ಕೊಳವೆ ಬಾವಿಗಾಗಿ 10 ಲಕ್ಷ ಸಾಲ, ನೇಣಿಗೆ ಶರಣಾದ ರೈತ

Posted By:
Subscribe to Oneindia Kannada

ಮೈಸೂರು, ಫೆಬ್ರವರಿ 8: 10 ಲಕ್ಷ ರೂ ಸಾಲ ಮಾಡಿದರು ಕೊಳವೆ ಬಾವಿಯಿಂದ ನೀರು ಬಾರದೇ ಜಮೀನೆಲ್ಲ ಒಣಗುತ್ತಿರುವುದನ್ನು ಕಂಡ ಹೆದರಿದ ರೈತನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲ್ಲೂಕಿನ ಹಣಗೋಡು ಹೊಬ್ಬಳಿಯ ಅಬ್ಬನಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವರಾಜ(35) ನೇಣಿಗೆ ಶರಣಾದ ರೈತ. ತಮಗಿರುವ ಐದು ಎಕರೆ ಜಮೀನನಲ್ಲಿ ಬೆಳೆ ಉಳಿಸಿಕೊಳ್ಳಲು ಕೊಳವೆ ಬಾವಿ ಕೊರೆಸುವ ಉದ್ದೇಶದಿಂದ ವಿವಿಧ ಬ್ಯಾಂಕ್ ಗಳಿಂದ ಹಾಗೂ ಕೈ ಸಾಲ ಸೇರಿದಂತೆ ರು. 10 ಲಕ್ಷ ಸಾಲ ಮಾಡಿದ್ದರು.ಆದರೆ ಸರಿಯಾಗಿ ಮಳೆಯಾಗದೇ ಮತ್ತು ಕೊಳವೆ ಬಾವಿಯಲ್ಲಿಯೂ ನೀರು ಸಿಗದ ಕಾರಣ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು.[ಮೈಸೂರು: ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ]

farmer committed to suicide hunsur taluk, Mysuru

ಇದರಿಂದ ತೀವ್ರ ಜರ್ಜರಿತರಾದ ಶಿವರಾಜ್ ತಮ್ಮ ಜಮೀನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈ ಪ್ರಕರಣವು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
farmer committed to suicide Mysuru. Shivaraj (31) of hunsur taluk, hangodu hobali, habbana kuppe village hanged himself at domain.
Please Wait while comments are loading...