ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನದ ಅಂಬಾರಿ ಹೊರುವುದರಿಂದ ಆನೆಗೆ ಹಿಂಸೆಯಾಗುತ್ತದೆಯೇ?

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

Mysuru Dasara 2017 : Can Elephants bear the weight of Golden Ambari? | Oneindia Kannada

ಮೈಸೂರು, ಸೆಪ್ಟೆಂಬರ್ 18 : ಮೈಸೂರು ದಸರಾದಲ್ಲಿ ಆನೆಯು ಅಂಬಾರಿ ಹೊರುವ ವಿಚಾರದಲ್ಲಿ ಮತ್ತದೇ ಹಳೆರಾಗ ಕೇಳಿಬರುತ್ತಿದೆ. ಭಾರೀ ತೂಕದ ಚಿನ್ನದ ಅಂಬಾರಿ ಹೊರುವುದು ತ್ರಾಸದಾಯಕ, ಅಷ್ಟೇ ಅಲ್ಲದೇ ಅಂಬಾರಿ ಸಾಗಲು ಪರ್ಯಾಯ ವ್ಯವಸ್ಥೆ ಮಾಡುವ ಚಿಂತನೆ ಅನಿವಾರ್ಯ ಎಂಬ ಅಭಿಪ್ರಾಯ ಕೇಳಿಬಂದಿದೆ.

ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇಂತಹ ವಾದವನ್ನು ತಳ್ಳಿ ಹಾಕಿದ್ದು, 5 ಸಾವಿರ ಕೆ. ಜಿಗೂ ಅಧಿಕ ತೂಕವುಳ್ಳ ಆನೆಗೆ 750 ಕೆ.ಜಿ ತೂಕ ಹೊರುವುದು ಕಷ್ಟದಾಯಕವಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆ. ಜಿ ತೂಕದ ಚಿನ್ನದ ಅಂಬಾರಿ ಹೊರುವುದು ಆನೆಗಳಿಗೆ ಕಷ್ಟವಾಗಲಿದ್ದು, ಇದರ ಬದಲು ತೆರೆದ ವಾಹನವೊಂದರ ಮೇಲೆ ಅಂಬಾರಿಯನ್ನು ಕೊಂಡೊಯ್ಯುವ ಸಲಹೆಯನ್ನು ಪ್ರಾಣಿದಯಾ ಕಾರ್ಯಕರ್ತರೊಬ್ಬರು ಅರಣ್ಯ ಇಲಾಖೆಗೆ ನೀಡಿದ್ದಾರೆ. ಈ ವರದಿ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದಲ್ಲಿ ಇದು ಗೊಂದಲ ಸೃಷ್ಟಿಸಿದೆ.

Elephants can not bear burden of hundreds of Kg golden ambari: animal welfare activists

ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಪಶು ವೈದ್ಯರು ಹಾಗೂ ಹಿರಿಯ ಮಾವುತರು 5 ಸಾವಿರಕ್ಕೂ ಹೆಚ್ಚು ಕೆ. ಜಿಗೂ ಅಧಿಕ ತೂಕ ಹೊಂದಿರುವ ಆನೆಗಳಿಗೆ, 750 ಕೆ. ಜಿ ತೂಕ ಹೊರುವುದು ಅಸಾಧ್ಯವೇನಲ್ಲ, ಆನೆಗಳು ಕಾಡಿನಲ್ಲಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ನಿರಾಯಾಸವಾಗಿ ಸಾಗಿಸುತ್ತವೆ. ಅದರ ಮುಂದೆ ಚಿನ್ನದ ಅಂಬಾರಿ ಹೊತ್ತು ಸಾಗುವುದು ಏನೇನೂ ಅಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ನಡೆಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ .

ಮೈಸೂರು ದಸರಾ ಜಂಬೂ ಸವಾರಿ: ಅರ್ಜುನನಿಗೆ ಮರದ ಅಂಬಾರಿ ತಾಲೀಮು ಮೈಸೂರು ದಸರಾ ಜಂಬೂ ಸವಾರಿ: ಅರ್ಜುನನಿಗೆ ಮರದ ಅಂಬಾರಿ ತಾಲೀಮು

ಈಗಾಗಲೇ 407 ವರ್ಷ ಇತಿಹಾಸವಿರುವ ಮೈಸೂರು ದಸರಾ ಮಹೋತ್ಸವದಲ್ಲಿ ಆನೆಗಳ ಮೇಲೆಯೇ ಚಿನ್ನದ ಅಂಬಾರಿಯನ್ನು ವಿಜೃಂಭಣೆಯ ಮೆರವಣಿಗೆ ಮೂಲಕ ಸಾಗಿಸಲಾಗುತ್ತದೆ. ಈ ಹಿಂದೆ ಆಯಾಯ ಕಾಲದಲ್ಲಿ ಆಳ್ವಿಕೆ ಮಾಡುತ್ತಿದ್ದ ಅರಸರ ಕೂರಿಸಿ ಮೆರವಣಿಗೆ ಮಾಡಲಾಗುತ್ತಿತ್ತು. ಅಲ್ಲದೆ ರಾಜರ ಆಳ್ವಿಕೆ ಅವಧಿಯಲ್ಲಿ ಅಗ್ರಹಾರ, ಅಶೋಕ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ರಾಜಬೀದಿಗಳಲ್ಲಿ ಜಂಬೂ ಸವಾರಿ ಮೆರವಣಿಗೆ ಸಾಗುತ್ತಿತ್ತು. ಆ ದಿನಗಳಲ್ಲಿಯೇ ಆನೆಗಳು ಸರಾಗವಾಗಿ ಚಿನ್ನದ ಅಂಬಾರಿ ಹೊತ್ತೊಯ್ಯುತ್ತಿದ್ದು, ಜೊತೆಗೆ ವಾಪಸ್ ಆನೆಯ ಮೇಲೆ ಅಂಬಾರಿಯನ್ನು ಅರಮನೆಗೆ ತರಲಾಗುತ್ತಿತ್ತು.

Elephants can not bear burden of hundreds of Kg golden ambari: animal welfare activists

ಕಳೆದ ಐದು ವರ್ಷದಿಂದ ಜಂಬೂ ಸವಾರಿ ಮೆರವಣಿಗೆ ಆರಂಭಕ್ಕೆ ಒಂದು ಗಂಟೆ ಮುಂಚೆ ಆನೆ ಮೇಲೆ ಅಂಬಾರಿ ಕಟ್ಟಲಾಗುತ್ತದೆ. ಇದಕ್ಕೂ ಹಿಂದೆ ಹಲವು ಗಂಟೆಗಳ ಮುನ್ನವೇ ಅಂಬಾರಿ ಕಟ್ಟಿ ನಿಲ್ಲಿಸಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾವಣೆಯಾಗಿದ್ದು, ಕಲಾತಂಡಗಳು ಹಾಗೂ ಸ್ತಬ್ಧ ಚಿತ್ರಗಳು ಸಾಗಿದ ನಂತರ ಅಂತಿಮವಾಗಿ ಅತಿಥಿಗಳು ಪುಷ್ಪಾರ್ಚನೆ ಮಾಡುತ್ತಿದ್ದಂತೆ, ಅಂಬಾರಿ ಹೊತ್ತ ಆನೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ. ಇದರಿಂದ ಆನೆಗೆ ತ್ರಾಸವಾಗುವುದಿಲ್ಲ. ಇದರ ಜೊತೆಗೆ ಮಾರ್ಗ ಮಧ್ಯೆ ಪೌಷ್ಟಿಕ ಆಹಾರ, ಗ್ಲುಕೋಸ್ ನೀಡುವುದರಿಂದ ಅಂಬಾರಿ ಹೊರುವುದು ಕಷ್ಟವಾಗುವುದಿಲ್ಲ ಎಂದು ಅನುಭವಿ ಮಾವುತರು ಅಭಿಪ್ರಾಯಪಟ್ಟಿದ್ದಾರೆ.

ಅಂಬಾರಿ ಹೊರುವುದರಿಂದ ಆನೆಗಳಿಗೆ ತೊಂದರೆಯಾಗುತ್ತದೆ ಎಂದು ಯಾವ ಪ್ರಾಣಿದಯಾ ಕಾರ್ಯಕರ್ತರು ಅರಣ್ಯ ಇಲಾಖೆಗೆ ಮನವಿಯನ್ನಾಗಲೀ ಸಲಹೆಯನ್ನಾಗಲೀ ನೀಡಿಲ್ಲ. ನೂರಾರು ವರ್ಷಗಳಿಂದ ಆನೆಗಳ ಮೇಲೆಯೆ ಅಂಬಾರಿ ಹೊರಿಸುವ ಪರಂಪರೆ ನಡೆದುಬಂದಿದೆ . ದಸರೆಗೆ 50 ರಿಂದ 60 ದಿನಗಳ ಮುನ್ನವೇ ಆನೆಗಳನ್ನು ಮೈಸೂರಿಗೆ ಕರೆತಂದು ಆರೈಕೆ ಮಾಡಲಾಗುತ್ತದೆ. ಕಾಡಿನಿಂದ ಬಂದ ಆನೆಗಳಿಗೆ ಏಕಾಏಕಿ 750 ಕೆ.ಜಿ ತೂಕದ ಅಂಬಾರಿ ಹೊರಿಸುವುದಿಲ್ಲ. ಮೊದಲಿಗೆ ಆನೆಗಳಿಗೆ ಮಾಮೂಲಿ, ನಂತರ ಗಾದಿ, ತೊಟ್ಟಿಲು, ಮರಳಿನ ಮೂಟೆ ಹಾಗೂ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಿ ಅಂಬಾರಿ ಹೊರುವುದಕ್ಕೆ ಸಜ್ಜುಗೊಳಿಸಲಾಗುತ್ತದೆ. ಇದರಿಂದಅಂಬಾರಿ ಹೊರಲು ಕಷ್ಟವಾಗದು ಎನ್ನುತ್ತಾರೆ ಆನೆ ಯೋಜನೆ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.

English summary
Elephants can not bear burden of hundreds of Kg golden ambari, animal welfare activists told. The opinion comes for the elephent which will bear the burden of golden Ambari in mysuru Dasara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X