ಮೈಸೂರಿನ ನಕಲಿ ಅಂಕಪಟ್ಟಿ ಜಾಲಕ್ಕೆ ಮಹಿಳೆಯೇ ಕಿಂಗ್ ಪಿನ್!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 22 : ನಿರುದ್ಯೋಗಿಗಳನ್ನೇ ಗುರಿಯಾಗಿಟ್ಟುಕೊಂಡು ದೇಶದ ವಿವಿಧ ಮುಕ್ತ ವಿವಿಗಳ ಪದವಿಯ ನಕಲಿ ಅಂಕಪಟ್ಟಿ ನಮೂದಿಸಿಕೊಡುವ ಮೂಲಕ ಹಣಗಳಿಸುತ್ತಿದ್ದ ಜಾಲವೊಂದನ್ನು ನಗರ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ನಕಲಿ ಅಂಕಪಟ್ಟಿ ಜಾಲ ಈ ಹಿಂದೆ ಕೂಡ ಬೆಳಕಿಗೆ ಬಂದಿದೆ. ನಂತರದ ದಿನಗಳಲ್ಲಿ ವಂಚಕರಿಂದ ಅಂಕಪಟ್ಟಿ ಪಡೆದುಕೊಂಡಿದ್ದ ಫಲಾನುಭವಿಗಳು ಹಣ ಕಳೆದುಕೊಂಡಿದ್ದಲ್ಲದೆ, ನ್ಯಾಯಾಲಯಕ್ಕೆ ಅಲೆದಾಡುತ್ತಿರುವುದೂ ಕೂಡ ಕಣ್ಣಮುಂದಿದೆ.

ಕ್ಲಬ್ ಹೆಸರಿನಲ್ಲಿ ಜೂಜು ದಂಧೆ: ಮೈಸೂರಿನಲ್ಲಿ 37 ಮಂದಿ ಬಂಧನ

ಈ ಬಾರಿ ನಕಲಿ ಅಂಕಪಟ್ಟಿಯ ಸೂತ್ರಧಾರ ವ್ಯಕ್ತಿ ಮಹಿಳೆ ಆಗಿರುವುದೇ ಕುತೂಹಲ ಹೆಚ್ಚಿಸಿದೆ! ನಗರದ ವಿವಿ ಮೊಹಲ್ಲಾ ನಿವಾಸಿ ಬಿ.ಯಶಸ್ವಿನಿ ಎಂಬಾಕೆಯೇ ನಕಲಿ ಅಂಕಪಟ್ಟಿ ಜಾಲದ ಪ್ರಮುಖ ಆರೋಪಿ ಉಳಿದಂತೆ ಬೆಳಗಾವಿ ಮೂಲದ ಬಸವರಾಜು, ಅರಸೀಕೆರೆ ಮೂಲದ ಕಿಶನ್ ಸೇರಿ ಐದಕ್ಕೂ ಹೆಚ್ಚು ಮಂದಿ ಈ ಜಾಲದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

Fake marks card business has started in Mysuru!

ಮಂಡ್ಯ ಜಿಲ್ಲೆ ಕೃ.ರಾ.ಪೇಟೆಯಲ್ಲಿ ಬಿಬಿಎಂ ವ್ಯಾಸಂಗ ಪೂರ್ಣಗೊಳಿಸಿದ್ದ ಯಶಸ್ವಿನಿ, ನಂತರ ಅಲ್ಲಿಯೇ ಟ್ಯುಟೋರಿಯಲ್ ಆರಂಭಿಸಿದ್ದಳು. ಪತಿಯಿಂದ ವಿಚ್ಛೇದನವನ್ನೂ ಪಡೆದುಕೊಂಡಿದ್ದಳು. ಆನಂತರದಲ್ಲಿ 2 ವರ್ಷಗಳ ಹಿಂದೆ ನಗರದ ಸರಸ್ವತಿಪುರಂನಲ್ಲಿ ಆಕೆ ಯಶು ಎಜುಕೇಷನ್ ಇನ್ಸ್ ಟಿಟ್ಯೂಟ್ ಎಂಬ ಸಂಸ್ಥೆ ಆರಂಭಿಸಿ ಎಸ್‍ಎಸ್‍ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡಲಾರಂಭಿಸಿದಳು. ಈ ನಡುವೆ ಬೆಳಗಾವಿ ಹಾಗೂ ತುಮಕೂರಿನ ಬಸವರಾಜು ಹಾಗೂ ಕಿಷನ್ ಪರಿಚಯವಾದ ನಂತರ ನಕಲಿ ಅಂಕಪಟ್ಟಿ ಜಾಲಕ್ಕೆ ಚಾಲನೆ ದೊರಕಿತು.

ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಯುವಕರನ್ನು ಹಾಗೂ ನಿರುದ್ಯೋಗಿ ಯುವಕರನ್ನು ಹುಡುಕುತ್ತಿದ್ದ ಈ ತಂಡ ಮೊದಲಿಗೆ ಕರ್ನಾಟಕ ಮುಕ್ತ ವಿವಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ಮುಕ್ತ ವಿವಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಸುಳ್ಳು ಹೇಳುತ್ತಾ ಯುವಕರಿಂದ ಪರೀಕ್ಷೆ ಶುಲ್ಕವಾಗಿ ಹಣ ವಸೂಲು ಮಾಡುತ್ತಿತ್ತು.

ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಮಾತೇ ಇಲ್ಲ ಎಂದು ಆಸೆ ಹುಟ್ಟಿಸಿ ಅಂಕಪಟ್ಟಿಗೆಂದು ವಿದ್ಯಾರ್ಥಿಗಳಿಂದ ತಲಾ 25 ಸಾವಿರದಿಂದ 30 ಸಾವಿರ ರೂ. ಹಣ ಪಡೆದು ಅಂಕಪಟ್ಟಿಗಳನ್ನು 50 ಮಂದಿಗೆ ವಿತರಿಸಿದೆ ಈ ತಂಡ!

ಈ ಜಾಲದ ಸುಳಿವು ಪಡೆದ ಸಿಸಿಬಿ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಗುರುವಾರ ನಜರಬಾದ್ ನಲ್ಲಿರುವ ತಾಲ್ಲೂಕು ಕಚೇರಿಯ ಗೇಟ್ ಹತ್ತಿರ ಆರೋಪಿ ಮಹಿಳೆ ಕುಳಿತಿದ್ದ ವೇಳೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಆಕೆಯ ಹಿಡಿದಿದ್ದ ಬ್ಯಾಗ್ ಪರಿಶೀಲಿಸಿದಾಗ ವಿವಿಧ ವಿವಿಗಳ ಹೆಸರಿನ ನಕಲಿ ಅಂಕಪಟ್ಟಿಗಳು ಕಂಡು ಬಂದಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜಾಲದಲ್ಲಿ ಇರುವ ಇನ್ನಿತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fake marks card business is a big headache to Karnataka government these days. Mysuru CCB police got information that, there is a group of fake marks card creators which is headed by a lady! No one has arrested yet!
Please Wait while comments are loading...