ಪ್ರತಾಪ್ ಸಿಂಹ ಹೆಸರಲ್ಲಿ ಅವಹೇಳನಕಾರಿ ಪೋಸ್ಟ್, ಸಂಸದರ ಸ್ಪಷ್ಟನೆ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ನವೆಂಬರ್ 29 : ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ ಸಿಂಹ ಅವರ ಹೆಸರು ಬಳಸಿಕೊಂಡ ಕಿಡಿಗೇಡಿಗಳು ರಾಣಿ ಚೆನ್ನಮ್ಮ ಹಾಗೂ ಓಬವ್ವ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. 'ಐ ಸಪೂರ್ಟ್ ಪ್ರತಾಪ್ ಸಿಂಹ' ಫೇಸ್ ಬುಕ್ ಪೇಜ್ ನಲ್ಲಿ ಕಿಡಿಗೇಡಿಯೊಬ್ಬ ಕನ್ನಡ ನಾಡಿನ ವೀರ ವನಿತೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಇದಕ್ಕೆ ಸಾರ್ವಜನಿಕ ವಲಯದಿಂದಲೂ ಆಕ್ರೋಶ ವ್ಯಕ್ತವಾಗಿದೆ.

ಚಂಪಾ ಅವರು ಬಾಯಿ ಬಿಟ್ಟರೆ ಉಚ್ಚೆಯ ವಾಸನೆ ಬರುತ್ತದೆ

ಪೋಸ್ಟ್ ಕುರಿತು ಪ್ರತಾಪ ಸಿಂಹ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದು, ಐ ಸಪೋರ್ಟ್ ಪ್ರತಾಪ್ ಸಿಂಹ ಪೇಜ್‌ ನನ್ನದಲ್ಲ ಎಂದಿದ್ದಾರೆ. 'I support Pratap Simha' ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ಕಿಡಿಗೇಡಿಯೊಬ್ಬ ಕಿತ್ತೂರು ರಾಣಿ ಚನ್ನಮ್ಮ, ಹಾಗೂ ಒನಕೆ ಓಬವ್ವ ಅವರ ಬಗ್ಗೆ ಅಶ್ಲೀಲವಾಗಿ ಬರೆದು ಪೋಸ್ಟ್ ಮಾಡಿದ್ದಾನೆ.

Derogatory post in the name of MP Pratap Simha

ಬ್ರಿಟಿಷರ ಜತೆ ಚೆನ್ನಮ್ಮ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಹೈದರಾಲಿ ಜತೆ ಓಬವ್ವ ಮಂಚ ಹಂಚಿಕೊಂಡಿದ್ದಳು ಎಂದೆಲ್ಲಾ ಪೋಸ್ಟ್ ಮಾಡಿದ್ದು, ಕಿಡಿಗೇಡಿಯನ್ನು ಬಂಧಿಸುವಂತೆ ಜನರು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಪದ್ಮಾವತಿ ಚಿತ್ರ ವಿವಾದ ಕುರಿತು ಉದಾಹರಣೆ ನೀಡಲು ಹೋಗಿ ಈ ರೀತಿ ಯಡವಟ್ಟು ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Derogatory post in the name of MP Pratap Simha. Objectionable content posted in the "I support Pratap Simha" page. People angry on this post.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ