ನಂಜನಗೂಡಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ 04: ಏಳು ಎಕರೆ ಭೂಮಿಯನ್ನು ಕೇವಲ 15ಲಕ್ಷ ರೂ.ಗಳಿಗೆ ಖರೀದಿಸಿದ ನಕಲಿ ದಾಖಲೆ ಸೃಷ್ಟಿಸಿ ವಾರಸುದಾರರಿಲ್ಲದ ಭೂಮಿಯನ್ನು ಗುಳುಂ ಮಾಡಲು ಯತ್ನಿಸಿರುವ ಪ್ರಕರಣ ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಇದೇ ಭೂಮಿಯಲ್ಲಿ ಕಳೆದ ಐದಾರು ದಶಕಗಳಿಂದ ಸಾಗುವಳಿ ಮಾಡಿಕೊಂಡಿರುವ ಕುಟುಂಬ ಆತಂಕಕ್ಕೀಡಾಗಿದೆ.

ಕೆಂಬಾಲು ಗ್ರಾಮದ ಸರ್ವೆ ನಂ 212 ರಲ್ಲಿ 7 ಎಕರೆ 1 ಗುಂಟೆ ಜಮೀನು ಗ್ರಾಮದ ವೆಂಕಟರಮಣಯ್ಯ ಎಂಬುವರಿಗೆ ಸೇರಿದ್ದು ಅವರ ಕಾಲಾನಂತರ ಆತನ ಮೂವರು ಹೆಣ್ಣು ಮಕ್ಕಳು ಗ್ರಾಮದತ್ತ ಸುಳಿಯದ ಕಾರಣ ಗ್ರಾಮದ ಮಾಚಶೆಟ್ಟಿ, ವೆಂಕಟಶೆಟ್ಟಿ, ಮಶೆಟ್ಟಿ, ಮಹದೇವಶೆಟ್ಟಿ, ರಾಮನಾಯ್ಕ, ನಿಂಗನಾಯ್ಕ, ಶಿವಣ್ಣನಾಯಕ ಎಂಬುವವರು ಕಳೆದ 6 ದಶಕಗಳಿಂದ ತಲಾ ಒಂದು ಎಕರೆ ಭೂಮಿಯನ್ನು ಗುತ್ತಿಗೆ ಆದಾರದಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ.

Fake documents created to sell Agriculture land in Nanjangud Taluk

ಈ ರೈತರ ಬಳಿ ಜಮೀನಿಗೆ ಸೇರಿದ ಯಾವುದೇ ದಾಖಲಾತಿಗಳಿಲ್ಲ. ಇದನ್ನು ದುರುಪಯೋಗಪಡಿಸಿಕೊಂಡು ಇದೇ ಗ್ರಾಮದ ಕೆ.ಎಸ್.ಮಹದೇವಸ್ವಾಮಿ ಎಂಬಾತ ತನ್ನ ಪತ್ನಿ ಎಲ್.ತೇಜಸ್ವಿನಿ ಹೆಸರಿಗೆ ವೆಂಕಟರಮಣಯ್ಯರವರ ಮಗಳಾದ ಸರಸ್ವತಮ್ಮ ಎಂಬುವವರಿಂದ ಖರೀದಿ ಮಾಡಿರುವುದಾಗಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಜನವರಿ 2016 ರಲ್ಲಿ ನೋಂದಣಿ ಮಾಡಿಸಿದ್ದಾರಂತೆ.

ದಾಖಲೆ ಎಲ್ಲವೂ ನಕಲಿ: ಈ ಬಗ್ಗೆ ತಿಳಿದು ಸಾಗುವಳಿದಾರರು ಜಮೀನು ನೀಡಿದರು ಎನ್ನಲಾದ ಸರಸ್ವತಮ್ಮ ಅವರ ವಿಳಾಸಕ್ಕೆ ತೆರಳಿ ವಿಚಾರಿಸಿದಾಗ ದಾಖಲಾತಿಯಲ್ಲಿ ನೀಡಿರುವ ವಿಳಾಸ ನಕಲಿ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲ ಕೆಂಬಾಲು ಗ್ರಾಮದ ಸುತ್ತಮುತ್ತ ಎಕರೆ ಜಮೀನು ಸುಮಾರು 15 ಲಕ್ಷ ರೂ ವರೆಗೆ ಮಾರಾಟವಾಗುತ್ತಿದೆ ಆದರೆ 7 ಎಕರೆ 1 ಕುಂಟೆ ಭೂಮಿಯನ್ನು ಕೇವಲ 15 ಲಕ್ಷ ರು ಗಳಿಗೆ ಮಾರಾಟ ಮಾಡಿರುವುದು ಸಂಶಯವನ್ನು ಹುಟ್ಟು ಹಾಕಿದೆ.

Fake documents created to sell Agriculture land in Nanjangud Taluk

ಭೂಮಿ ಖರೀದಿದಾರರು ಎನ್ನಲಾದ ಕೆ.ಎಸ್.ಮಹದೇವಸ್ವಾಮಿ ಜಮೀನು ಅಳತೆ ಮಾಡಲು ಮುಂದಾಗಿದ್ದು, ಭೂಮಿಯ ಮಾಲೀಕರಾದ ವೆಂಕಟರಮಣಯ್ಯ ವಂಶದವರು ಬಂದರೆ ಮಾತ್ರ ಅವಕಾಶ ಮಾಡಿಕೊಡುವುದಾಗಿ ಸಾಗುವಳಿದಾರರು ಹೇಳುತ್ತಿದ್ದಾರೆ.

ಹುಲ್ಲಹಳ್ಳಿ ಪಿಎಸ್‍ಐ ಎನ್.ಎಂ.ಪೊಣ್ಣಚ್ಚ ಮತ್ತು ಸಿಬ್ಬಂದಿ ಬಂದೋಬಸ್ತು ನಡುವೆ ಕಂದಾಯ ಅಧಿಕಾರಿಗಳು ಸರ್ವೆ ಮಾಡಿದ್ದು, ತನಿಖೆಯಿಂದಷ್ಟೆ ನೈಜಾಂಶ ಬೆಳಕಿಗೆ ಬರಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Farmers in deep trouble: Fake documents created to sell 7 acres of Agriculture land in Kembalu village, Nanjangud Taluk, Mysuru.
Please Wait while comments are loading...