ಲಂಚದ ಡೀಲ್ ಮಾಡಲು ಹೋಗಿ ಸಿಕ್ಕಿಬಿದ್ದ ಮೈಸೂರಿನ ಡೀನಾ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ 27 : ಲಂಚ ಸ್ವೀಕರಿಸುವಾಗ ಎಸಿಬಿ ಬಲಗೆ ಬಿದ್ದ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಡೀನಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 25 ಸಾವಿರ ರೂ. ಲಂಚ ಸ್ವೀಕರಿಸುವಾಗ ಡೀನಾ ಅವರು ಸಿಕ್ಕಿಬಿದ್ದದ್ದರು.

ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪನೆಯಾದ ಬಳಿಕ ನಡೆದ ಮೊದಲ ದಾಳಿ ಇದಾಗಿದೆ. ಮಹಾನಗರ ಪಾಲಿಕೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ನಲ್ಮ್)ನಲ್ಲಿ ಗುತ್ತಿಗೆ ನೌಕರಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಡೀನಾ ಅವರನ್ನು ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. [ಬೆಂಗಳೂರು ಪೊಲೀಸರ ಲಂಚಾವತಾರ ಬಿಚ್ಚಿಟ್ಟ ಎನ್ ಜಿಒ]

dina deepak

25 ಸಾವಿರ ಲಂಚ ಕೇಳಿದ್ದರು : ಡೀನಾ ದೀಪಕ್ ಎಂಬ ಅಧಿಕಾರಿಯೇ ಲಂಚ ಸಹಿತ ಸಿಕ್ಕಿಬಿದ್ದವರು. ನಲ್ಮ್ ಯೋಜನೆಯಡಿ ಕಾರು ತರಬೇತಿ ಮತ್ತು ಇನ್ನಿತರ ತರಬೇತಿಗಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಅನುಭವ ಇರುವ ತರಬೇತಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತಿದೆ. [100 ರೂ. ಲಂಚ ಪಡೆದವನಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ]

ಈ ನಡುವೆ ನಾಲ್ಕು ಚಕ್ರ ವಾಹನ ತರಬೇತಿಗೆ ಹೆಚ್ಚುವರಿ ಆಯುಕ್ತ ಎನ್.ರಾಜು ಅವರ ನೇತೃತ್ವದಲ್ಲಿ 140 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ವೀಣಾ ಡ್ರೈವಿಂಗ್ ಸ್ಕೂಲ್‍ನವರು ತರಬೇತಿಯನ್ನು ಆರಂಭಿಸಿದ್ದರು. ಫಲಾನುಭವಿಗಳಿಗೆ ಸರ್ಕಾರ ತಲಾ 4 ಸಾವಿರ ಅನುದಾನ ನೀಡುತ್ತಿದ್ದು, ಈ ಹಣವನ್ನು ಡ್ರೈವಿಂಗ್ ಸ್ಕೂಲ್‍ನವರಿಗೆ ನೀಡಲು ಸತಾಯಿಸಿದ ಡೀನಾದೀಪಕ್ ಅವರು 1.40ಲಕ್ಷ ರೂ. ಹಣದ ಬೇಡಿಕೆ ಇಟ್ಟಿದ್ದರು. [ಬೆಂಗಳೂರು : ಲಂಚ ಪಡೆದು ಸಿಕ್ಕಿಬಿದ್ದ ಪೊಲೀಸ್ ಪೇದೆಗಳು]

ಈ ಬಗ್ಗೆ ಚೌಕಾಶಿ ನಡೆದು ಒಬ್ಬ ಅಭ್ಯರ್ಥಿಗೆ 800 ರೂ. ನೀಡಲು ಒಪ್ಪಿಗೆಯಾಗಿತ್ತು. ಅದರಂತೆ ಮೊದಲ ಕಂತಾಗಿ 25 ಸಾವಿರ ರೂ. ನೀಡಲು ಡೀನಾ ದೀಪಕ್ ಡ್ರೈವಿಂಗ್ ಸಂಸ್ಥೆಯ ಮಾಲೀಕರಾದ ವೀಣಾ ಅವರಿಗೆ ಸೂಚಿಸಿದ್ದರು. ಅದರಂತೆ ವೀಣಾ ಅವರು ಲಂಚ ನೀಡಲು ಒಪ್ಪಿಕೊಂಡಿದ್ದು, ಈ ಬಗ್ಗೆ ಎಸಿಬಿಗೂ ದೂರು ನೀಡಿದ್ದರು. [ಬೆಳಗಾವಿ : ಪೊಲೀಸರಿಗೆ ಲಂಚ ಕೊಡಲು ತಾಳಿ ಮಾರಿದ ಗೃಹಿಣಿ]

ಬುಧವಾರ 25 ಸಾವಿರ ಲಂಚದೊಂದಿಗೆ ತೆರಳಿ ಡೀನಾ ಅವರನ್ನು ಭೇಟಿಯಾದಾಗ ಹಣ ನೀಡುವಂತೆ ಕೇಳಿದ್ದಾರೆ. ಹಣವನ್ನು ಡೀನಾ ಪಡೆಯುತ್ತಿದ್ದಾಗ ಎಸಿಬಿ ಎಸ್ಪಿ ಕವಿತಾ ನೇತೃತ್ವದಲ್ಲಿ ದಾಳಿ ಅವರನ್ನು ಬಂಧಿಸಲಾಗಿತ್ತು. ಗುರುವಾರ ಅವರನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dina Deepak has sent to two days judicial custody. Anti-Corruption Bureau (ACB) arrested Dina officer of The National Rural Health Mission (NHM) in Mysuru city corporation by red-handed while taking bribe.
Please Wait while comments are loading...