ಮೈಸೂರು ದೊಡ್ಡಕೆರೆ ಮೈದಾನ ಒಡೆಯರ್ ವಶಕ್ಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 2: ಕೋರ್ಟ್ ಆದೇಶದಂತೆ ಮೈಸೂರು ಹೃದಯಭಾಗದಲ್ಲಿ, ವಸ್ತುಪ್ರದರ್ಶನ ಪ್ರಾಧಿಕಾರದ ಬಳಿಯಿದ್ದ ದೊಡ್ಡಕೆರೆ ಮೈದಾನವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ಸುಮಾರು 10 ಎಕರೆ 35 ಗುಂಟೆ ಪ್ರದೇಶ ಒಡೆಯರ್ ಗೆ ಸೇರಬೇಕಾಗಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಅಲ್ಲದೆ ಈ ಪ್ರದೇಶ ಒಡೆಯರ್ ಕುಟುಂಬಕ್ಕೆ ಸೇರಬೇಕೆಂದು ಹೈಕೋರ್ಟ್ ತೀರ್ಪು ನೀಡಿ 8 ವಾರದೊಳಗೆ ಪ್ರಮೋದಾದೇವಿ ಅವರ ಹೆಸರಿಗೆ ಖಾತೆ ಮಾಡಿಸಿಕೊಡುವಂತೆ ಮೇ ತಿಂಗಳಿನಲ್ಲಿ ಕಂದಾಯ ಇಲಾಖೆಗೆ ಸೂಚಿಸಿತ್ತು.[ಏನು ತಿಂತೀರಿ, ಎಷ್ಟು ತಿಂತೀರಿ, ದಸರಾ ಆಹಾರ ಮೇಳಕ್ಕೆ ಬನ್ರೀ..]

Doddakere maidan possesion takes by Pramoda devi

ಈ ನಡುವೆ 8 ವಾರದೊಳಗಾಗಿ ಕಂದಾಯ ಇಲಾಖೆ ನಿಮ್ಮ ಹೆಸರಿಗೆ ಖಾತೆ ಮಾಡಿಕೊಡದಿದ್ದರೆ ನೀವೇ ಆ ಜಾಗವನ್ನು ಸುಪರ್ದಿಗೆ ಪಡೆಯಬಹುದು ಎಂಬ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಪ್ರಮೋದಾ ದೇವಿಯವರು ಮೈದಾನವನ್ನು ವಶಕ್ಕೆ ಪಡೆದಿದ್ದಾರೆ. ಜೆಸಿಬಿ ಯಂತ್ರಗಳಿಂದ ಸ್ವಚ್ಛಗೊಳಿಸಿ, ತಂತಿ ಬೇಲಿ ಹಾಕಿಸಲಾಗುತ್ತಿದೆ.

Doddakere maidan possesion takes by Pramoda devi

ದೊಡ್ಡಕೆರೆ ಮೈದಾನದಲ್ಲಿನ 10 ಎಕರೆ 35 ಗುಂಟೆ ಪ್ರದೇಶವನ್ನು ಆದೇಶ ಹೊರಡಿಸಿದ 8 ವಾರಗಳೊಳಗಾಗಿ ರಾಣಿ ಪ್ರಮೋದಾ ದೇವಿಯವರ ಹೆಸರಿಗೆ ಖಾತೆ ಮಾಡಿಸಿಕೊಡುವಂತೆ ಮೇ 3ರಂದು ಹೈಕೋರ್ಟ್ ಕಂದಾಯ ಇಲಾಖೆಗೆ ಸೂಚಿಸಿತ್ತು. ಆದರೆ ಕಂದಾಯ ಅಧಿಕಾರಿಗಳು ಖಾತೆ ಮಾಡಿರಲಿಲ್ಲ.[ಮೈಸೂರು ದಸರಾ ಸಮಿತಿಗಳಿಗೆ ಅಧಿಕಾರಿಗಳ ನೇಮಕ]

Doddakere maidan possesion takes by Pramoda devi

ಸಾಮಾನ್ಯವಾಗಿ ದಸರಾ ಸಂದರ್ಭದಲ್ಲಿ ಇದೇ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಈ ಬಾರಿಯೂ ಅದಕ್ಕೆ ತಡೆಯೊಡ್ಡುವುದಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂದೇನಾಗುತ್ತದೋ ಕಾದು ನೋಡಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka High Court directing the Mysuru City Corporation (MCC) to issue a khata of Mysuru Doddakere maidan in the name of Pramoda Devi, set a deadline of eight weeks for issue of khata. After the deadline maidan possesion takes by Rani Pramoda devi.
Please Wait while comments are loading...