ಮೈಸೂರಿನ ಅವಧೂತ ದತ್ತಪೀಠದಲ್ಲಿ ಹಲವು ಉತ್ಸವಗಳಿಗೆ ಚಾಲನೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ.19:- ಮೈಸೂರಿನ ಅವಧೂತ ದತ್ತಪೀಠದಲ್ಲಿ ಮೇ.21ರಿಂದ 28ರವರೆಗೆ ಮೂರು ಪ್ರಮುಖ ಉತ್ಸವಗಳು ನಡೆಯಲಿವೆ ಎಂದು ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀದತ್ತ ವೆಂಕಟೇಶ್ವರ ಕ್ಷೇತ್ರದ 18ನೇ ಬ್ರಹ್ಮೋತ್ಸವ, ನಾದಮಂಟಪದ 19ನೇ ವಾರ್ಷಿಕೋತ್ಸವ, ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 75ನೇ ವಜ್ರೋತ್ಸವ ವರ್ಧಂತ್ಯುತ್ಸವ ನಡೆಯಲಿದೆ. ದೇಶವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದ್ದು, ಬರುವ ಭಕ್ತರಿಗೆ ಆಶ್ರಮದಲ್ಲಿ ಹಾಗೂ ಸಮೀಪದ ಕಲ್ಯಾಣಮಂಟಪಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಊಟೋಪಚಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.[ನಾಳೆಯಿಂದ ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ರಿಂಗಣ]

Fairs will be taking place in Ganapathi Sachchidananda Ashrama, Mysuru

ಮೇ.21ರಂದು ಸಂಜೆ 6ಗಂಟೆಗೆ ಉತ್ಸವದ ಉದ್ಘಾಟನೆಯನ್ನು ನೆರವೇರಿಸಲಾಗುತ್ತಿದ್ದು, ಸಪ್ತಾಹ ಪರ್ಯಂತ 75 ಮಂದಿ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸುವರು. ಕಲಾವಿದರು ಹಾಗೂ ಪಂಡಿತರುಗಳನ್ನು ಸನ್ಮಾನಿಸಲಾಗುವುದು. ಶ್ರೀಗಳ ಜನ್ಮದಿನದಂದು ಮೇ.26 ರಂದು ಮಧ್ಯಾಹ್ನ 3 ಗಂಟೆಗೆ ಗಿನ್ನಿಸ್ ವಿಶ್ವದಾಖಲೆ ಸಂಸ್ಥೆಯು 3 ವಿಶಿಷ್ಟ ನೀಡಲಿದೆ ಎಂದು ತಿಳಿಸಿದರು.

Fairs will be taking place in Ganapathi Sachchidananda Ashrama, Mysuru

ಮೇ 26ರಂದು ಭಗವದ್ಗೀತೆ ಪುಸ್ತಕ ಹಾಗೂ 9 ಭಾಷೆಯಲ್ಲಿ ಬ್ರೈಲ್ ಲಿಪಿಯ ಭಗವದ್ಗೀತೆ ಪುಸ್ತಕಗಳ ಮೆರವಣಿಗೆ, ಮೇ 25ರ ಸಂಜೆ ಬ್ಯಾಲೆ ನೃತ್ಯ ಪ್ರದರ್ಶನ, ಮೇ 23ರ ಸಂಜೆ ಉಸ್ತಾದ್ ಅಲಿಖಾನ್ ರವರಿಗೆ ನಾದನಿಧಿ ಬಿರುದು ಪ್ರದಾನ ಸೇರಿದಂತೆ ಇನ್ನೂ ಹತ್ತು ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಿರಿಯ ಶ್ರೀಗಳಾದ ದತ್ತ ವಿಜಯೇಂದ್ರ ತೀರ್ಥರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three important fairs will be taking place from May 21th to 28th in Ganapathi Sachchidananda Ashrama, Mysuru. Ganapathi Sachchidananda swami of the Ashram told today.
Please Wait while comments are loading...