ರೈತಗೀತೆಗೆ ಅವಮಾನ, ಸಚಿವ ಮಹದೇವಪ್ಪಗೆ ವೇದಿಕೆಯಲ್ಲೇ ಅನ್ನದಾತರ ತರಾಟೆ

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಡಿಸೆಂಬರ್ 27 : ನಗರದ ಸ್ಕೌಟ್ಸ್ - ಗೈಡ್ಸ್ ಮೈದಾನದಲ್ಲಿ ನಡೆದ ಸಿರಿಧಾನ್ಯ ಮೇಳ ಉದ್ಘಾಟನೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ.ಮಹದೇವಪ್ಪ ಅವರು ರೈತಗೀತೆ ಹಾಡುವಾಗ ಎದ್ದು ನಿಲ್ಲಲಿಲ್ಲ. ಹಾಗೂ ಆ ವೇಳೆಯಲ್ಲಿ ಕುಳಿತಿದ್ದರು ಎಂದು ಖಂಡಿಸಿ, ರೈತರು ಸಚಿವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಬೆಂಗಳೂರು ರಾಜಕೀಯ : ಮಹದೇವಪ್ಪ ಚಿತ್ತ ರಾಮನ್ ನಗರದತ್ತ!

ಮಾಗಿ ಉತ್ಸವ ಪ್ರಯುಕ್ತ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದ್ದು, ಮೇಳದಲ್ಲಿ ಮಂಡ್ಯ, ಚಾಮರಾಜನಗರ, ರಾಮನಗರ, ಮೈಸೂರು ಜಿಲ್ಲೆಗಳ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತಗೀತೆಯನ್ನು ಹಾಡಿಸಲಾಗಿತ್ತು. ಈ ವೇಳೆ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ, ಸಿಚವ ಮಹದೇವಪ್ಪ, ಮೇಯರ್ ಎಂ.ಜೆ ರವಿಕುಮಾರ್ ಎದ್ದು ನಿಂತಿಲ್ಲ.

Farmers angry on minister Dr HC Mahadevappa

ಜನ ಪ್ರತಿನಿಧಿಗಳ ಈ ನಡವಳಿಕೆಯಿಂದ ರೈತಗೀತೆಗೆ ಅವಮಾನ ಮಾಡಿದ್ದಾರೆ. ಹಾಗೂ ಅಗೌರವ ತೋರದ್ದಾರೆ ಎಂದು ಆರೋಪಿಸಿ ತರಾಟೆಗೆ ತೆಗೆದುಕೊಂಡ ರೈತರು, 'ನಿಮಗೆ ರೈತರೆಂದರೆ ಅಸಡ್ಡೆಯೇನ್ರಿ, ಎದ್ದೇಳ್ರಿ ಮೇಲೆ' ಎಂದರು. ಅಲ್ಲದೇ ರೈತರಿಗೆ ಕೊಡುವ ಗೌರವ ಇದೇನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Farmers angry on minister Dr HC Mahadevappa for not stand for farmers song in Mysuru on Wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ