ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಅಪನಗದೀಕರಣಕ್ಕೆ ವರುಷ: ಇನ್ನೂ ಬೇಕಿದೆ ಬದಲಾವಣೆಯ ಸ್ಪರ್ಶ

By ಯಶಸ್ವಿನಿ ಎಂ.ಕೆ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮೈಸೂರು, ನವೆಂಬರ್ 8 : ಅಪನಗದೀಕರಣಕ್ಕೆ ಇಂದಿಗೆ ಒಂದು ವರುಷ. ದೇಶಾದ್ಯಂತ ತೀವ್ರ ಸಂಚಲ ಉಂಟು ಮಾಡಿದ್ದ ನವೆಂಬರ್ 8 ಇಂದಿಗೂ ಯಾರು ಮರೆಯಲಾರರು. ಈ ಹಿನ್ನೆಲೆ ಮೊದಲ ವರುಷದ ಅನುಭವ ಹಾಗೂ ಜನಾಭಿಪ್ರಾಯ ಡಿಮಾನಿಟೈಸೇಶನ್ ಕುರಿತಾದ್ದದಾರೂ ಏನು ? ಇಲ್ಲಿದೆ ಉತ್ತರ.

  ಅಪನಗದೀಕರಣ ಕುರಿತು ಔಟ್ ಲುಕ್ ಎಡಿಟರ್ ಮಾತುಗಳಿದು:
  ನೋಟು ಅಪನಗದೀಕರಣ ಕ್ರಮದ ಪರಿಣಾಮವಾಗಿ ಒಂದು ವರ್ಷದಿಂದ ಇಡೀ ದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಥಿಕ, ರಾಜಕೀಯ ಮತ್ತು ಅಸಂಘಟಿತ ಕಾರ್ಮಿಕ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು 'ಔಟ್ ಲುಕ್' ಆಂಗ್ಲ ಪತ್ರಿಕೆಯ ಮಾಜಿ ಸಂಪಾದಕ ಕೃಷ್ಣಪ್ರಸಾದ್ ಹೇಳಿದ್ದಾರೆ.

  ಅಪನಗದೀಕರಣಕ್ಕೆ ಒಂದು ವರ್ಷ: ಯಾರು, ಏನಂದರು?

  2016ರ ನ.8ರಂದು ಪ್ರಧಾನಿ ಮೋದಿ ಪ್ರಕಟಿಸಿದ ನಿರ್ಧಾರದ ಗುರಿ ಕಪ್ಪುಹಣ ಬಯಲಿಗೆಳೆಯುವುದು, ಖೋಟಾನೋಟು ದಂಧೆ ಮಟ್ಟ ಹಾಕುವುದು ಹಾಗೂ ಇವೆಲ್ಲಕ್ಕಿಂತ ಮುಖ್ಯವಾಗಿ ಭಯೋತ್ಪಾದನಾ ಕೃತ್ಯಗಳ ನಿಧಿಗೆ ಹಣದ ಹರಿಯುವಿಕೆ ತಡೆಗಟ್ಟುವುದಾಗಿತ್ತು. ಅದರಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂದೇ ಜನರನ್ನು ನಂಬಿಸಲಾಗಿತ್ತು. ಆದರೆ, ನನ್ನಪ್ರಕಾರ ಕೇಂದ್ರ ಈ ಎಲ್ಲ ವಿಷಯ ಗಳಲ್ಲೂ ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

  ಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರ

  ಚಲಾವಣೆಯಲ್ಲಿದ್ದ 500 ರೂ. ಹಾಗೂ 1000 ರೂ. ಮುಖಬೆಲೆಯ ಶೇ.99ರಷ್ಟು ನೋಟುಗಳ ವಾಪಸ್ ಬಂದಿವೆ ಎಂದು 2 ತಿಂಗಳ ಹಿಂದಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ವರದಿ ನೀಡಿದೆ. ಅಂದರೆ ದೇಶದಲ್ಲಿ ಕಪ್ಪುಹಣವೇ ಇರಲಿಲ್ಲ ಎಂದಲ್ಲ. ಅದು ಬಿಳಿ ಹಣವಾಗಿ ಬದಲಾಗಿದೆ. ಅಂದರೆ ಮೋದಿ ಅವರ ಮೊದಲ ಉದ್ದೇಶವೇ ಬಿದ್ದು ಹೋದಂತಾಯಿತು ಎಂದಿದ್ದಾರೆ.

  ಭಯೋತ್ಪಾದನೆ ನಿಂತಿಲ್ಲ

  ಭಯೋತ್ಪಾದನೆ ನಿಂತಿಲ್ಲ

  ಭಯೋತ್ಪಾದನೆಯೂ ಹೆಚ್ಚೇ ಆಗಿದೆ. ಜಮ್ಮು ಮತ್ತು ಕಾಶ್ಮೀರವೇ ಅದಕ್ಕೆ ಉದಾಹರಣೆಯಾಗಿದೆ. 2000 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬಂದ 20 ದಿನಗಳ ಅಂತರದಲ್ಲೇ ಅದರ ನಕಲಿ ನೋಟೂ ಪ್ರತ್ಯಕ್ಷಗೊಂಡಿತು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಒಟ್ಟಾರೆ ಮೋದಿ ಅವರ ನೋಟು ಅಮಾನ್ಯೀಕರಣ ಉದ್ದೇಶವು ಪೂರ್ಣ ವಿಫಲವಾಗಿದೆ ಎಂದು ಕೃಷ್ಣಪಸಾದ್ ಅವರು ವ್ಯಾಖ್ಯಾನಿಸಿದ್ದಾರೆ.

  ಆರ್ಥಿಕ ತಜ್ಞರ ಮಾತು

  ಆರ್ಥಿಕ ತಜ್ಞರ ಮಾತು

  ಗರಿಷ್ಠ ಮುಖಬೆಲೆಯ ನೋಟುಗಳ ಅಪನಗದೀಕರಣದ ನಿರ್ಧಾರವನ್ನು ಯಶಸ್ಸಿನ ನಿರ್ಧಾರ ಎಂದು ಕರೆಯಲಾಗುವುದಿಲ್ಲ ಎಂದು ಆರ್ಥಿಕ ತಜ್ಞ ಪ್ರೊ.ಸಿ.ಕೆ.ರೇಣುಕಾರ್ಯ ಅಭಿಪ್ರಾಯಪಟ್ಟಿದ್ದಾರೆ. ಭಾರತದಂತಹ ಬೃಹತ್ ರಾಷ್ಟ್ರಗಳಲ್ಲಿ ಆರ್ಥಿಕ ನೀತಿ ಜಾರಿಗೆ ತರಲು ತುಂಬ ಮುಂದಾಲೋಚನೆ ಮಾಡಬೇಕು. ನೋಟು ಅಮಾನ್ಯ ಆತುರದ ಕ್ರಮ ಪೂರ್ವ ಸಿದ್ಧತೆ ಇಲ್ಲದೇ ಜನರು ತುಂಬ ತೊಂದರೆ ಅನುಭವಿ ಸುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

  ಯಶಸ್ಸು ಸಿಕ್ಕಿಲ್ಲ

  ಯಶಸ್ಸು ಸಿಕ್ಕಿಲ್ಲ

  ಮೊದಲು ಅಗತ್ಯ ಪ್ರಮಾಣದಲ್ಲಿ ಹೊಸ ನೋಟುಗಳ ಮುದ್ರಣ ಮಾಡಬೇಕಿತ್ತು. ಜನರಿಗೆ ತೊಂದರೆ ಆಗುವುದನ್ನು ಅರಿತು ಪರ್ಯಾಯ ಕ್ರಮಗಳನ್ನು ಸಿದ್ಧಮಾಡಿಕೊಳ್ಳಬೇಕಿತ್ತು. ನೋಟು ಅಮಾನ್ಯ ಕ್ರಮದಿಂದ ತುಂಬ ಯಶಸ್ಸನ್ನು ಸಾಧಿಸಿಲ್ಲ. ನಿರೀಕ್ಷಿಸಿದಂತೆ ಕಪ್ಪುಹಣವೂ ಹೊರಬಂದಿಲ್ಲ. ಆದ್ದರಿಂದ ಇದನ್ನು ಯಶಸ್ಸಿನ ನಿರ್ಧಾರವೆಂದು ಕರೆಯಲಾಗುವುದಿಲ್ಲ ಎಂದು ಪ್ರೊ.ಸಿ.ಕೆ.ರೇಣುಕಾರ್ಯ ಹೇಳಿದರು.

  ಹೋಟೆಲ್ ಉದ್ಯಮಕ್ಕೆ ಸ್ವಲ್ಪ ಹೊಡೆತ

  ಹೋಟೆಲ್ ಉದ್ಯಮಕ್ಕೆ ಸ್ವಲ್ಪ ಹೊಡೆತ

  ನೋಟು ರದ್ದಾದ ಮೂರು ತಿಂಗಳು ವ್ಯಾಪಾರ ವಹಿವಾಟು ಸಂಪೂರ್ಣ ಬಿದ್ದು ಹೋಯಿತು. ಸ್ಥಳೀಯರು ವ್ಯವಹಾರ ನಡೆಸಲು ಹೆದರಿದರು. ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖ ವಾಯಿತು. ಹೋಟೆಲ್ ಉದ್ಯಮ ಸ್ವಲ್ಪ ಚೇತರಿಸಿಕೊಳ್ಳುತ್ತಿರುವಾಗಲೇ ಜಿಎಸ್‍ಟಿ ಜಾರಿ ಮಾಡಿದಾಗ ಪುನಃ ಕುಸಿ ಯಿತು. ದಸರಾ ನಂತರ ಚೇತ ರಿಸಿಕೊಳ್ಳುತ್ತಿದೆ. ನೋಟು ಅಮಾನ್ಯ ದಿಂದ ಖೋಟಾ ನೋಟು ಹಾವಳಿ ತಪ್ಪಿದೆ. ಮುಂದಿನ ದಿನಗಳಲ್ಲಿ ಒಳ್ಳೆಯದಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  It’s exactly an year since Narendra Modi announced the controversial demonetisation of Rs 500 and Rs 1,000 currency notes, which constituted nearly 86 per cent of cash in circulation.Here is reaction on demonetisation of Outlook's former editor Krishna Prasad and common men.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more