ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಡಿ ಕೊಲೆ : ಜೆಡಿಎಸ್ ನಗರಸಭಾ ಸದಸ್ಯನಿಗೆ ಜೀವಾವಧಿ ಶಿಕ್ಷೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 27 : ಹುಣಸೂರಿನ ತೋಟದ ಮನೆಯೊಂದರಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಸಭಾ ಸದಸ್ಯ ಅವ್ವಾ ಮಾದೇಶ ಮತ್ತು ಸಹೋದರ ಮಂಜುನಾಥ್ ಸೇರಿದಂತೆ 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಸುಮಾರು ಎಂಟು ವರ್ಷಗಳ ಕಾಲ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಆರೋಪ ಸಾಬೀತಾದ ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯ್‍ ಕುಮಾರ್ ಅವರು ಶುಕ್ರವಾರ ಮಧ್ಯಾಹ್ನ ಶಿಕ್ಷೆಯನ್ನು ಪ್ರಕಟಿಸಿದರು. [ಮಣಿಪಾಲ್ ಗ್ಯಾಂಗ್ ರೇಪ್ ಕೇಸ್ : ಮೂವರಿಗೆ ಜೀವಾವಧಿ ಶಿಕ್ಷೆ]

madesh

ಹಾಲಿ ನಗರ ಪಾಲಿಕೆ ಸದಸ್ಯ : ಮೈಸೂರು ನಗರ ಪಾಲಿಕೆಯ 32ನೇ ವಾರ್ಡಿನ ಜೆಡಿಎಸ್‍ನ ಹಾಲಿ ಸದಸ್ಯ ಮಾದೇಶ ಅಲಿಯಾಸ್ ಅವ್ವ ಮಾದೇಶ ಹಾಗೂ ಸಹೋದರ ಮಂಜುನಾಥ್ ಸೇರಿದಂತೆ ಇತರ 6 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. [ಆರುಷಿ ಹತ್ಯೆ: ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ]

ಪ್ರಕರಣದ ಸಂಬಂಧ ಎರಡು ಅವಧಿಯ ಕಠಿಣ ಶಿಕ್ಷೆ (10ವರ್ಷ) ವಿಧಿಸಲಾಗಿದೆ. ಇದರೊಂದಿಗೆ ಮೊದಲ ಆರೋಪಿಗೆ 3 ಲಕ್ಷ ರೂ. ದಂಡ ಹಾಗೂ ಉಳಿದ ಆರೋಪಿಗಳಿಗೆ ತಲಾ 1 ಲಕ್ಷ ದಂಡ ವಿಧಿಸಲಾಗಿದ್ದು, ದಂಡವನ್ನು ಹತ್ಯೆಯಾದ ಇಬ್ಬರ ಕುಟುಂಬಗಳಿಗೆ ಪರಿಹಾರವಾಗಿ ನೀಡುವಂತೆ ಆದೇಶ ನೀಡಲಾಗಿದೆ. [ಬಾಲಕಿಯ ಕೆಡಿಸಿದ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ]

ಪ್ರಕರಣವೇನು? : ಹುಣಸೂರಿನಲ್ಲಿ 2008ರಲ್ಲಿ ಜೋಡಿ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಮಾದೇಶ ಅಲಿಯಾಸ್ ಅವ್ವಾ ಮಾದೇಶ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ನಂತರ ಅವ್ವಾ ಮಾದೇಶ ಸೇರಿದಂತೆ ಇತರರು ಜಾಮೀನು ಪಡೆದು ಹೊರಬಂದಿದ್ದರು.

ಆ ನಂತರ ನಡೆದ ಮೈಸೂರು ನಗರಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾದೇಶ ಅವರು ಗೆಲುವು ಸಾಧಿಸಿದ್ದರು. ಆದರೆ, ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈಗ ವಿಚಾರಣೆ ಪೂರ್ಣಗೊಂಡಿದ್ದು, ಶಿಕ್ಷೆ ಪ್ರಕಟವಾಗಿದೆ.

English summary
Mysuru district court on Friday, February 27, 2016 sentenced life imprisonment for JDS corporator of 32 ward of Mysuru City Corporation, Madesh and his brother Manjunath, six others convicts in double murder case. Two persons were hacked to death, reportedly due to old enmity on 2008 and police arrested Madhesh and seven others in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X