ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಲ್ಪಾಯುಷಿ; ಈಶ್ವರಪ್ಪ ಭವಿಷ್ಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 21: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಲವೇ ದಿನಗಳಲ್ಲಿ ಬಿದ್ದು ಹೋಗಲಿದೆ ಅಪವಿತ್ರ ಸರ್ಕಾರವಾಗಲಿದೆ ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ನಿರೀಕ್ಷೆ ಇದ್ದಿದ್ದು ಬೇರೆ. ರಾಜ್ಯದ ಜನ ಎಲ್ಲರೂ ಬಿಜೆಪಿ ಸರ್ಕಾರ ಬರಬೇಕು ಅಂತಾ ನಿರೀಕ್ಷೆ ಇಟ್ಟುಕೊಂಡಿದ್ದರು. ನಂಬರ್ ಗೇಮ್ ನಲ್ಲಿ ಸರ್ಕಾರ ರಚಿಸಲು ನಮಗೆ ಹಿನ್ನಡೆಯಾಗಿದೆ. ಜೆಡಿಎಸ್, ಕೈ ಮೈತ್ರಿ ಸರ್ಕಾರ ಅಲ್ಪಾವಧಿ ಸರ್ಕಾರ ಎಂದು ಹೇಳಿದರು.

ಅಂತೂ ಇಂತೂ ಶಿವಮೊಗ್ಗದಲ್ಲಿ ಗೆದ್ದೇ ಬಿಟ್ಟರು ಕೆ.ಎಸ್.ಈಶ್ವರಪ್ಪ.!ಅಂತೂ ಇಂತೂ ಶಿವಮೊಗ್ಗದಲ್ಲಿ ಗೆದ್ದೇ ಬಿಟ್ಟರು ಕೆ.ಎಸ್.ಈಶ್ವರಪ್ಪ.!

ಅಧಿಕಾರಕ್ಕೆ ಒಂದಾಗಿರೋ ಪಕ್ಷಗಳನ್ನು ಜನರು ಕ್ಷಮಿಸುವುದಿಲ್ಲ, ಬಹುಮತ ಸಾಭೀತಾದ ಬಳಿಕ ಈ ಸರ್ಕಾರ ಕಡೆ ದಿನಗಳನ್ನು ಎಣಿಸುತ್ತದೆ. ಈ ಸರ್ಕಾರ ಪ್ರಕೃತಿ ವಿರೋಧಿ ಸರ್ಕಾರ, ಇದು ಬಹಳ ದಿನಗಳ ಕಾಲ ಉಳಿಯುವುದಿಲ್ಲ, ರಾಜ್ಯದಲ್ಲಿ ಕೊನೆಯ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಕೊನೆಯ ಮುಖ್ಯಮಂತ್ರಿ ಎಂದು ನಾವು ಮೊದಲೇ ಹೇಳಿದ್ದವು. ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ತಕ್ಕಂತೆ ನಡೆದುಕೊಂಡಿಲ್ಲ ಎಂದರು.

Eshwarappa slams Cong-JDS as most opportunistic and anti democracy

ಮುಂದಿನ ದಿನಗಳಲ್ಲಾದರೂ ಸಿದ್ದರಾಮಯ್ಯ ಅವರ ಹುದ್ದೆಗೆ ಗೌರವ ಕೊಡಲಿ. ಇಬ್ಬರು ಕೆಟ್ಟ ಪದಗಳನ್ನು ಬಳಸಿ ಅಧಿಕಾರಕ್ಕೆ ಒಂದಾಗಿದ್ದಾರೆ. ಸಿದ್ದರಾಮಯ್ಯ ಬಿಜೆಪಿ ಬೆಂಬಲ ಇಲ್ಲದಿದ್ದರೆ ಮೊದಲ ಬಾರಿಗೆ ಮಂತ್ರಿ ಆಗುತ್ತಿರಲಿಲ್ಲ. ಅವಕಾಶವಾದಿ ರಾಜಕಾರಣಿಗಳನ್ನು ಎಂದೂ ಕ್ಷಮಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಳುಗುವ ಹಡಗು, ಜೆಡಿಎಸ್ ಪಕ್ಷ ಹಿಡಿದುಕೊಂಡು ಉಸಿರಾಡುತ್ತಿದೆ. ಮೂರು ತಿಂಗಳು ಕಾಯಿರಿ. ಸರ್ಕಾರ ಉಳಿಯುತ್ತಾ ನೋಡೋಣ. ಕೈ,ಜೆಡಿಎಸ್ ಮೈತ್ರಿಗೆ ಈಶ್ವರಪ್ಪ ಸವಾಲೆಸಿದಿದ್ದಾರೆ.

English summary
Senior BJP leader K.S.Eshwarappa slammed Cong-JDS party were most opportunistic and anti democracy. He also said the unholy alliance government would be lost soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X