ಮೈಸೂರಿನಲ್ಲಿ ಸಿಕ್ಕಿದ್ದು ಸ್ಪೋಟಕ ಅಲ್ಲ; ಕಮೀಷನರ್

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 20: ನಗರದ ಪೀಪಲ್ಸ್ ಪಾರ್ಕ್‌ನಲ್ಲಿ ಇಂದು ಬೆಳಿಗ್ಗೆ ದೊರೆತ ಅನುಮಾನಾಸ್ಪದ ವಸ್ತು ಸ್ಫೋಟಕ ಅಲ್ಲ ಎಂದು ಪೊಲೀಸ್ ಕಮಿಷನರ್ ಸುಬ್ರಹ್ಮಣ್ಣೇಶ್ವರ ರಾವ್ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು: ಪಾರ್ಕ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚತ ಕರೆ

ಸುಮಾರು 50 ಶೆಲ್ ಇರುವ ಯುಪಿಸ್ ಮಾದರಿಯ ಪವರ್ ಬ್ಯಾಂಕ್ ಇದಾಗಿದ್ದು, ಭಯಪಡುವ ಅಗತ್ಯವಿಲ್ಲ. ಇದು ಕಾರ್ಖಾನೆಯಲ್ಲಿ ತಯಾರಿಸಿದ ಬ್ಯಾಟರಿ ಆಗಿದೆ ಅಷ್ಟೆ ಎಂದಿದ್ದಾರೆ.

Doubtful thing found in Mysuru is not bomb

ಇಂದು ಬೆಳಿಗ್ಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದ ಅನಾಮಿಕ ವ್ಯಕ್ತಿಯೊಬ್ಬ ಪಾರ್ಕ್‌ವೊಂದರಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದ. ಅದಕ್ಕೆ ಸರಿಯಾಗಿ ಪೀಪಲ್ಸ್ ಪಾರ್ಕ್‌ನಲ್ಲಿ ಟೇಪು ಸುತ್ತಿದ್ದ ವಸ್ತುವೊಂದು ದೊರೆತು ಆತಂಕ ಉಂಟುಮಾಡಿತ್ತು.

ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಬಂದು ವಸ್ತುವನ್ನು ಪರಿಶೀಲನೆ ನಡೆಸಿ, ತೆರೆದರೆ ಅದರೊಳಗೆ ಬ್ಯಾಟರಿಗಳು ಪತ್ತೆಯಾಗಿದ್ದವು. ಇದೀಗ ಪೊಲೀಸರು ಈ ಬಗ್ಗೆ ಸ್ಪಷ್ಟಣೆ ನೀಡಿದ್ದು, ಅವು ಕೇವಲ ಬ್ಯಾಟರಿಗಳಷ್ಟೆ ಸ್ಫೋಟಕಗಳಲ್ಲ ಎಂದಿದ್ದಾರೆ.

Doubtful thing found in Mysuru is not bomb

ಈ ವಸ್ತುವನ್ನು ಯಾರು ಪಾರ್ಕ್‌ನಲ್ಲಿ ಇಟ್ಟು ಹೋಗಿದ್ದಾರೆ ಹಾಗೂ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಬೆದರಿಸಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಯಿತಿದ್ದು, ಸುತ್ತಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru police commissioner clarifies that the doubtful thing found in Mysuru peoples park is not bomb. some on packed batteries in a cover and left in park. investigation in on to find out who left this thing in park and who did threat call to police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ