ಅಹವಾಲು, ಸನ್ಮಾನ ಸ್ವೀಕಾರದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಬಿಜಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 1: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಎಸ್.ಯತೀಂದ್ರ ರಾಜಕೀಯವಾಗಿ ಗುರುತಿಸಿಕೊಳ್ಳಲು ಆರಂಭಿಸಿದ್ದು, ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಾರ್ವಜನಿಕರಿಂದ ಅಹವಾಲು ಕೇಳುತ್ತಿದ್ದು, ಕಾರ್ಯಕರ್ತರಿಂದ ಅಭಿನಂದನೆಯನ್ನೂ ಸ್ವೀಕರಿಸುತ್ತಿದ್ದಾರೆ. ಈ ಎಲ್ಲವನ್ನೂ ಗಮನಿಸಿದರೆ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರಿಗೆ ಉತ್ತರಾಧಿಕಾರಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ.[ಕಾರ್ಯಕರ್ತರ ಒತ್ತಡಕ್ಕೆ ಮಣಿದರೆ ಸಿಎಂ ಪುತ್ರ ಡಾ.ಯತೀಂದ್ರ?]

dr yatindra-ahavalu

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶುಭ ಹಾರೈಸಿದ ನಂತರ ತಾವಾಯಿತು ತಮ್ಮ ವೈದ್ಯ ವೃತ್ತಿಯಾಯಿತು ಎಂಬಂತೆ ಇದ್ದ ಯತೀಂದ್ರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅಪ್ಪನೊಂದಿಗೆ ವೇದಿಕೆಯನ್ನು ಕೂಡ ಹಂಚಿಕೊಂಡಿರಲಿಲ್ಲ.

ಅಯ್ಯೋ ರಾಜಕೀಯ ನನಗೇಕೆ? ಅಣ್ಣ ರಾಕೇಶ್ ಮಾಡಿಕೊಳ್ಳಲಿ ಎಂಬಂತಿದ್ದರು. ಇದಕ್ಕೆ ಕಾರಣವೂ ಇತ್ತು. ಅದಾಗಲೇ ಸಾರ್ವಜನಿಕ ವಲಯದಲ್ಲಿ ರಾಕೇಶ್ ಸಿದ್ದರಾಮಯ್ಯ ಕಾಣಿಸಿಕೊಂಡಿದ್ದರು. ಜನ ಕೂಡ ಅವರನ್ನು ಮುಖಂಡ ಎಂದು ಒಪ್ಪಿಕೊಂಡಿದ್ದರು.
ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಜಕೀಯ ವರ್ಚಸ್ಸು ಗಳಿಸಿದ್ದರು.[ರಾಜಕೀಯ ಸೇರಲು ಒತ್ತಡ ಇರುವುದು ನಿಜ: ಯತೀಂದ್ರ ಸಿದ್ದರಾಮಯ್ಯ]

dr yatindra sanmaana

ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಇವತ್ತು ಅವರಿಲ್ಲ. ಆದರೆ ಸಿದ್ದರಾಮಯ್ಯ ಅವರಂತಹ ನಾಯಕರ ಬಳಿಕ ಮತ್ತೊಬ್ಬ ಕುಡಿ ರಾಜಕೀಯದಲ್ಲಿರಬೇಕು ಎನ್ನುವುದು ಬಹಳಷ್ಟು ಮಂದಿ ಬಯಕೆಯಾಗಿದ್ದು, ಹಲವು ಮುಖಂಡರು, ಕಾರ್ಯಕರ್ತರು ಇದೀಗ ಒತ್ತಾಯ ಮಾಡಿ ಯತೀಂದ್ರ ಅವರನ್ನು ರಾಜಕೀಯಕ್ಕೆ ಎಳೆದು ತರುವ ಪ್ರಯತ್ನ ಮಾಡಿದ್ದಾರೆ.

ಈಗ ಎಲ್ಲೆಡೆ ಡಾ.ಯತೀಂದ್ರ ಕಾಣಿಸತೊಡಗಿದ್ದಾರೆ. ಅಹವಾಲು ಸ್ವೀಕಾರ, ಸನ್ಮಾನ ಹೀಗೆ ನಡೆಯುತ್ತಿದೆ. ತಂದೆಯವರ ಕ್ಷೇತ್ರವಾದ ವರುಣಾಗೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ ಬಂದಿದ್ದಾರೆ. ರಾಜಕೀಯವಾಗಿ ಬೆಳೆಯಬೇಕಾದರೆ ಏನೆಲ್ಲ ಮಾಡಬೇಕೋ ಅವೆಲ್ಲವನ್ನೂ ಮಾಡಲು ಹೊರಟಿದ್ದಾರೆ. ಮುಂದೆ ಅವರ ನಡೆ ಏನು, ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief minister Siddaramaiah's son Dr.Yatindra now busy in listening grievience from public and felicitation from party workers in Mysuru. He regularly visiting Varuna and Chamundeshwari constituency.
Please Wait while comments are loading...