ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದ ಎಲೆಕ್ಷನ್ ಕಿಂಗ್!

Posted By:
Subscribe to Oneindia Kannada
   Karnataka Elections 2018 : ಸಿದ್ದು ವಿರುದ್ಧ ಚಾಮುಂಡೇಶ್ವರಿಯಲ್ಲಿ ಎಲೆಕ್ಷನ್ ಕಿಂಗ್ ಸ್ಪರ್ಧೆ|Oneindia Kannada

   ಮೈಸೂರು, ಏಪ್ರಿಲ್ 17: ಭಾರತೀಯ ಚುನಾವಣಾ ಇತಿಹಾಸದಲ್ಲಿ 'ಎಲೆಕ್ಷನ್ ಕಿಂಗ್' ಎಂದು ಕರೆಸಿಕೊಂಡಿರುವ ಲಿಮ್ಕಾ ದಾಖಲೆ ವಿಜೇತ ತಮಿಳುನಾಡಿನ ಡಾ. ಕೆ. ಪದ್ಮರಾಜನ್ ಅವರು ಮತ್ತೊಮ್ಮೆ ಚುನಾವಣಾ ಕಣಕ್ಕಿಳಿದಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದಿದ್ದಾರೆ.

   2014ರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧವೂ ಕಣಕ್ಕಿಳಿದು ಸೋಲು ಕಂಡಿದ್ದರು. ಸತತ ಚುನಾವಣೆಯಲ್ಲಿ ಸೋಲು ಕಂಡಿರುವ ಪದ್ಮರಾಜನ್ ಅವರು 191ನೇ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

   ತಮಿಳುನಾಡಿನ ಸೇಲಂ ಜಿಲ್ಲೆಯ ಹೋಮಿಯೋಪತಿ ವೈದ್ಯ ಕೆ.ಪದ್ಮನಾಭ ರಾಜನ್ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಮಂಗಳವಾರ(ಏಪ್ರಿಲ್ 17)ದಂದು ನಾಮಪತ್ರ ಸಲ್ಲಿಸಿದರು.

   ದೇಶದಲ್ಲಿ ಪ್ರಭಾವಿ ಅಭ್ಯರ್ಥಿಗಳು ಎಲ್ಲೇ ಕಣಕ್ಕಿಳಿದರೂ ಅವರ ವಿರುದ್ಧ ಪದ್ಮನಾಭರಾಜನ್ ಕಣಕ್ಕಿಳಿಯುತ್ತಾರೆ. ಲೋಕಸಭೆ, ವಿಧಾನಸಭೆ, ಪಂಚಾಯಿತಿ ಹೀಗೆ ಯಾವುದೇ ಚುನಾವಣೆಯಾದರೂ ಅವರು ಸ್ಪರ್ಧಿಸುತ್ತಾರೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಇವರೂ ನಾಮಪತ್ರ ಹಾಕಿದ್ದಾರೆ. ಇದು ಅವರಿಗೆ 191ನೇ ಚುನಾವಣೆಯಾಗಿದೆ.

   ಚಾಮುಂಡೇಶ್ವರಿ ಕ್ಷೇತ್ರ : ಕುರುಬರ ಮತ ಗೆದ್ದವನೇ ಬಾಸ್!

   ದೇಶದಲ್ಲಿ ನಡೆದಿರುವ 15 ಲೋಕಸಭೆ ಚುನಾವಣೆ ಸೇರಿದಂತೆ ಅಸೆಂಬ್ಲಿ ಚುನಾವಣೆಗಳಲ್ಲೂ ಪದ್ಮರಾಜನ್ ಸ್ಪರ್ಧೆಗಿಳಿದಿದ್ದಾರೆ.ಪದ್ಮರಾಜನ್ ಸ್ಥಳೀಯ ಚುನಾವಣೆಗಳಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಸ್ಪರ್ಧಿಸಿರುವುದು ವಿಶೇಷವಾಗಿದೆ. ಆದರೆ, ಎಲ್ಲಿಯೂ ಕೂಡ ಅವರು ತಮ್ಮ ಠೇವಣಿಯನ್ನು ಉಳಿಸಿಕೊಂಡಿಲ್ಲ. ಆದರೂ ಚುನಾವಣೆಗೆ ಸ್ಪರ್ಧಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಸಂತಸ ಬರುತ್ತದೆಯಂತೆ. ಪದ್ಮರಾಜನ್ ಅವರ ರಾಜಕೀಯ ಇತಿಹಾಸ ಮುಂದೆ ನಿಮಗಾಗಿ

   ಎಲ್ಲವೂ ದಾಖಲೆಗಾಗಿ ಎನ್ನುತ್ತಾರೆ ರಾಜನ್

   ಎಲ್ಲವೂ ದಾಖಲೆಗಾಗಿ ಎನ್ನುತ್ತಾರೆ ರಾಜನ್

   ನಾನು 1988ರಿಂದಲೂ ಚುನಾವಣೆಗೆ ಸ್ಪರ್ಧಿಸುತ್ತ ಬಂದಿದ್ದೇನೆ. ನನಗೆ ಸೋಲು-ಗೆಲುವಿಗಿಂತಲೂ ದಾಖಲೆ ನಿರ್ಮಿಸಬೇಕೆಂಬುದೇ ಪ್ರಮುಖ ಉದ್ದೇಶ ಎನ್ನುತ್ತಾರೆ. ಗಿನ್ನಿಸ್ ದಾಖಲೆ ನಿರ್ಮಾಣಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರ ಮಾಡುವುದಿಲ್ಲ. ದಾಖಲೆಗಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಎಂದಿದ್ದಾರೆ.

   ಹಳ್ಳಿಯಿಂದ ದಿಲ್ಲಿ ತನಕ, ಜಿಲ್ಲಾ ಪಂಚಾಯಿತಿಯಿಂದ ದೇಶದ ಪ್ರಥಮಪ್ರಜೆ ಚುನಾವಣೆ ತನಕ ಹೋಮಿಯೋಪತಿ ಡಾಕ್ಟರ್ ಕೆ ಪದ್ಮರಾಜನ್ ಸ್ಪರ್ಧಿಸಿದ್ದಾರೆ.

   ಲೋಕಸಭೆ, ವಿಧಾನ ಪರಿಷತ್, ವಿಧಾನ ಸಭೆ, ರಾಜ್ಯಸಭೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ನಗರ ಪಾಲಿಕೆ, ತಾಪಂ, ಜಿಪಂ ಸೇರಿದಂತೆ ಪ್ರತಿ ಹಂತದ ಚುನಾವಣೆಗೂ ಸ್ಪರ್ಧಿಸಿದ್ದಾರೆ.

   ಪದ್ಮರಾಜನ್ ಅವರ ಚುನಾವಣಾ ಚಿನ್ಹೆ ಬಲೂನ್

   ಪದ್ಮರಾಜನ್ ಅವರ ಚುನಾವಣಾ ಚಿನ್ಹೆ ಬಲೂನ್

   ಕರ್ನಾಟಕ ಲೋಕಸಭೆಯಿಂದ 1996ರಲ್ಲಿ ಸಿ. ನಾರಾಯಣಸ್ವಾಮಿ, 2004ರಲ್ಲಿ ಬೀದರ್, 2009ರಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದರು. 2013ರಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧಿಸಿದ್ದರು. ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಮಿಳುನಾಡು ಮೂಲದ ಡಾ.ಕೆ.ಪದ್ಮರಾಜನ್ ಸಲ್ಲಿಸಿರುವ ನಾಮಪತ್ರದಲ್ಲಿ ಹಲವು ದೋಷಗಳಿತ್ತು. ಪಕ್ಷೇತರ ಅಭ್ಯರ್ಥಿಗೆ 10 ಸೂಚಕರ ಅವಶ್ಯಕತೆ ಇತ್ತು. ಯಾವುದೇ ಷರತ್ತು ಪಾಲಿಸದೆ ಸಲ್ಲಿಸಿದ್ದ ನಾಮಪತ್ರ ಅನುಮೋದಕರಿಲ್ಲದೆ ಕಸದ ಬುಟ್ಟಿ ಸೇರಿತ್ತು. ಇಲ್ಲಿ ತನಕ 12-15 ಲಕ್ಷ ಖರ್ಚು ಮಾಡಿರುವ ಪದ್ಮರಾಜನ್ ಅವರಿಗೆ ರಾಷ್ಟ್ರ್ರಪತಿ ಚುನಾವಣೆಯಿಂದ ಮಾತ್ರ ರೀಫಂಡ್ ಬಂದಿದೆಯಂತೆ.

   ವಿವಿಧ ರಾಜ್ಯಗಳಲ್ಲಿ ಪದ್ಮರಾಜನ್ ಸ್ಪರ್ಧೆ

   ವಿವಿಧ ರಾಜ್ಯಗಳಲ್ಲಿ ಪದ್ಮರಾಜನ್ ಸ್ಪರ್ಧೆ

   ತಮಿಳುನಾಡು, ಪುದುಚೇರಿ, ಕೇರಳ, ಅಸ್ಸಾಂ, ಕರ್ನಾಟಕ ರಾಜ್ಯಗಳಿಂದ ರಾಜ್ಯಸಭೆಗೆ 28 ಬಾರಿ ಸ್ಪರ್ಧಿಸಿರುವ ಪದ್ಮರಾಜನ್, ವಿಧಾನಸಭಾ ಚುನಾವಣೆಗೆ 46 ಬಾರಿ ಸ್ಪರ್ಧಿಸಿದ್ದಾರೆ. 1988ರಲ್ಲಿ ಮೆಟ್ಟೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ನಂತರ ರಾಣಿಪೇಟ್, ಪೆರುಂದರಿ, ಮೈಲಾಪೂರ, ಆಂಧ್ರಪ್ರದೇಶದ ಕಡಪ, ಕೇರಳದ ತಿರುರಂಗಡಿ, ಅಟ್ಟೂರು, ಬೃಗೂರು, ಪುಡುಕೊಟ್ಟಿ, ಅರುಪ್ಪುಕೊಟ್ಟಿ, ತಿರುಚ್ಚಿ-2, ಆಂಡಿಪೆಟ್ಟಿ, ಸೈದಪೆಟ್ಟಿ, ತ್ರೀರುವಲ, ಕಂಚಿಪೂರಂ, ಕುಮಿಡಿಪೊಂಡಿ, ಅಕ್ಸಿಕೊಂಡೆ, ಪಯ್ಯಾನೂರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ.

   ಟೈರ್ ರಿಮೋಲ್ಡಿಂಗ್ ವ್ಯವಹಾರ ಮಾಡುತ್ತಿದ್ದಾರೆ

   ಟೈರ್ ರಿಮೋಲ್ಡಿಂಗ್ ವ್ಯವಹಾರ ಮಾಡುತ್ತಿದ್ದಾರೆ

   ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಮೂಲತಃ ಹೋಮಿಯೋಪತಿ ವೈದ್ಯರಾಗಿರುವ 59 ವರ್ಷದ ಪದ್ಮರಾಜನ್ ಟೈರ್ ರಿಮೋಲ್ಡಿಂಗ್ ವ್ಯವಹಾರ ನಡೆಸುತ್ತಿದ್ದಾರೆ.
   * 1988ರಲ್ಲಿ ಸಿಪಿಎಂನ ಮಾಜಿ ಶಾಸಕ ಸೆರಂಗನ್ ವಿರುದ್ಧ ಮೊದಲ ಸ್ಪರ್ಧೆ.

   *1997ರಲ್ಲಿ ಕೆ.ಆರ್.ನಾರಾಯಣ್, 2002ರಲ್ಲಿ ಎ.ಪಿ.ಜೆ.ಅಬ್ದುಲ್ ಕಲಾಂ, 2007ರಲ್ಲಿ ಪ್ರತಿಭಾ ಪಾಟೀಲ, 2012ರಲ್ಲಿ ಪ್ರಣಬ್ ಮುಖರ್ಜಿ ವಿರುದ್ಧ ಸ್ಪರ್ಧೆ.
   * ಉಪ ರಾಷ್ಟ್ರಪತಿ ವಿರುದ್ಧ 1997ರಲ್ಲಿ ಕೃಷ್ಣಕಾಂತ, 2002ರಲ್ಲಿ ಭೈರೋನ್ ‌ಸಿಂಗ್ ಶೆಖಾವತ್, 2007 ಮತ್ತು 2012ರಲ್ಲಿ ಎರಡು ಬಾರಿ ಹಮೀದ್ ಅನ್ಸಾರಿ ವಿರುದ್ಧ ಕಣಕ್ಕೆ
   * ಪದ್ಮರಾಜನ್ ಲೋಕಸಭೆ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಒಟ್ಟು 25ಕ್ಕೂ ಅಧಿಕ ಬಾರಿ ಸ್ಪರ್ಧೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Elections 2018: Limca Record Holder, Election King Dr. K Padmarajan today filed nomination from Chamundeshwari Assembly Constituency in Mysuru. Padmarajan is contesting against CM Siddaramaiah.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ