ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನೆಗೆ ಡಯಟ್ ಪ್ಲಾನ್: ಜಂಬುಸವಾರಿಗೆ ತಯಾರಾಗುತ್ತಿವೆ ಮದಗಜ

By Yashaswini
|
Google Oneindia Kannada News

ಮೈಸೂರು, ಜುಲೈ 20 : ದಸರೆಗೆ ಸಾಂಸ್ಕೃತಿಕ ನಗರಿ ಮೈಸೂರು ಸರ್ವ ಸನ್ನದ್ಧಗೊಳ್ಳುತ್ತಿದೆ. ನವರಾತ್ರಿಯ ವೈಭವಕ್ಕೆ ಕಳೆಕಟ್ಟಿವುದೇ ನಮ್ಮೀ ಗಜಪಡೆ. ಹಾಗಾಗಿ ದಸರೆಯಲ್ಲಿ ಪಾಲ್ಗೊಳ್ಳಲಿರುವ ಅರ್ಜುನ ನೇತೃತ್ವದ ಗಜಪಡೆಗೆ ಶಕ್ತಿ ತುಂಬಲು ಮುಂದಾಗಿರುವ ಅರಣ್ಯ ಇಲಾಖೆ ತಮ್ಮ ಕ್ಯಾಂಪ್ ನ ಆನೆಗಳಿಗೆ ಡಯಟ್ ಪ್ಲಾನ್ ನ್ನು ಸಜ್ಜುಗೊಳಿಸಿದ್ದಾರೆ.

ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?

ಸೆಪ್ಟಂಬರ್ 21ರಂದು ಆರಂಭವಾಗಿ ಸೆ.30ರಂದು ಜಂಬೂಸವಾರಿಯ ಮೂಲಕ ಸಮಾಪ್ತಿಯಾಗುವ ದಸರಾ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿಆರಂಭವಾಗುತ್ತಿತ್ತು. ಇದರಿಂದ ಆಗಸ್ಟ್ ತಿಂಗಳಲ್ಲಿ ಗಜಪಡೆಯನ್ನು ಕಾಡಿನಿಂದ ನಾಡಿಗೆ ಕರೆತರುವ ವಾಡಿಕೆ ಇತ್ತು. ಈ ವರ್ಷ 15 ದಿನ ಮುಂಚಿತವಾಗಿಯೇ ನವರಾತ್ರಿ ಆರಂಭವಾಗುತ್ತಿರುವುದರಿಂದ ಆನೆಗಳಿಗೆ ಶಕ್ತಿ ವೃದ್ಧಿಗೆ ಹಿನ್ನಡೆಯಾಗಬಹುದೆಂಬ ಹಿನ್ನೆಲೆಯಲ್ಲಿ ಇಂದಿನಿಂದ ಆನೆ ಕ್ಯಾಂಪ್ ಗಳಲ್ಲಿಯೇ ಪೌಷ್ಠಿಕ ಆಹಾರ ನೀಡುವುದಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

Diet plan for Mysuru Dasara elephants


ಹೆಚ್ಚುವರಿ ಆನೆಗಾಗಿ ರೆಡಿಯಾಗಿದೆ ಪಟ್ಟಿ

ನಾಡಹಬ್ಬದಲ್ಲಿ ಪಾಲ್ಗೊಳ್ಳಲಿರುವ 16 ಆನೆಗಳಲ್ಲಿ ಈಗಾಗಲೇ ಡಿಸಿಎಫ್ ವಿ. ಏಡುಕುಂಡಲು ಜು. 13ರಂದು ಆಯ್ಕೆ ಮಾಡಿ ಅನುಮತಿ ಪಡೆಯಲು ಬೆಂಗಳೂರಿನಲ್ಲಿರುವ ಪಿಸಿಸಿಎಫ್ ಕಚೇರಿಗೆ ರವಾನಿಸಿದ್ದಾರೆ. ಕಾಡಿನಿಂದ ನಾಡಿಗೆ ಕರೆತರುವ ಆನೆಗಳ ಪಟ್ಟಿಗೆ ಇನ್ನೆರಡು ದಿನದಲ್ಲಿ ಪಿಸಿಸಿಎಫ್ ನಿಂದ ಅನುಮತಿ ಸಿಗಲಿದೆ. ಈ ಬಾರಿ ಹೆಚ್ಚುವರಿಯಾಗಿ ಎರಡು ಅಥವಾ ನಾಲ್ಕು ಆನೆ ತರಬೇಕೆಂದು ಅಧಿಕಾರಿಗಳು ನಿರ್ಧರಿಸಲಿದ್ದು, ಪಿಸಿಸಿಎಫ್ ಕಚೇರಿಯಿಂದ ಆನೆಗಳ ಪಟ್ಟಿಗೆ ಅಂಕಿತ ಬೀಳುತ್ತಿದ್ದಂತೆ ಹೆಚ್ಚುವರಿಯಾಗಿ ಗುರುತಿರುವ ನಾಲ್ಕರಲ್ಲಿ ಎಷ್ಟು ಆನೆಗಳು ಮೈಸೂರಿಗೆ ಆಗಮಿಸುತ್ತವೆ ಎಂದು ತಿಳಿಯುತ್ತದೆ.

ಆನೆ ಮೆನುವಿನಲ್ಲಿ ಏನೇನು ?

ದಸರೆಗೆ ವಿವಿಧ ಆನೆಗಳ ಕ್ಯಾಂಪ್ ಗಳಲ್ಲಿರುವ ದಸರೆಯ 16 ಆನೆಗಳಿಗೆ ಇಂದಿನಿಂದ ಪೌಷ್ಠಿಕ ಆಹಾರ ನೀಡಲಾರಂಭಿಸಲಾಗಿದೆ. ಆನೆಗಳಿಗೆ ಹಸಿರು ಕಾಳು, ಉದ್ದಿನ ಕಾಳು, ಕುಸುಬಲ ಅಕ್ಕಿ, ಗೋಧಿ ಬೇಯಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಈರುಳ್ಳಿ ಹಾಗೂ ವಿವಿಧ ತರಕಾರಿ ಕತ್ತರಿಸಿ ಬೆರೆಸಲಾಗುತ್ತದೆ. ಬಳಿಕ ಬೆಣ್ಣೆ ಸೇರಿಸಿ ಆನೆಗಳಿಗೆ ನೀಡಲಾಗುತ್ತಿದೆ.

ಮೈಸೂರು ನಾಡಹಬ್ಬಕ್ಕೆ ಗಜಪಡೆ ಸಿದ್ಧ: ಈ ಬಾರಿ ಹೆಣ್ಣಾನೆಯ ಕೊರತೆ!ಮೈಸೂರು ನಾಡಹಬ್ಬಕ್ಕೆ ಗಜಪಡೆ ಸಿದ್ಧ: ಈ ಬಾರಿ ಹೆಣ್ಣಾನೆಯ ಕೊರತೆ!

ಇದರೊಂದಿಗೆ ಒಂದೊಂದು ಆನೆಗೆ 300 ರಿಂದ 500 ಕೆಜಿ ಆಲ ಹಾಗೂ ಅರಳಿ ಸೊಪ್ಪನ್ನು ನೀಡಲಾಗುತ್ತಿದೆ. ಪೌಷ್ಠಿಕ ಆಹಾರವನ್ನು ದಿನಕ್ಕೆ ಎರಡು ಬಾರಿ ಎರಡು ಕೆ.ಜಿ.ಯಷ್ಟು ನೀಡಲಾಗುತ್ತದೆ. ಒಂದು ವಾರದ ನಂತರ 5 ಕೆ.ಜಿ.ಯಷ್ಟು ನೀಡಲಾಗುತ್ತದೆ. ಆರಂಭದಲ್ಲಿ ಫೌಷ್ಠಿಕ ಆಹಾರವನ್ನು ಹೆಚ್ಚಾಗಿ ತಿಂದರೆ ಆನೆಗಳಿಗೆ ಬೇಧಿಯಾಗುವ ಸಂಭವ ಹೆಚ್ಚಾಗಿರುವುದರಿಂದ ಕ್ಯಾಂಪ್ ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ನೀಡುವುದಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆಗಸ್ಟ್ 10ರಂದು ಮೊದಲ ತಂಡದ ಗಜಪಡೆ ಅರಮನೆಯ ಅಂಗಳಕ್ಕೆ ಆಗಮಿಸಲಿವೆ. ಮರುದಿನದಿಂದಲೇ ಪೌಷ್ಠಿಕ ಆಹಾರದವನ್ನು ಹೆಚ್ಚಾಗಿ ನೀಡಲಾಗುತ್ತದೆ.

ಆನೆ ಆಗಮಿಸಿರುವುದು ಎಲ್ಲೆಲ್ಲಿಂದ ?
ಗಜಪಡೆಯ ನಾಯಕ ಅರ್ಜುನ ಬಳ್ಳೆ ಆನೆ ಕ್ಯಾಂಪ್ ನಲ್ಲಿದ್ದರೆ, ಮತ್ತಿಗೋಡು ಆನೆ ಕ್ಯಾಂಪ್ನಿಂದ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ವರಲಕ್ಷ್ಮಿ, ಸರಳ, ಕೃಷ್ಣ, ದ್ರೋಣ, ಭೀಮ, ದುಬಾರೆ ಆನೆ ಕ್ಯಾಂಪ್ನಿಂದ ಕಾವೇರಿ, ವಿಜಯ, ವಿಕ್ರಮ, ಗೋಪಿ, ಹರ್ಷ, ಪ್ರಶಾಂತ, ಚಾಮರಾಜನಗರದ ಕೆ.ಗುಡಿ ಕ್ಯಾಂಪ್ನಿಂದ ಗಜೇಂದ್ರ ಆನೆ ಈ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕರೆತರಲಾಗುತ್ತಿದೆ. ಈ ಎಲ್ಲಾ ಆನೆ ಕ್ಯಾಂಪ್ ಗಳಲ್ಲಿಯೇ ಪೌಷ್ಠಿಕ ಆಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಇದಕ್ಕೆ ಎಲ್ಲಾ ಕ್ಯಾಂಪ್ ಗಳ ಅಧಿಕಾರಿಗಳು ಸಮ್ಮತಿ ವ್ಯಕ್ತಪಡಿಸಿದ್ದಾರೆ.

ಗಾಯಾಳು ಆನೆಗೆ ಚಿಕಿತ್ಸೆ

ನವರಾತ್ರಿಯ ವೇಳೆ ಪಟ್ಟದ ಆನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದು ಸೈ ಎನಿಸಿಕೊಂಡಿರುವ ಗಜೇಂದ್ರನಿಗೆ ಹಿಂಭಾಗದ ಎಡಗಾಲಿಗೆ ಗಾಯವಾಗಿದೆ. ಮೇವನ್ನು ಅರಸಿ ಕಾಡಿಗೆ ಹೋಗಿದ್ದಾಗ ಗಾಯ ಮಾಡಿಕೊಂಡು ಗಜೇಂದ್ರ ಕ್ಯಾಂಪ್ ಗೆ ವಾಪಸ್ಸಾಗಿದ್ದಾನೆ. ಮೊಣಕಾಲಿನಲ್ಲಿ ಗಾಯವಾಗಿರುವುದರಿಂದ ಪಶು ವೈಧ್ಯ ಡಾ.ಡಿ.ಎನ್.ನಾಗರಾಜು ಅವರು ಚಿಕಿತ್ಸೆ ನೀಡುತ್ತಿದ್ದಾರೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಿರುವ ಎಲ್ಲಾ 16 ಆನೆಗಳ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದು ಡಿಸಿಎಫ್ ವಿ.ಏಡುಕುಂಡಲು ತಿಳಿಸಿದ್ದಾರೆ.

English summary
The forest department of Mysuru has prepared a diet plan for the elephants. These elephants will be the main attraction of Jambusavari of Mysusru Dasara Festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X