ಮೈಸೂರು ಮೃಗಾಲಯದಲ್ಲಿ ಮತ್ತೊಂದು ಪಕ್ಷಿ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 5 : ಮೈಸೂರಿನ ಮೃಗಾಲಯದಲ್ಲಿ ಹೆಚ್5ಎನ್8 ವೈರಸ್ ಪತ್ತೆ ಹಿನ್ನೆಲೆಯಲ್ಲಿ ಎಷ್ಟೇ ಜಾಗರೂಕತೆ ವಹಿಸುತ್ತಿದ್ದರೂ ಪಕ್ಷಿಗಳು ಮತ್ತೆ ಮರಣವನ್ನಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಗುರುವಾರ ಮೃಗಾಲಯದಲ್ಲಿ ಸ್ಪಾಟ್ ಬಿಲ್ಡ್ ಪೆಲಿಕಾನ್ ಜಾತಿ ಹೆಸರಿನ ಪಕ್ಷಿಯೊಂದು ಮೃತಪಟ್ಟಿದ್ದು, ಮೃತ ಪಕ್ಷಿಯ ಮಾದರಿಯನ್ನು ಲ್ಯಾಬ್ ಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಮೃಗಾಲಯದ ಆಡಳಿತ ವರ್ಗ ಈಗಾಗಲೇ ಮೃಗಾಲಯಕ್ಕೆ ರಜೆ ಘೋಷಿಸಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ವಲಸೆ ಹಕ್ಕಿಯೊಂದು ಮೃತಪಟ್ಟಿರುವುದು ಮೃಗಾಲಯದ ಅಧಿಕಾರಿಗಳಿಗೆ ತಲೇನೋವಾಗಿ ಪರಿಣಮಿಸಿದೆ. ಪಕ್ಷಿ ಮೃತ ಪಟ್ಟಿರುವ ಮಾಹಿತಿಯನ್ನು ಮೃಗಾಲಯ ಮೂಲಗಳು ಖಚಿತ ಪಡಿಸಿವೆ.

Due to infection birds died in zoo Thursday other one died

ಮೈಸೂರು ವಿವಿ ಪರೀಕ್ಷಾಂಗ ಕುಲಪತಿ ನೇಮಕ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರಾಗಿ ಪ್ರೊ.ಜೆ.ಸೋಮಶೇಖರ್ ಅವರನ್ನು ನೇಮಕ ಮಾಡಲಾಗಿದೆ.

Due to infection birds died in zoo Thursday other one died

ಕುವೆಂಪು ವಿಶ್ವವಿದ್ಯಾನಿಲಯದ ಆಡಳಿತ ಕುಲಸಚಿವರಾಗಿ ಪ್ರೊ.ಸೋಮಶೇಖರ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಕುಲಸಚಿವ ಪ್ರೊ.ರಾಜಣ್ಣ ಅವರಿಗೇ ಪರೀಕ್ಷಾಂಗ ವಿಭಾಗದ ಕುಲಸಚಿವ ಹುದ್ದೆಯ ಜವಾಬ್ದಾರಿಯನ್ನು ವಹಿಸಿತ್ತು. ಇದೀಗ ಈ ಹುದ್ದೆಗೆ ಪ್ರೊ.ಜೆ.ಸೋಮಶೇಖರ್ ಅವರನ್ನು ನೇಮಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಬಲ್ಲ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Due to infection birds died in zoo. So, to take some remedial measures zoo will be closed for public.Thursday another one bird were deid.
Please Wait while comments are loading...