ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು: ಕುಮಾರಸ್ವಾಮಿ ವಿರುದ್ಧ ರೈತರ ಪ್ರತಿಭಟನೆ

By Yashaswini
|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ರೈತರು | Oneindia Kannada

ಮೈಸೂರು, ಆಗಸ್ಟ್ 28: ದಸರಾ ಸಭೆಗೆಂದು ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರತಿಭಟನೆಯ ಬಿಸಿ ತಗುಲಿತು.

ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆ ನಡೆಯುವ ವೇಳೆಯೇ ರೈತರು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿದರು. ಸಭೆ ನಡೆಯುವಲ್ಲಿಗೆ ಬಂದ ರೈತರು ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಬಾರಿ ಸಾಂಪ್ರದಾಯಿಕ ದಸರಾ, ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿಈ ಬಾರಿ ಸಾಂಪ್ರದಾಯಿಕ ದಸರಾ, ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿ

ಈ ವೇಳೆ ಅಲ್ಲಿಗೆ ಧಾವಿಸಿದ ರೈತರು ಸಿಎಂ ಭೇಟಿ ಮಾಡಲು ಅವಕಾಶ ನೀಡುವಂತೆ ಆಗ್ರಹಿಸಿ, ರೈತರ ಕಷ್ಟವನ್ನು ಸಿಎಂ ಕೇಳುತ್ತಿಲ್ಲ, ನಾಲೆಗಳಿಗೆ ನೀರು ಹರಿಸುತ್ತಿಲ್ಲ, ಸಾಲ ಮನ್ನಾ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಸೇರಿದಂತೆ ವಿವಿವಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದರು.

Farmers protest against CM Kumaraswamy in Mysuru

ಈ ವಿಚಾರವನ್ನು ತಿಳಿದ ಕುಮಾರಸ್ವಾಮಿ ಉನ್ನತ ಮಟ್ಟದ ಸಮಿತಿ ಸಭೆ ನಿಲ್ಲಿಸಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತ ರೈತರ ಸಮಸ್ಯೆ ಆಲಿಸಿದರು. ಮೈಸೂರು ಡಿಸಿ ಅವರ ಗಮನಕ್ಕೆ ನಿಮ್ಮ ಸಮಸ್ಯೆಯನ್ನು ತಿಳಿಸಿ. ಯಾವ ಬ್ಯಾಂಕ್ ಸಮಸ್ಯೆ ಮಾಡುತ್ತಿದೆ. ಡಿಸಿ ಅವರಿಗೆ ಹೇಳಿ. ನಾನೂ ಅದರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಕೂಡಲೇ ಅವರು ಕೂಡ ಕ್ರಮ ಕೈಗೊಳ್ಳುತ್ತಾರೆ. ನಾಳೆ ಮೈಸೂರು ಡಿಸಿ ಅವರನ್ನ ಭೇಟಿ ಮಾಡಿ. ಅವರು ನಿಮ್ಮ ಸಮಸ್ಯೆಗೆ ಪರಿಹರಿಸುತ್ತಾರೆ ಎಂದು ಸಿಎಂ ಭರವಸೆ ನೀಡಿದರು.

ಸಿಎಂಗೆ ರಾಖಿ ಕಟ್ಟಿದ ತಂಗಿ
ಇನ್ನು 2006ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದ ಸಹಾಯವನ್ನು ನೆನೆದ ವಿಶೇಷ ಚೇತನ ಹೆಣ್ಣುಮಗಳು ಇಂದು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ರಾಖಿ ಕಟ್ಟಿ ಖುಷಿ ಪಟ್ಟರು.

Farmers protest against CM Kumaraswamy in Mysuru

ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ತಲಕಾಡು ಮೂಲದ ಸವಿತಾ ಎಂಬುವವರಿಗೆ ತಾತ್ಕಾಲಿಕ ಉದ್ಯೋಗ ಕೊಡಿಸಿದ್ದರು. ಈ ನೆನಪಿಗಾಗಿ ವಿಶೇಷ ಚೇತನ ಹೆಣ್ಣು ಮಗಳು ಸವಿತಾ ಅವರು ಸುತ್ತೂರಿಗೆ ತೆರಳಿ ಇಂದು ಕುಮಾರಸ್ವಾಮಿ ಅವರಿಗೆ ರಾಕಿ ಕಟ್ಟಿದರು.

ರಾಕಿ ಕಟ್ಟಿದ ನಂತರ ಬಳಿಕ ಮಾತನಾಡಿದ ಸವಿತಾ ಅವರು, ಸಹೋದರತ್ವ ಒಡಹುಟ್ಟಿದರೇ ಮಾತ್ರ ಬರುವುದಿಲ್ಲ. ಅವರು ತೋರಿಸುವ ಪ್ರೀತಿ ವಿಶ್ವಾಸದಿಂದ ಬರುತ್ತೆ. ಕುಮಾರಣ್ಣನಿಗೆ ರಾಖಿ ಕಟ್ಟಿ ಖುಷಿಯಾಗಿದೆ. ಸದ್ಯ ನಾನು ಟಿ ನರಸಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚೀಟಿ ಬರೆಯುವ ಕೆಲಸ ಮಾಡುತ್ತಿದ್ದೇನೆ ಎಂದರು. ಇದೇ ವೇಳೆ ರಾಖಿ ಕಟ್ಟಿದ ಸವಿತಾ ಅವರಿಗೆ ಬಾಯಿ ಸಿಹಿ ಮಾಡಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಶುಭ ಹಾರೈಸಿದರು.

English summary
Some farmers did protest against CM Kumaraswamy in Mysuru. Kumaraswamy talked with farmers and promise to solve them all. CM Kumaraswamy attended Dasara meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X