ಮುಖಂಡರಾದ ಮಹದೇವು, ನಿಂಗಯ್ಯ, ಜೆ.ಪಿ.ನಾಗರಾಜು, ಬಸವರಾಜು, ಶಿವಲಿಂಗಪ್ಪ, ಚಿಕ್ಕಣ್ಣೇಗೌಡ, ಗೋವಿಂದೇಗೌಡ, ಬಿದರಹಳ್ಳಿ ಚಂದ್ರಶೇಖರ್, ಮಹದೇವಪ್ಪ, ದಯಾನಂದ, ದಾಸನಾಯಕ, ಬೋರೇಗೌಡ, ಮಹೇಶ್ ಪ್ರಭು, ಸಿಂಗೇಗೌಡ, ವೆಂಕಟೇಗೌಡ, ಚೌಡನಾಯಕ, ಕುಮಾರ್, ಗುರುಸ್ವಾಮಿ, ಸೆಲ್ವಕುಮಾರ್, ದೇವಮ್ಮ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

English summary
Hundreds of farmers potested in H.D.Kote taluk, Mysuru district demanding Prime minister Narendra interference to solve Cauvery issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X