ಪಾಕ್ ವಿರುದ್ಧ ಭಾರತ ಗೆಲುವಿಗೆ ಮೈಸೂರಿನಲ್ಲೂ ವಿಶೇಷ ಪೂಜೆ

Posted By:
Subscribe to Oneindia Kannada

ಮೈಸೂರು, ಜೂನ್ 18 : ಕ್ರಿಕೆಟ್‌ ಅಭಿಮಾನಿಗಳಲ್ಲಿ ಕತೂಹಲ ಕೆರಳಿಸಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದಲ್ಲಿ ಭಾರತ ಚಾಂಪಿಯನ್ ಆಗಿ ಹೊರ ಹೊಮ್ಮಲಿ ಎಂದು ಮೈಸೂರಿನಲ್ಲೂ ಕ್ರೀಡಾ ಪ್ರೇಮಿಗಳು ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಿದರು.

ಭಾನುವಾರ ಕೆನಿಂಗ್ಟನ್ ಓವಲ್ ನಲ್ಲಿ ನಡೆಯಲಿರುವ ಫೈನಲ್‌ ಹಣಾಹಣಿಯಲ್ಲಿ ಭಾರತ ವಿಜಯಶಾಲಿಯಾಗಲಿ ಎಂದು ಅಭಿಮಾನಿಗಳು ನಗರದ ಗಣಪತಿ ಹಾಗೂ ಮೃತ್ಯುಂಜಯ ಸ್ವಾಮಿ‌ ದೇಗುಲದಲ್ಲಿ ಪೂಜೆ ಹೋಮ ನಡೆಸಿ ಭಾರತದ ಪರ ಜಯಘೋಷಣೆ ಕೂಗಿದರು.

Fans offer special prayers in Mysuru for India's victory against Pakistan

ಪಾಕ್ ವಿರುದ್ಧ ಭಾರತ ಗೆದ್ದು ಬರಲೆಂದು ಮೈಸೂರಿನಲ್ಲಿ ಅಷ್ಟೇ ಅಲ್ಲದೆ ಇಡೀ ದೇಶಾಧ್ಯಾಂತ ಹೋಮ. ಹವನ, ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಶ್ರಮಿಸಿದರೆ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿರುವ ಪಾಕಿಸ್ತಾನ ಚೊಚ್ಚಲ ಅವಕಾಶವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಲಿದೆ.

ಒಟ್ಟಿನಲ್ಲಿ ಇಂದಿನ ಪಂದ್ಯ ರೋಚಕವಾಗಿದ್ದು, ಭಾರತ ಟ್ರೋಫಿ ಗೆಲ್ಲುವ ಫೆವರೇಟ್ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cricket fans in Mysuru offered prayers for Team India’s victory in Champions Trophy final to be played against Pakistan at The Oval in United Kingdom on Sunday. They offered prayers at Ganapathi and Eshwara Temple on M G Road, here on Saturday. Wearing Team India jerseys, they displayed posters supporting the Indian players.
Please Wait while comments are loading...