ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡು ಉಪಚುನಾವಣಾ ಅಕ್ರಮ ತಡೆಗೆ ಬಿಗಿ ಕ್ರಮ

ಚುನಾವಣೆ ಶಾಂತ ರೀತಿಯಲ್ಲಿ ಮತ್ತು ಅಕ್ರಮ ರಹಿತವಾಗಿ ನಡೆಯಬೇಕೆಂಬ ಉದ್ದೇಶದಿಂದ ತಾಲ್ಲೂಕಿನ ಆಯಕಟ್ಟಿನ ಸ್ಥಳಗಳಲ್ಲಿ 15 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅಬಕಾರಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಈ ಚೆಕ್ ಪೋಸ್ಟ್ ಗಳು ಮಾದಕ ವಸ್ತ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 17: ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

ಚುನಾವಣೆ ಶಾಂತ ರೀತಿಯಲ್ಲಿ ಮತ್ತು ಅಕ್ರಮ ರಹಿತವಾಗಿ ನಡೆಯಬೇಕೆಂಬ ಉದ್ದೇಶದಿಂದ ತಾಲ್ಲೂಕಿನ ಆಯಕಟ್ಟಿನ ಸ್ಥಳಗಳಲ್ಲಿ 15 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅಬಕಾರಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಈ ಚೆಕ್ ಪೋಸ್ಟ್ ಗಳು ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ.[ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲ್ಲ : ಹೆಚ್.ಡಿ.ದೇವೇಗೌಡ ಸ್ಪಷ್ಟನೆ]

Election commission taking By election precautions in Nanjangud

ಚೆಕ್‌ಪೋಸ್ಟ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಅಬಕಾರಿ ಸಿಬ್ಬಂದಿಗಳನ್ನುನಿಯೋಜಿಸಲಾಗಿರುತ್ತದೆ. ಅಬಕಾರಿ ಇಲಾಖೆಯ ನೋಡಲ್ ಅಧಿಕಾರಿಯಾಗಿ ಮೈಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಎಂ. ತಮ್ಮಣ್ಣ ಇವರನ್ನು ನಿಯೋಜಿಸಲಾಗಿರುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ನಂಜನಗೂಡು ತಾಲ್ಲೂಕು ಅಬಕಾರಿ ನಿರೀಕ್ಷಕ ಜಿ.ವಿ.ಪದ್ಮಾವತಿ ಇವರು ದೂರುಗಳನ್ನು ಸ್ವೀಕರಿಸಲಿದ್ದಾರೆ.[ನಂಜನಗೂಡು: ನಾಮಪತ್ರ ಸಲ್ಲಿಕೆಗೆ ಮಾರ್ಚ್ 21 ಕಡೆಯ ದಿನಾಂಕ]

ಚುನಾವಣೆಯು ಶಾಂತ ಹಾಗೂ ಮುಕ್ತ ರೀತಿಯಲ್ಲಿ ನಡೆಸುವ ಉದ್ದೇಶದಿಂದ, ಅಕ್ರಮ ಮದ್ಯ ಹೊಂದುವಿಕೆ, ಸಾಗಾಣಿಕೆ, ಮಾರಾಟಗಳನ್ನು ಪತ್ತೆಹಚ್ಚುವ ಹಿನ್ನೆಲೆಯಲ್ಲಿ ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಕಾರ್ಯನಿರ್ವಹಿಸಲು ಸಂಚಾರಿ ತಂಡ (ಮೊಬೈಲ್ ಸ್ಕ್ವಾಡ್)ಗಳನ್ನು ಸಹನಿಯೋಜಿಸಲಾಗಿರುತ್ತದೆ.

English summary
To prevent illegal supply of drugs 15 check posts have been established in Najanagud district. Election commission is taking precautionary measures to make by election peaceful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X