ಐರಾವತಿ ಹಡೆದಿದ್ದಾಳೆ, ತಾಯಿ ಮಗು ಆರೋಗ್ಯವಾಗಿದ್ದಾರೆ

Posted By:
Subscribe to Oneindia Kannada

ಮೈಸೂರು, ಜುಲೈ 24 : ಹದಿಮೂರು ವರುಷಗಳ ಬಳಿಕ ಮೈಸೂರು ಮೃಗಾಲಯದಲ್ಲಿ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಐರಾವತಿ ಮತ್ತು ಅಭಿಯ ಸಮಾಗಮದಿಂದ ಜಯಚಾಮರಾಜೇಂದ್ರ ಪ್ರಾಣಿ ಸಂಗ್ರಹಾಲಯದಲ್ಲಿ ಹರ್ಷದ ಹೊನಲು ಹರಿದಿದೆ.

ಮೃಗಾಲಯದಲ್ಲೇ ವಾಸವಿರುವ ಐರಾವತಿ ಎಂಬ ಹೆಣ್ಣು ಆನೆ ಕಳೆದ ಶುಕ್ರವಾರ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಹೆಣ್ಣು ಮರಿಯ ತಂದೆ ಅಭಿ ಎಂಬ ಗಂಡು ಆನೆ ಕಳೆದ 13 ವರ್ಷಗಳ ಹಿಂದೆ ಈ ಮೃಗಾಲಯದಲ್ಲಿ ಹುಟ್ಟಿದ್ದು ವಿಶೇಷವಾಗಿದೆ.

Elephant Airavati gives birth to Parvathi in Mysuru Zoo

ಶತಮಾನೋತ್ಸವ ಸಂಭ್ರದಲ್ಲಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಣ್ಣು ಆನೆ ಮರಿ ಶುಕ್ರವಾರ ಹುಟ್ಟಿದ್ದನ್ನು ಮೃಗಾಯಲದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇನ್ನು ಮರಿಯ ಆರೋಗ್ಯ ದೃಷ್ಟಿಯಿಂದ ಮಾಧ್ಯಮಗಳಿಗೆ ತಿಳಿಸಿರಲಿಲ್ಲ. ಇದಕ್ಕೆ ಪಾರ್ವತಿ ಎಂದು ಹೆಸರಿಡಲು ತೀರ್ಮಾನಿಸಲಾಗಿದೆ.

Mysuru: Yaduveer Urs is angry on media | Oneindia Kannada
Elephant Airavati gives birth to Parvathi in Mysuru Zoo

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Elephant Airavati has given birth to Parvathi in Mysuru Zoo after a gap of 13 years. Abhi, who has been in Sri Chamarajendra Zoological Gardens in Mysuru for the past 13 years is the father of this beautiful pachyderm.
Please Wait while comments are loading...