ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯೋಧ್ಯೆಯಲ್ಲಿ ಮಂದಿರವೂ ಬೇಡ, ಮಸೀದಿಯೂ ಬೇಡ:ಪ್ರೊ.ಕೆ.ಎಸ್. ಭಗವಾನ್

|
Google Oneindia Kannada News

ಮೈಸೂರು, ಡಿಸೆಂಬರ್ 5: ಪ್ರತಿಷ್ಠಿತ ಅಯೋಧ್ಯೆಯಲ್ಲಿ ಮಂದಿರವೂ ಬೇಡ, ಮಸೀದಿಯೂ ಬೇಡ. ಆ ಜಾಗದಲ್ಲಿ ರಾಷ್ಟ್ರ ಮಟ್ಟದ ಉದ್ಯಾನವನ ನಿರ್ಮಾಣವಾಗಲಿ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್ ಭಗವಾನ್ ತಿಳಿಸಿದ್ದಾರೆ.

ರಾಮ ಮಂದಿರ ಪರ ಮಾತನಾಡಿದ ಜನಾರ್ಧನ ಪೂಜಾರಿಗೆ ಬಿಜೆಪಿ ಮುಖಂಡರ ಬೆಂಬಲರಾಮ ಮಂದಿರ ಪರ ಮಾತನಾಡಿದ ಜನಾರ್ಧನ ಪೂಜಾರಿಗೆ ಬಿಜೆಪಿ ಮುಖಂಡರ ಬೆಂಬಲ

ನಾಲ್ವಡಿ ಕೃಷ್ಣರಾಜ ಒಡೆಯರ್ ಜಾರಿಗೆ ತಂದ ಮೀಸಲಾತಿಗೆ 100 ವರ್ಷ ಹಿನ್ನೆಲೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ನಾಲ್ವಡಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಮೌನ ಪ್ರತಿಭಟನೆ ನಡೆಸಲಾಯಿತು.

 ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ: ಬಿ.ಜನಾರ್ಧನ ಪೂಜಾರಿ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ: ಬಿ.ಜನಾರ್ಧನ ಪೂಜಾರಿ

ಈ ವೇಳೆ ಮಾತನಾಡಿದ ಅವರು ಆ ಜಾಗದಲ್ಲಿ ಯಾವ ಮಂದಿರ ನಿರ್ಮಾಣವಾದರೂ ಶಾಂತಿ ಕದಡುತ್ತದೆ. ಈ ಜಾಗದ ವಿಚಾರ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಹೀಗಾಗಿ ಆ ಸ್ಥಳದಲ್ಲಿ ರಾಷ್ಟ್ರೀಯ ಉದ್ಯಾನವನ ನಿರ್ಮಾಣ ಮಾಡಲಿ. ರಾಷ್ಟ್ರೀಯ ಆಸ್ತಿ ಎಂದು ಸರ್ಕಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

Do not build a Ram mandir, Mosque in Ayodhya:K.S.Bhagawan

ಇದೇ ವೇಳೆ ಮಾತನಾಡಿದ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ ಕೆಪಿಎಸ್ ಸಿ ನೇಮಕಾತಿಯಲ್ಲಿ ಸರ್ಕಾರ ಮೀಸಲಾತಿಯ ಅಂಶವನ್ನು ಕಡೆಗಣಿಸಿದೆ. ಕೆಳವರ್ಗದ ಜನರಿಗೆ ಆಶಾಕಿರಣವಾದ ಮೀಸಲಾತಿಯನ್ನು ಕಸಿಯುವ ಪ್ರಯತ್ನಮಾಡುತ್ತಿದೆ.

 ಅಯೋಧ್ಯೆಯಲ್ಲಿರುವುದು ಕಳ್ಳತನದಿಂದ ತಂದಿಟ್ಟ ರಾಮನ ವಿಗ್ರಹ: ಇಲಿಯಾಸ್ ತುಂಬೆ ಅಯೋಧ್ಯೆಯಲ್ಲಿರುವುದು ಕಳ್ಳತನದಿಂದ ತಂದಿಟ್ಟ ರಾಮನ ವಿಗ್ರಹ: ಇಲಿಯಾಸ್ ತುಂಬೆ

ಹೀಗಾಗಿ ಸರ್ಕಾರ 1995ರ ಮೀಸಲಾತಿ ಅನುಪಾತದ ಪಾಲನೆಯನ್ನು ಮುಂದುವರೆಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

English summary
Indian rationalist, Kannada writer, K.S.Bhagawan Said that do not build a Ram mandir and Mosque in Ayodhya. Let the government announce that it is a national property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X