ಸಮ್ಮೇಳನಕ್ಕೂ ತಟ್ಟಿದ ನಕಲಿ ಭೂತ : ರಸೀದಿಗಳೇ ಡೂಪ್ಲಿಕೇಟ್

Posted By:
Subscribe to Oneindia Kannada

ಮೈಸೂರು, ನವೆಂಬರ್ 25 : ಮೈಸೂರಿನ 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಕಲಿ ನೋಂದಣಿಗಳ ಹಾವಳಿ ಹೆಚ್ಚುತ್ತಿದ್ದು, ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ನೋಂದಣಿಯನ್ನು ನಕಲಿ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಸಾಹಿತ್ಯ ಸಮ್ಮೇಳನ : ನವೆಂಬರ್ 25ರ ಕಾರ್ಯಕ್ರಮ ಪಟ್ಟಿ

ಈ ಬಗ್ಗೆ ನೋಂದಣಿ ಸಮಿತಿ ಅಧ್ಯಕ್ಷ ಎಚ್.ಎ ವೆಂಕಟೇಶ್ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರಿಗೆ ದೂರು ನೀಡಿದ್ದಾರೆ. ಸಾಹಿತ್ಯ ಸಮ್ಮೆಳನದ ಕಿಟ್ ರಶೀದಿ ನಕಲಿ ಮಾಡಿ ಹಂಚುತ್ತಿದ್ದ ವ್ಯಕ್ತಿಯೋರ್ವನನ್ನು ಲಕ್ಷ್ಮಿಪುರಂ ಠಾಣೆ ಪೊಲೀಸರು ಬಂಧಿಸಿದ ಘಟನೆ ಶನಿವಾರ ನಡೆದಿದೆ.

Duplicate receipts baffle the Sammelana organizers

ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಾವಿರಾರು ಕಿಟ್ ಗಳ ರಶೀದಿ ನಕಲಿ ಆಗಿರುವ ಸಾಧ್ಯತೆ ಇದ್ದು, ಅಂದಾಜು ಹತ್ತು ಸಾವಿರ ಕಿಟ್ ವಿತರಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು.

ಸಾಹಿತ್ಯ ಸಮ್ಮೇಳನದಲ್ಲಿ ಕಳ್ಳರ ಕೈಚಳಕ

Duplicate receipts baffle the Sammelana organizers

ಈ ಸಮ್ಮೇಳನದ ವೇದಿಕೆ ಬಲಬದಿ ಎಲ್ಲಾ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಕಿಟ್ ವಿತರಿಸಿ ನಂತರ ರಶೀದಿ ಕೊಡಲಾಗುತ್ತಿತ್ತು. ಆದರೆ ಈ ರಶೀದಿಯನ್ನೆ ನಕಲಿ ಮಾಡಿ ಸಾವಿರಾರು ಕಿಟ್ ಪಡೆಯಲಾಗಿದೆ. ಈ ಕಾರಣಕ್ಕೆ ನಿನ್ನೆ ಹಾಗೂ ಇಂದು ಕಿಟ್ ಸಿಕ್ಕಿಲ್ಲ ಎಂದು ಗಲಾಟೆ ಕೂಡ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Duplicate receipts have baffled the 83rd Kannada Sahitya Sammelana organizers in Mysuru. Fake receipts for sammelana kit are being distributed in many places. A complaint has been filed with D Randeep.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ