ಡೆಂಗ್ಯೂ ಪೀಡಿತರ ಆರೋಗ್ಯ ವಿಚಾರಿಸಿದ ಪ್ರತಾಪ್ ಸಿಂಹ

Posted By:
Subscribe to Oneindia Kannada

ಮೈಸೂರು, ಜೂನ್ 20: ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಮಹಾಮಾರಿ ಡೆಂಗ್ಯೂ ಭೀತಿ ಹಿನ್ನೆಲೆ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೋಗಿಗಳ ಆರೋಗ್ಯ ವಿಚಾರಿಸಿ ಪ್ರತಾಪ್ ಸಿಂಹ, ನೀವು ದಿನಕ್ಕೆ ಎಷ್ಟು ಮಂದಿ ಜ್ವರಪೀಡಿತರು ಬರುತ್ತಿದ್ದಾರೆ, ನೀವು ಅವರಿಗೆ ಯಾವ ರೀತಿಯಲ್ಲಿ ಔಷಧೋಪಚಾರ ನೀಡುತ್ತಿದ್ದೀರಿ ಎಂಬ ಮಾಹಿತಿಯನ್ನು ಕಲೆ ಹಾಕಿದರು.

ಮೈಸೂರಿನಲ್ಲಿ ಡೆಂಗ್ಯೂಗೆ ಬಲಿಯಾದವರು 6 ತಿಂಗಳಲ್ಲಿ 112

DENGUE FEVER: Pratap SIMHA visits KR hospital

ಮೈಸೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚುತ್ತಿದ್ದು, ದಾಖಲಾದ ರೋಗಿಗಳ ಆರೋಗ್ಯವನ್ನು ವಿಚಾರಿಸಿದರು. ರೋಗಿಗಳ ಕುರಿತು ಕೆ ಆರ್ ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಪಡೆದರು. ಮೈಸೂರಿನಲ್ಲಿ ವೈರಲ್ ಫೀವರ್ ಹಾಗೂ ಡೆಂಗ್ಯೂ ಹೆಚ್ಚುತ್ತಿದೆ. ಗ್ರಾಮಾಂತರ ಭಾಗ ಸೇರಿದಂತೆ ಮಂಡ್ಯ, ಚಾಮರಾಜನಗರಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಯಾವ ಆಸ್ಪತ್ರೆಗೆ ಹೋದರೂ ಬೆಡ್ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಅದರಿಂದ ಖುದ್ದು ಪರಿಶೀಲಿಸಲು ಬಂದಿದ್ದೇನೆ ಎಂದರು.

ಮಳೆ ಬಂದು ನೀರು ನಿಂತ ಕಡೆ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಯಂಕಾಲದ ವೇಳೆ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಸೊಳ್ಳೆ ಬರದಂತೆ ನೋಡಿಕೊಳ್ಳಿ. ಕ್ರೀಮ್ ಗಳನ್ನು ಹಚ್ಚಿಕೊಳ್ಳಿ. ಮಹಾನಗರ ಪಾಲಿಕೆಯವರು ಫಾಗಿಂಗ್ ನಡೆಸುತ್ತಿದ್ದಾರೆ. ಅದರಿಂದಲೂ ಸೊಳ್ಳೆ ಏಕಕಾಲಕ್ಕೆ ಸಾಯುವುದಿಲ್ಲ. ಮೊದಲು ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಮಾರಕ ರೋಗಗಳ ತಡೆಗೆ ಸಸ್ಯ ತಂತ್ರಜ್ಞಾನ

DENGUE FEVER: Pratap SIMHA visits KR hospital

ಡೆಂಗ್ಯೂನಿಂದ 6 ಜನ ಸಾವನ್ನಪ್ಪಿರುವುದು ವಿಷಾದನೀಯ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ ಪ್ರತಾಪ್ ಸಿಂಹ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದರೂ ಉಸ್ತುವಾರಿ ಸಚಿವರು ಮಾತ್ರ ಮೌನವಾಗಿದ್ದಾರೆ. ಯಾವುದೇ ರೀತಿಯಲ್ಲೂ ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysore and Kodagu MP Pratap Simha visits KR Hospital in the backdrop of the dengue fever. He enquired the patients about their health and gathered information regarding medicines those being provided by hospital for the patients.
Please Wait while comments are loading...