ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ: ಜಯಲಲಿತಾಗೂ ಮೈಸೂರಿಗೂ ಅವಿನಾಭಾವ ಸಂಬಂಧ

By ಯಶಸ್ವಿನಿ ಎಂ.ಕೆ, ಮೈಸೂರು
|
Google Oneindia Kannada News

ಮೈಸೂರು, ಡಿಸೆಂಬರ್. ​06 : ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಜಯಲಲಿತಾ ಅವರು ಸೋಮವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. ಅಷ್ಟಕ್ಕೂ ತಮಿಳುನಾಡು ಸಿಎಂ ಜಯಲಲಿತಾಗೂ ಮೈಸೂರಿಗೂ ಅವಿನಾಭಾವ ಸಂಭವವಿದೆ. ಜಯಾ ಹುಟ್ಟಿ ಬೆಳೆದದ್ದು ಕರ್ನಾಟಕದ ಮೇಲುಕೋಟೆ ಎನ್ನುವುದು ಇಂಟ್ರಸ್ಟಿಂಗ್​ ಸಂಗತಿ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಜಯಲಲಿತಾ ಆಗೊಮ್ಮೆ-ಈಗೊಮ್ಮೆ ಮೈಸೂರಿಗೆ ಭೇಟಿ ನೀಡಿ, ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಲೇ ಇದ್ದರು ಎಂಬುದು ವಿಶೇಷ !.. ಈಕೆಗೆ ಮೈಸೂರಿನ, ಅರಮನೆ, ಕನ್ನಡ ಚಿತ್ರರಂಗದ ಸಂಬಂಧವೂ ಇತ್ತು.

ತಮಿಳುನಾಡಿನ ಕಣ್ಮಣಿಯಾದ 'ಅಮ್ಮಾ 'ಎನ್ನುವ ಜೆ.ಜಯಲಲಿತಾ ಅವರು 68 ವರ್ಷದ ಹಿಂದೆ ಕೃಷ್ಣರಾಜೇಂದ್ರ ಆಸ್ಪತ್ರೆಯ ಸಮುಚ್ಚಯದಲ್ಲಿರುವ ಚೆಲುವಾಂಬ ಆಸ್ಪತ್ರೆಯಲ್ಲಿ ಜನಿಸಿದರು.[LIVE : ಜಯಲಲಿತಾ ಉತ್ತಮ ನಟಿ, ಮಹಾನ್ ನಾಯಕಿ: ಖರ್ಗೆ]

ಇವರ ತಂದೆ ಜಯರಾಂ. ತಾಯಿ ಸಂಧ್ಯಾ. ಜಯರಾಂ ಅವರ ಮೊದಲ ಪತ್ನಿ ಎಲ್.ಕೆ.ಜಯಮ್ಮಾಳ್. ಇವರ ಏಕೈಕ ಪುತ್ರ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರದಲ್ಲಿರುವ ಎನ್.ಜೆ. ವಾಸುದೇವನ್ ಅವರು.

ಜಯಲಲಿತಾ ತಂದೆ ಜಯರಾಂ 1952ರಲ್ಲಿ ನಿಧನ ಹೊಂದಿದರು. ಆಗ ಜಯಲಲಿತಾಗೆ ಕೇವಲ 4 ವರ್ಷ. ಅನಂತರವೇ ಜಯಲಲಿತಾ ಕುಟುಂಬ ಮೈಸೂರಿನಿಂದ ಬೆಂಗಳೂರಿನಲ್ಲಿ ಅಜ್ಜಿ-ತಾತ ಜೊತೆ ವಾಸವಾಗಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಪಡೆದರು. [ಅಮ್ಮ 'ಜನ ಪ್ರೀತಿ' ಗಳಿಸಿದ ಕ್ಯಾಂಟೀನ್ ನಿಂದ ಲ್ಯಾಪ್ ಟಾಪ್ ವರೆಗೆ]

ಆ ಸಮಯದಲ್ಲಿ ಇವರ ತಾಯಿ ಸಂಧ್ಯಾ ಅವರ ಸೋದರಿ ವಿದ್ಯಾ (ಅಂಬುಜಾ) ಅವರು ಗಗನಸಖಿಯಾಗಿದ್ದರು. ಜೊತೆಗೆ, ಸಿನಿಮಾಗಳಲ್ಲಿ ನಟಿಸುತ್ತಿದ್ದರು. ನೃತ್ಯ ತಾರೆಯರಾದ ಲಲಿತಾ, ಪದ್ಮಿನಿ, ರಾಗಿನಿ ಅವರ ನಿಕಟಸ್ನೇಹ ಗಳಿಸಿದ್ದರು.

ಕ್ರಾಫರ್ಡ್ ಹಾಲ್‌ನಲ್ಲಿ ಜಯಲಲಿತಾ ನೃತ್ಯ ಪ್ರದರ್ಶನ

ಕ್ರಾಫರ್ಡ್ ಹಾಲ್‌ನಲ್ಲಿ ಜಯಲಲಿತಾ ನೃತ್ಯ ಪ್ರದರ್ಶನ

19-03-1967ರ ಭಾನುವಾರ ಸಂಜೆ 6.30ಕ್ಕೆ ಕ್ರಾಫರ್ಡ್ ಹಾಲ್‌ನಲ್ಲಿ ಜಯಲಲಿತಾ ಅವರ ಅಮೋಘ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಜಯಲಲಿತಾ ಸುಪ್ರಸಿದ್ಧ ಅಮೋಘ ನೃತ್ಯ ಪ್ರದರ್ಶನ ಮೈಸೂರಿನಲ್ಲಿಯೇ ಪ್ರಥಮ ಬಾರಿ ಪ್ರದರ್ಶನದಿಂದ ಬಂದ ಹಣವನ್ನು ಈ ಶಾಲೆಗಾಗಿಯೇ ಧಾರೆ ಎರೆದರು. ಇಂದಿಗೂ ಜಮೀನು ಕೊಟ್ಟ ಆ ಕಾರ್ಯಕ್ರಮವನ್ನು ಸಂಯೋಜಿಸಿದ್ದ ರಾಮಚಂದ್ರಯ್ಯನವರು ನೆನಪಿಸಿಕೊಂಡು ಹೆಮ್ಮೆಪಡುತ್ತಾರೆ. ಆಗಾಗ ಈ ಶಾಲೆ ಬಳಿ ಬಂದು ನೋಡಿಕೊಂಡು ಹೋಗುವ ಪರಿಪಾಠವಿದ್ದು, ನಗುವನಹಳ್ಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಎಂಜಿಆರ್ ನೆರಳಿನಲ್ಲಿ ರಾಜಕೀಯ ಹಾದಿ ತುಳಿದ ಜಯಲಲಿತಾ

ಎಂಜಿಆರ್ ನೆರಳಿನಲ್ಲಿ ರಾಜಕೀಯ ಹಾದಿ ತುಳಿದ ಜಯಲಲಿತಾ

ಎಂಜಿಆರ್ ನೆರಳಿನಲ್ಲಿ ರಾಜಕೀಯ ಹಾದಿ ತುಳಿದ ಜಯಲಲಿತಾ ಅವರ ನಿಜವಾದ ನಿಕಟವರ್ತಿಯೂ ಆದರು. ಪಕ್ಷದ ಮುಖಂಡರು ಇವರನ್ನು ಅಮ್ಮಾ ಎಂದೇ ಸಂಬೋಧಿಸತೊಡಗಿದರು. ಎಂಜಿಆರ್ ಅವರು ಪಕ್ಷದಲ್ಲಿ ಪ್ರಚಾರ ಕಾರ್ಯದರ್ಶಿಯನ್ನಾಗಿ ನೇಮಿಸಿದರು. ನಂತರ ತಮಿಳುನಾಡಿನ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಚಾರ ನಡೆಸುವಾಗಲೇ ಕೊಳಗೇರಿಯಲ್ಲಿ ಮಕ್ಕಳೊಂದಿಗೆ ಮಾತನಾಡುತ್ತಾ, ಜನರ ಕಷ್ಟಸುಖವನ್ನು ವಿಚಾರಿಸುವ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದರು.

11ನೇ ವರ್ಷದ ವರೆಗೂ ಬೆಂಗಳೂರಿನಲ್ಲಿದ್ದ ಜಯಾ

11ನೇ ವರ್ಷದ ವರೆಗೂ ಬೆಂಗಳೂರಿನಲ್ಲಿದ್ದ ಜಯಾ

ಜಯಲಲಿತಾ ಅವರ ತಂದೆ ಜಯರಾಂ ಅವರು ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹವರ್ತಿ, ಅರಮನೆಯ ವೈದ್ಯ ಎನ್. ರಂಗಾಚಾರ್ ಅವರ ಪುತ್ರ. ಜಯಲಲಿತಾ ಅವರು ತಮ್ಮ 11ನೇ ವರ್ಷದ ವರೆಗೂ ತಾಯಿ ಸಂಧ್ಯಾ ಅವರೊಂದಿಗೆ ಬೆಂಗಳೂರಿನಲ್ಲಿಯೇ ಇದ್ದರು. ಬಳಿಕ ಅವರು ಚೆನ್ನೈಗೆ ತೆರಳಿದರು.

ಮೈಸೂರಿನಲ್ಲಿರುವ ಜಯವಿಲಾಸ್

ಮೈಸೂರಿನಲ್ಲಿರುವ ಜಯವಿಲಾಸ್

ಮೈಸೂರಿನ ಲಕ್ಷ್ಮಿಪುರಂನ ಎರಡನೇ ಮೇನ್ ನಲ್ಲಿದ್ದ ಲಲಿತಾ ವಿಲಾಸ, ರಾಮವಿಲಾಸ ಮನೆಗಳು ಹಾಗೂ ಸರಸ್ವತಿಪುರಂನ ಮೊದಲನೇ ಹಂತದ 3ನೇ ಕ್ರಾಸ್‌ನಲ್ಲಿರುವ ಮನೆಯನ್ನು ಜಯವಿಲಾಸ್ ಎಂದು ಕರೆಯುತ್ತಿದ್ದರು. ಇದನ್ನು ಜಯಲಲಿತಾರಿಗೆಂದೇ ಖರೀದಿಸಿದ್ದರು. ಇದನ್ನು ಮಾರಾಟ ಮಾಡಿದ್ದರು. ಹೀಗಾಗಿ, ಜಯಲಲಿತಾ ವಿದ್ಯಾಭ್ಯಾಸ ಮದರಾಸಿನಲ್ಲಿ ಮುಂದುವರೆಯಿತು. ಆಗಲೇ ಡಾನ್ಸ್ ತರಗತಿಗೆ ಜಯಲಲಿತಾರನ್ನು ಸೇರಿಸಿದ್ದರು. ತನ್ನ 14ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು.

English summary
Tamil Nadu Chief Minister Jayalalithaa(68) passed away at the Apollo Hospital, Chennai on Monday (December 5th). Here is the detailed report on Tamil Nadu CM Jayalalithaa's connection with Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X