ಐಕಾನಿಕ್ ಕಿತ್ತಳೆ ಭಜರಂಗಿಯ ಸೃಷ್ಟಿಕರ್ತ ಕರಣ್ ಆಚಾರ್ಯ

By: ಯಶಸ್ವಿನಿ ಎಂ.ಕೆ, ಮೈಸೂರು
Subscribe to Oneindia Kannada

ಮೈಸೂರು, ಜನವರಿ 13 : ವಾಹನಗಳ ಮೇಲೆ ಭಜರಂಗಿ, ಹನುಮಾನ್ ಚಿತ್ರ ಎಂದಂದುಕೊಂಡರೆ ಪಟ್ ಅಂತಾ ನಮ್ಮ ತಲೆಯಲ್ಲಿ ಹೊಳೆಯುವುದು ಕಿತ್ತಳೆ ಬಣ್ಣದ ಆಂಜನೇಯನ ಭಾವಚಿತ್ರ. ಹೌದು, ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಹನುಮಾನ್ ಸ್ಟಿಕ್ಕರ್ ಎಲ್ಲೆಡೆ ಸಂಚಲನ ಮೂಡಿಸಿದೆ.

ಕಾರು, ಬಸ್, ಬೈಕ್, ಲಾರಿ, ಅಂಗಡಿ-ಮುಂಗಟ್ಟುಗಳು ಯಾವುದನ್ನೂ ಈ ಸ್ಟಿಕ್ಕರ್ ಬಿಟ್ಟಿಲ್ಲ. ಅದಕ್ಕಿಂತಲೂ ಕೆಲವರ ವಾಟ್ಸಾಪ್ ಡಿಪಿಯಲ್ಲಿಯೂ ಈ ಭಜರಂಗಿ ಕಾಣಿಸಿಕೊಳ್ಳತೊಡಗಿದ್ದಾನೆಂದರೆ ಅದು ಯಾವ ರೀತಿ ಯುವ ಜನತೆಯಲ್ಲಿ ಕ್ರೇಜ್ ಹುಟ್ಟಿಸಿದೆ ಎನ್ನುವುದನ್ನು ತಿಳಿಯುವುದು ಕಷ್ಟವೇನಲ್ಲ.

ಅವರಾರೆಂದು ತಿಳಿಯುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಸರಗೋಡು ಮೂಲದ ಕರಣ್ ಆಚಾರ್ಯ ಈ ಸ್ಟಿಕ್ಕರ್ ನಿರ್ಮಾಣದ ರೂವಾರಿ. ಬಾಲ್ಯದಲ್ಲಿಯೇ ಕಲಾಭಿರುಚಿಯನ್ನು ಹೊಂದಿದ ಇವರು ಕಲೆಯಲ್ಲಿಯೇ ಏನನ್ನಾದರೂ ಸಾಧಿಸಬೇಕೆಂದು ಹೊರಟವರು. ಆದರೆ ಅವರ ಈ ಅರ್ಧ ಮುಖದ ಹನುಮಂತ ಚಿತ್ರ ಜನರಲ್ಲಿ ಇಷ್ಟೊಂದು ಕ್ರೇಜ್ ಹುಟ್ಟಿಸಬಹುದೆಂಬುದನ್ನು ಅವರು ಕನಸು ಮನಸಿನಲ್ಲಿಯೂ ಊಹಿಸಿರಲಿಕ್ಕಿಲ್ಲ. ಇವರ ಜೊತೆ ನಮ್ಮ ಹರಟೆ ಇಲ್ಲಿದೆ....

ನಿಮ್ಮ ಬಗ್ಗೆ ಹೇಳಿ ಕರಣ್ ಆಚಾರ್ಯ?

ನಿಮ್ಮ ಬಗ್ಗೆ ಹೇಳಿ ಕರಣ್ ಆಚಾರ್ಯ?

ಕೇರಳದ ಕಾಸರಗೋಡು ಮೂಲದ ನಾನು, ಪಿ.ಯು ವಿದ್ಯಾಭ್ಯಾಸದ ನಂತರ ಫೈನ್ ಆರ್ಟ್ಸ್ ಕೋರ್ಸನ್ನು ಕೇರಳದಲ್ಲಿ ಪೂರೈಸಿ, 2ಡಿ ಹಾಗೂ 3ಡಿ ಅನಿಮೇಶನ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದೇನೆ. ಚಿಕ್ಕಂದಿನಿಂದಲೇ ಚಿತ್ರಕಲೆ ಹಾಗೂ ಡಿಸೈನಿಂಗ್ ನಲ್ಲಿ ಆಸಕ್ತಿ ಹೊಂದಿದ್ದೇನೆ.

ಕಾಸರಗೋಡಿನ ಕುಂಬ್ಳೆ ಪ್ರದೇಶದ ಹಿಂದೂ ಯುವಕರು ಗಣೇಶೋತ್ಸವ ಆಚರಿಸುವ ವೇಳೆ ಲಾಂಛನ ಅಥವಾ ಬಾವುಟದ ರೂಪದಲ್ಲಿ ಪ್ರದರ್ಶಿಸಲು ಕರಣ್ ರೂಪಿಸಿದ ಈ ಹನುಮಾನ್ ಸ್ಟಿಕ್ಕರ್, 2015ರ ನವೆಂಬರ್ 13ರಂದು ಮೊದಲ ಬಾರಿಗೆ ಕಾಸರಗೋಡಿನಲ್ಲಿ ರಾರಾಜಿಸಿತ್ತು. ವಿಭಿನ್ನ ಹಾಗೂ ವಿಶೇಷವಾಗಿ ಹನುಮಾನ್ ಚಿತ್ರವನ್ನು ರೂಪಿಸಬೇಕು ಎಂಬ ಚಿತ್ತದಿಂದ ಶ್ರಮ ವಹಿಸಿ ನಾನು , ಮೊದಲ ಮುಖವನ್ನು ಮಾತ್ರ ರೂಪಿಸಿ ಆನಂತರ ಹನುಮಾನ್ ದೇಹವನ್ನು ಬರೆದೆ.. ಅಲ್ಲಿನ ಯುವಕರಿಗೆ ಈ ಚಿತ್ರ ಎಷ್ಟು ಪ್ರಿಯವಾಯಿತು ಎಂದರೆ, ಇದನ್ನು ಫೇಸ್ ಬುಕ್ ಹಾಗೂ ವಾಟ್ಸಪ್ ಗಳಲ್ಲಿ ಡಿಪಿ ಆಗಿ ಹಾಕಿಕೊಳ್ಳಲು ಮುಂದಾದರು. ಆದರೆ, ತಾಂತ್ರಿಕ ಕಾರಣದಿಂದ ಡಿಪಿಯಲ್ಲಿ ಪೂರ್ಣ ಕಾಣದ ಹಿನ್ನೆಲೆಯಲ್ಲಿ ಅರ್ಧಮುಖದ ಹನುಮಾನ್ ಚಿತ್ರವೇ ಎಲ್ಲೆಡೆ ಪಸರಿಸಲು ಆರಂಭವಾಯಿತು.

ನಂತರ ಒಬ್ಬರಿಂದ ಒಬ್ಬರಿಗೆ ಶೇರ್ ಆಗುತ್ತಾ ಹೋದ ಈ ಹನುಮಾನ್ ಚಿತ್ರ ಇಂದು ರಾಷ್ಟ್ರಮಟ್ಟದಲ್ಲಿ ಒಂದು ರೀತಿಯ ಐಕಾನ್ ಆಗುವಷ್ಟರ ಮಟ್ಟಿಗೆ ರೂಪಿಸಿಕೊಂಡಿದೆ.ಇದು ನನಗೆ ಸಂತಸ ತಂದಿದೆ ಕೂಡ.

ಎಲ್ಲೆಲ್ಲಿ ವರ್ಕ್ ಮಾಡಿದ್ದೀರಿ?

ಎಲ್ಲೆಲ್ಲಿ ವರ್ಕ್ ಮಾಡಿದ್ದೀರಿ?

ಡ್ರಾಯಿಂಗ್ ಟೀಚರ್ ಆಗಿ ಕಾಸರಗೋಡಿನ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ, ಹಾಗೂ ಮಂಗಳೂರು ಇನ್‍ಫೋಟೆಕ್ ಕಂಪನಿಯಲ್ಲಿ.

ಯಾವ ಸ್ಕೂಲ್ ಆಫ್ ಆರ್ಟ್‍ನಲ್ಲಿ ಕಲಿತದ್ದು..?

ಯಾವ ಸ್ಕೂಲ್ ಆಫ್ ಆರ್ಟ್‍ನಲ್ಲಿ ಕಲಿತದ್ದು..?

ಕರಣ್ ಆಚಾರ್ಯ ಅವರು ಕೇರಳದ ಕಾಸರಗೋಡಿನ ರಿದಂ ಸ್ಕೂಲ್ ಆಫ್ ಆರ್ಟ್. ಕೇರಳದ ತ್ರಿಶೂರ್ ನಲ್ಲಿ ಅನಿಮೇಷನ್ ಕಲ್ತಿದ್ದೇನೆ.

ಎಲ್ಲಿಯಾದರೂ ಪ್ರದರ್ಶನ ನೀಡಿದ್ದೀರಾ..?

ಎಲ್ಲಿಯಾದರೂ ಪ್ರದರ್ಶನ ನೀಡಿದ್ದೀರಾ..?

ಬೆಂಗಳೂರಿನ ಚಿತ್ರಸಂತೆಯಲ್ಲಿ ಮತ್ತು ಮಂಗಳೂರಿನ ಕುಡ್ಲ ಕಲಾಮೇಳದಲ್ಲಿ ಪಾಲ್ಗೊಂಡು ಕ್ಯಾರಿಕೇಚರ್ ಮಾಡ್ತಾ ಇದ್ದೆ. ಎಲ್ಲೆಡೆಯೂ ಅದ್ಭುತ ಸ್ಪಂದನೆ ವ್ಯಕ್ತವಾಗಿತ್ತು.

ಯಾವುದಾದರೂ ಕಾರ್ಟೂನ್ ನೆಟ್ ವರ್ಕ್ನಲ್ಲಿ ಕೆಲಸ..?

ಯಾವುದಾದರೂ ಕಾರ್ಟೂನ್ ನೆಟ್ ವರ್ಕ್ನಲ್ಲಿ ಕೆಲಸ..?

ಹಾಂ. ಎಪಿಸೋಡ್‍ವೈಸ್ ಅಲ್ಲಲ್ಲಿ ಬರ್ತಾ ಇದೆ ಅಂತಷ್ಟೇ ಹೇಳಬಹುದು.

ಇನ್ನೂ ಏನಾದರೂ ಮಾಡುವ ಆಸೆ…?

ಇನ್ನೂ ಏನಾದರೂ ಮಾಡುವ ಆಸೆ…?

ಪೇಟಿಂಗ್ ಮಾಡುವಾಸೆ. ಮುಂದೆ ಡಿಎಫ್ಎಕ್ಸ್ ಕಲಿಯಬೇಕು.

ಮುಂದಿನ ಚಿತ್ರ ಯಾವುದನ್ನು ಮಾಡ್ಬೇಕಂತಿದ್ದೀರಿ..?

ಮುಂದಿನ ಚಿತ್ರ ಯಾವುದನ್ನು ಮಾಡ್ಬೇಕಂತಿದ್ದೀರಿ..?

ನರಸಿಂಹ ಮಾಡ್ಬೇಕೂಂತ ಇದೆ. ಆದ್ರೆ ಫೇಸ್‍ಬುಕ್ ಫ್ರೆಂಡ್ಸ್, ವಾಟ್ಸಾಪ್ ಫ್ರೆಂಡ್ಸ್ ಎಲ್ಲ ಶಿವನನ್ನು ಮಾಡಿ, ವಿವೇಕಾನಂದರನ್ನು ಮಾಡಿ ಅಂತ ಅವರೇ ಸಲಹೆ ಕೊಡ್ತಾರೆ ಎನ್ನುತ್ತಾರೆ ಕರಣ್.

ನಿಮ್ಮ ಸಾಧನೆಗೆ ಪ್ರೇರಣೆ ಯಾರು..?

ನಿಮ್ಮ ಸಾಧನೆಗೆ ಪ್ರೇರಣೆ ಯಾರು..?

ಸದ್ಯಕ್ಕೆ ಅವರ ಭಜರಂಗಿ, ಐಕಾನ್ ಆಗಿ ಸುದ್ದಿ ಮಾಡುತ್ತಿದೆ. ನನ್ನ ಕಲೆಗೆ ಚಿಕ್ಕಂದಿನಿಂದಲೇ ನೀರೆರೆಯುತ್ತಿರುವುದು ತಾಯಿ.

- ಪ್ರೋತ್ಸಾಹ ಹೇಗೆ ಸಿಗುತ್ತಿದೆ ?

ಇನ್ನು ಈ ಹನುಮಾನ್ ಚಿತ್ರ ಇಂದು ಎಲ್ಲೆಡೆ ರಾರಾಜಿಸುತ್ತಿರುವಂತೆಯೇ ಇಂತಹ ಅದ್ಭುತ ಕಲಾವಿದನಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಬಜರಂಗ ದಳ,ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ನರನಾಡಿಗಳಲ್ಲಿ ಹಿಂದುತ್ವದ ವಿದ್ಯುತ್ ನ್ನು ಪ್ರವಹಿಸುತ್ತಿರುವ ಈ ಚಿತ್ರವನ್ನು ಇನ್ನೂ ಹೆಚ್ಚು ಹೆಚ್ಚು ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ. ಇದಕ್ಕಾಗಿ ಎಲ್ಲ ಸಂಘಟನೆಗಳು, ಚಿತ್ರರಂಗ ಮುಂದೆ ಬರಬೇಕಿದೆ.

- ನಿಮ್ಮ ಕನಸು ಏನು ?
ಸದ್ಯ ಬಾಲಿವುಡ್‌ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ 'ಚಂದನ್‌ವನ್‌' , 'ಗಂಧದಕುಡಿ' ಚಿತ್ರದ ಸ್ಟೋರಿ ಬೋರ್ಡ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಹನುಮಾನ್‌ ಸ್ಟಿಕ್ಕರ್‌ ಎಲ್ಲಾ ಕಡೆ ಜನಪ್ರಿಯತೆ ಪಡೆಯುತ್ತಿರುವುದರಿಂದ ಸಂತೋಷಗೊಂಡಿರುವುದರಿಂದ ಹಲವಾರು ಬಡ ಜನರಿಗೆ ಸಹಾಯವಾಗಬೇಕು ಎಂಬ ಹಂಬಲವಿದೆ. . ಅದಕ್ಕಾಗಿಯೇ ಈ ಸ್ಟಿಕ್ಕರ್‌ನ ಪೇಟೆಂಟ್‌ಗಾಗಿ ಬಂದ ಕಂಪನಿಯ ಆಹ್ವಾನವನ್ನು ನಿರಾಕರಿಸಿದ್ದೇನೆ.. ಈ ಹನುಮಾನ್‌ ಕೇವಲ ಒಬ್ಬರ ಸ್ವತ್ತಾಗಬಾರದು ಎಲ್ಲಾ ಜನರು ಇದನ್ನು ಮಾಡುವಂತಿರಬೇಕು. ಅವರ ಅಭ್ಯುದಯವೇ ನನ್ನ ಗುರಿ..

- ಜನರ ನುಡಿ ನಿಮಗೆ ಹೇಗೇನಿಸುತ್ತದೆ ?

'ಹನುಮಂತ ಸಾಮಾನ್ಯವಾಗಿ ವಿನೀತನಾಗಿ ಕಾಣಿಸಿಕೊಳ್ಳುತ್ತಾನೆ. ನೀವೇಕೆ ಹೀಗೆ ಚಿತ್ರಿಸಿದಿರಿ...' ಎಂದು ಅನೇಕರು ಕೇಳುತ್ತಾರೆ. ಒಬ್ಬ ಕಲಾವಿದನಾಗಿ ಹನುಮಾನ್‌ಗೆ ಯಾವ ರೂಪ ಬೇಕಾದರೂ ಕೊಡಬಹುದು. ರಾಮ- ರಾವಣ ಯುದ್ಧದಲ್ಲಿ ಅವ ಉಗ್ರರೂಪಿಯಾಗಿರುತ್ತಾನೆ. ಲಂಕಾದಹನದ ವೇಳೆಯೂ ಅವನು ಉಗ್ರರೂಪದಲ್ಲಿರುತ್ತಾನೆ. ಆದರೆ ರಾಮನ ಜತೆ ಇರುವಾಗ ಮಾತ್ರ ಅವನು ಶಾಂತರೂಪಿ. ಬಿಡುವು ಸಿಕ್ಕಾಗಲೆಲ್ಲಾ ಶಾಂತರೂಪದ ಹನುಮಂತನ ಚಿತ್ರ ರಚಿಸಬಹುದು. ಈ ಹಿಂದೆ ಶಾಂತರೂಪದ ಹನುಮಂತನ ಚಿತ್ರ ಬಿಡಿಸಿ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್ ಮಾಡಿದ್ದೆ. ಅದು ಸುದ್ದಿಯಾಗಲಿಲ್ಲ. ಆದರೆ ಉಗ್ರರೂಪಿ ಹನುಮ ಎಲ್ಲರನ್ನೂ ಆಕರ್ಷಿಸಿಬಿಟ್ಟಿದೆ ಎನ್ನುತ್ತಾರೆ ಮಂದಸ್ಮಿತ ಕರಣ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The man behind the trend setter 'Hanuman design' says he never had thought of his creation becomes new icon in world of the vehicle stickering.
Please Wait while comments are loading...