ಕ್ಷುಲ್ಲಕ ವಿಷಯಕ್ಕೆ ವೃದ್ಧರ ಮೇಲೆ ಗಾಜಿನ ಬಾಟ್ಲಿಂದ ಹಲ್ಲೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮೇ 10 : ಕ್ಷುಲ್ಲಕ ವಿಚಾರಕ್ಕಾಗಿ ವೃದ್ದರೊಬ್ಬರ ಮೇಲೆ ನಾಲ್ಕು ಮಂದಿಯ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೋಮನಹಳ್ಳಿ ಗ್ರಾಮದ ಜವರೇಗೌಡ(65) ಅವರು ಗಂಭೀರವಾಗಿ ಗಾಯಗೊಂಡವರಾಗಿದ್ದು, ಇದೇ ಗ್ರಾಮದ ಸಚಿನ್, ಕವಿತ, ಸನತ್, ರಘು ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.

ಮನೆಯ ಮುಂದೆ ತಿರುಗಾಡುವ ವಿಚಾರವಾಗಿ ಜವರೇಗೌಡ ಕುಟುಂಬದ ಜತೆ ಜಗಳಕ್ಕಿಳಿದ ಆರೋಪಿಗಳು ಜವರೇಗೌಡ ಅವರಿಗೆ ಗಾಜಿನ ಖಾಲಿ ಬಾಟಲ್ ನಿಂದ ತಲೆಯ ಭಾಗಕ್ಕೆ ಹಾಗೂ ಹೊಟ್ಟೆಯ ಭಾಗಕ್ಕೆ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ. [ಆಯುಧ ಪೂಜೆಯಂದು ಹೆಂಡಕ್ಕಾಗಿ ತಾಯಿಯನ್ನು ಬಲಿ ಪಡೆದ ಮಗ]

Elderly person attacked over trivial reason in KR Pet

ಇದರಿಂದ ತೀವ್ರ ರಕ್ತಸ್ರಾವಗೊಂಡು ಅಸ್ವಸ್ಥಗೊಂಡಿದ್ದ ಜವರೇಗೌಡ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಈ ಘಟನೆ ಕುರಿತು ಗಾಯಾಳು ಜವರೇಗೌಡ ಅವರ ಪುತ್ರ ಎಸ್.ಜೆ. ಮೋಹನ್‌ಕುಮಾರ್ ಅವರು ಕೆಆರ್ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. [ಆಸ್ತಿಗಾಗಿ ಮಹಿಳೆ ಮೇಲೆ ದಾಯಾದಿಗಳಿಂದ ಭೀಕರ ಹಲ್ಲೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An elderly person of 65 years age has been attacked by four people in Akkihebbalu village in KR Pet taluk in Mysuru district. The accused hit Jaware Gowda with bottle on his head and stomache. Jaware Gowda has been admitted to govt hospital in KR Pet.
Please Wait while comments are loading...