ದೇವಸ್ಥಾನಗಳಿಗೆ ಹೋಗಬೇಡಿ. ಹೋದ್ರೆ ದಡ್ಡರಾಗುತ್ತೀರಿ ಎಂದ ಭಗವಾನ್

Posted By:
Subscribe to Oneindia Kannada

ಮೈಸೂರು, ನವೆಂಬರ್ 25 : ಸದಾ ರಾಮನ ಬಗ್ಗೆ ಒಂದಿಲ್ಲೊಂದು ಹೇಳಿಕೆಗಳನ್ನು ನೀಡಿ ವಿವಾದಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಪ್ರತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ ಶನಿವಾರವೂ ಸಹ 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಮನ ಬಗ್ಗೆ ತಮ್ಮ ದಾಟಿಯಲ್ಲಿ ಹೇಳಿ ಹಲವರ ಕೆಂಗಣ್ಣಿಗೆ ಗುರಿಯಾದರು.

ಶ್ರೀರಾಮ ಸ್ತ್ರೀಲೋಲನಂತೆ, ಮದ್ಯ ಸೇವಿಸುತ್ತಿದ್ದನಂತೆ!

ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅಲಕ್ಷಿತ ಸಮುದಾಯಗಳು ಎಂಬ ವಿಷಯದ ಕುರಿತು ವಿಚಾರಗೋಷ್ಠಿಯಲ್ಲಿ ರಾಮನ ಬಗ್ಗೆ ಭಗವಾನ್ ಪ್ರಸ್ತಾಪ ಮಾಡುತ್ತಿದ್ದಂತಯೇ ಸದ್ದು ಗದ್ದಲ ಏರ್ಪಟ್ಟಿತು.

Do not go to temples. If you go temple you will become foolish says KS Bhagavan

ರಾಮ ಒಬ್ಬ ಜಾತಿವಾದಿ, ಅವನು ದೇವರಲ್ಲ, ಹೆಂಡತಿಯನ್ನು ತುಂಬು ಗರ್ಭಿಣಿಯಾಗಿದ್ದಾಗ ಕಾಡಿಗೆ ಕಳುಹಿಸಿದವನು, ಕೆಲವರ ತಲೆ ಕಡಿದವನು ಇಂಥವನ ದೇವಸ್ಥಾನ ಕಟ್ಟಲು ಈಗ ಮುಂದಾಗಿದ್ದಾರೆ. ದೇವಸ್ಥಾನಗಳಿಗೆ ಹೋಗಬೇಡಿ. ಹೋದರೆ ನೀವು ದಡ್ಡರಾಗುತ್ತೀರಿ ಎಂದು ಭಗವಾನ್ ವಿಚಾರಗೋಷ್ಠಿಯಲ್ಲಿ ತಮ್ಮಅಭಿಪ್ರಾಯ ಮಂಡಿಸಿದರು.

ಮತ್ತೊಂದು ವಿವಾದ ಹುಟ್ಟುಹಾಕಿದ ಯೋಗೇಶ್‌ ಮಾಸ್ಟರ್‌

ಈ ವೇಳೆ ಸಭಾಂಗಣದಲ್ಲಿದ್ದ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನೀನು ಮಾತಾಡುತ್ತಿರೋದು ತಪ್ಪು ಎಂದು ಗದ್ದಲ ಸೃಷ್ಟಿಸಿದರು. ಇನ್ನು ಕೆಲವರು ಭಗವಾನ್ ಪರ ನಿಂತು ಭಗವಾನ್ ಮಾತಾಡಿರೋದು ಸರಿ ಎಂದು ಕೂಗಾಡಿದರು.

ಭಗವಾನ್ ಭಾಷಣ ಮುಗಿಯುವವರೆಗೂ ಸಭಾಂಗಣದಲ್ಲಿ ಮಾತ್ರ ಪರ ವಿರೋಧಗಳ ಬಗ್ಗೆ ಸದ್ದು ಗದ್ದಲ ಉಂಟಾಯಿತು. ನಂತರ ಕಾರ್ಯಕ್ರಮ ಮುಗಿದ ಮೇಲೆ ಪೊಲೀಸ್ ಭದ್ರತೆಯೊಂದಿಗೆ ಭಗವಾನ್ ರನ್ನು ಕರೆದುಕೊಂಡು ಹೋಗಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Do not go to temples. If you go temple you will become foolish, said Rationalist KS Bhagwan in 83rd Kannada Sahitya Sammelana at Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ