ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಲೆಗುಂಪಾದ ಮರದ ಅಚ್ಚು, ಮಾರುಕಟ್ಟೆಗೆ ಬಂದ ಚೀನಾದ ಶುಗರ್ ಕ್ಯಾಂಡಿ ಮೌಲ್ಡ್

|
Google Oneindia Kannada News

ಮೈಸೂರು, ಜನವರಿ 14: ಚೀನಾ ಪ್ಲಾಸ್ಟಿಕ್ ಆಯ್ತು, ಚೀನಾ ಬಟ್ಟೆ ಆಯ್ತು, ಇದೀಗ ಚೀನಾದ ಶುಗರ್ ಕ್ಯಾಂಡಿ ಮೌಲ್ಡ್ ಸರದಿ. ಹೌದು, ಮರದ ಅಚ್ಚಿಗೆ ಬದಲಾಗಿ ವಿವಿಧ ಮೌಲ್ಡ್ ಗಳಲ್ಲಿ ತಯಾರಾದ ಸಕ್ಕರೆ ಅಚ್ಚು ಈಗ ಹೆಚ್ಚು ಬಳಕೆಯಲ್ಲಿದೆ.

"ಯಂತ್ರಗಳಲ್ಲಿ ತಯಾರಾಗುವ ಸಕ್ಕರೆ ಅಚ್ಚಿಗೆ ಕೇವಲ ಪೆಪ್ಪರ್ ಮೆಂಟ್ ಪಾಕ ಇದ್ದರೆ ಸಾಕು. ಆದರೆ ಮನೆಯಲ್ಲೇ ತಯಾರಿಸುವ ಸಕ್ಕರೆ ಅಚ್ಚಿಗೆ ಪಾಕವನ್ನು ಪದೇ - ಪದೇ ಶೋಧಿಸಿ ತೆಗೆಯುತ್ತೇವೆ. ಹಾಗಾಗಿ ಮನೆಯಲ್ಲಿಯೇ ತಯಾರಾಗುವ ಸಕ್ಕರೆ ಹೆಚ್ಚು ಮೃದುವಾಗಿರುತ್ತದೆ ಮತ್ತು ಅಷ್ಟೇ ಬಿಳಿಯ ಹೊಳಪಿನ ಬಣ್ಣದ್ದಾಗಿರುತ್ತದೆ. ಆದರೆ ಅಂಗಡಿಯ ಅಚ್ಚು ಸ್ವಲ್ಪ ಮಂಕಾದಂತೆ ಕಾಣುತ್ತದೆ. ತಿನ್ನಲು ಅಷ್ಟು ರುಚಿಸುವುದಿಲ್ಲ" ಎನ್ನುತ್ತಾರೆ ಹಬ್ಬದ ಸಂದರ್ಭದಲ್ಲಿ ಮನೆಯಲ್ಲೇ ಸಕ್ಕರೆ ಅಚ್ಚುಗಳನ್ನು ತಯಾರಿಸುವ ಮೇಘನಾ ತೀರ್ಥಾಪುರ.

ಇನ್ನೊಂದೆಡೆ ಮನೆಯ ಅಂಗಳಕ್ಕಷ್ಟೇ ಮೀಸಲಾಗಿದ್ದ ಸಂಕ್ರಾಂತಿ ಇದೀಗ ಕಿರಾಣಿ ಅಂಗಡಿಗಳನ್ನು ಬಿಡದೆ ಬೀಡುಬಿಟ್ಟಿದೆ. ಗ್ರಾಹಕರನ್ನು ಆಕರ್ಷಿಸಲು ಕಿರಾಣಿ ಅಂಗಡಿಗಳು ಸಂಕ್ರಾಂತಿ ವೇಷ ತೊಟ್ಟುಕೊಂಡು ನಿಂತಿದೆ. ದೊಡ್ಡ - ದೊಡ್ಡ ಅಂಗಡಿಗಳಂತೂ ಕಬ್ಬಿನ ಜಲ್ಲೆ, ಮಡಿಕೆ ಕುಡಿಕೆಗಳಿಂದ ತುಂಬಿ ಸಿಂಗಾರಗೊಂಡಿದೆ.

ಸರ್ವರಿಗೂ ಒಳಿತುಂಟು ಮಾಡಲಿ ಈ ಸಂಭ್ರಮದ ಸಂಕ್ರಾಂತಿಸರ್ವರಿಗೂ ಒಳಿತುಂಟು ಮಾಡಲಿ ಈ ಸಂಭ್ರಮದ ಸಂಕ್ರಾಂತಿ

ಡಿಜಿಟಲ್ ಜಮಾನದ ಜನರ ಟೇಸ್ಟ್ ಗೆ ತಕ್ಕಂತೆ ಸಕ್ಕರೆ ಅಚ್ಚಿನ ಆಕಾರ, ವಿನ್ಯಾಸ ಸಹ ಬದಲಾಗಿದೆ. ಅವರ ಅಭಿರುಚಿಗೆ ತಕ್ಕಂತೆ ಪೆಪ್ಪರ್ ಮೆಂಟ್ ಮಾದರಿಯಲ್ಲಿ ಸಕ್ಕರೆ ಅಚ್ಚುಗಳು ಮಾರಾಟಕ್ಕೆ ಬಂದಿವೆ. ಇದರೊಟ್ಟಿಗೆ ಹುರಿದ ಎಳ್ಳು, ಕಡಲೆ, ಕೊಬ್ಬರಿ, ಬೆಲ್ಲ, ಕಡಲೆ ಕಾಯಿ ಬೀಜಗಳು ಪ್ಯಾಕೇಟ್ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ. ಏನು ಮಾಡುವುದೇ ಬೇಡ, ಕುಳಿತ ಜಾಗದಲ್ಲೇ ಸಂಕ್ರಾಂತಿ ಕಿಟ್ಟನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿ ತರಿಸಿಕೊಳ್ಳಬಹುದು.

ರೆಡಿಮೇಡ್ ಸಕ್ಕರೆ ಅಚ್ಚುಗಳಿಗೆ ಬೇಡಿಕೆ

ರೆಡಿಮೇಡ್ ಸಕ್ಕರೆ ಅಚ್ಚುಗಳಿಗೆ ಬೇಡಿಕೆ

ಹಬ್ಬವೆಂದರೆ ಹೆಚ್ಚು ಕಾಳಜಿಯಿಂದ ಮಾಡುವುದು ಗ್ರಾಮಾಂತರ ಪ್ರದೇಶಗಳಲ್ಲಿ ಎಂಬ ಮಾತಿದೆ. ಆದರೆ ಇದು ಸುಳ್ಳಾಗುತ್ತಿದೆ. ಇತ್ತ ಗ್ರಾಮಾಂತರ ಪ್ರದೇಶಗಳಲ್ಲೂ ರೆಡಿಮೇಡ್ ಸಕ್ಕರೆ ಅಚ್ಚುಗಳಿಗೆ ಬೇಡಿಕೆ ಹೆಚ್ಚಿದೆ. ಮರದ ಅಚ್ಚು ಮೂಲೆ ಗುಂಪಾಗಿದೆ. ಅಷ್ಟೇಕೆ ಗ್ರಾಮೀಣ ಭಾಗದ ಅಂಗಡಿಗಳು, ಸೂಪರ್ ಬಜಾರ್, ಸೂಪರ್ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಅಚ್ಚು, ಎಳ್ಳು ಬೆಲ್ಲ ಮಾರಾಟದ ಕೌಂಟರ್ ಗಳಲ್ಲಿ ವ್ಯಾಪಾರ ಭರ್ಜರಿಯಾಗಿದೆ.

 ಗ್ರಾಮ್ಯ ಹಬ್ಬ ಸಂಕ್ರಾಂತಿ: ಹಳ್ಳಿಗಳಲ್ಲಿ ಆಚರಣೆ ಹೇಗೆ? ಗ್ರಾಮ್ಯ ಹಬ್ಬ ಸಂಕ್ರಾಂತಿ: ಹಳ್ಳಿಗಳಲ್ಲಿ ಆಚರಣೆ ಹೇಗೆ?

ಮಾರುಕಟ್ಟೆಯಲ್ಲಿ ಲಭ್ಯ

ಮಾರುಕಟ್ಟೆಯಲ್ಲಿ ಲಭ್ಯ

ಬಾರ್ಬಿಡಾಲ್ , ಡೋರೆಮಾನ್, ಸೂಪರ್ ಮ್ಯಾನ್, ಬ್ಯಾಟ್ಮನ್, ಚೋಟಾ ಭೀಮ್ , ಮೋಟು - ಪತ್ಲು ಹೀಗೆ ನಾನಾ ಬಗೆಯ ಸಕ್ಕರೆ ಅಚ್ಚು ಮಾಡಿಕೊಡುವವರು ಈಗ ಸಿಗುತ್ತಾರೆ. ಹಾಲಿವುಡ್ ಸಿನಿಮಾ ಕ್ಯಾರಿಕೇಚರ್ ಮೌಲ್ಡ್ ಗಳು ಲಭ್ಯವಿದ್ದು, ಟ್ರೆಂಡ್ ಗೆ ತಕ್ಕಂತೆ ಚೀನಾ ಅಚ್ಚುಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

 ಖ್ಯಾತ ಜ್ಯೋತಿಷಿ ಹರೀಶ್ ಶಾಸ್ತ್ರಿ ಅವರಿಂದ ಸಂಕ್ರಾಂತಿ ರಾಶಿ ಫಲ ಖ್ಯಾತ ಜ್ಯೋತಿಷಿ ಹರೀಶ್ ಶಾಸ್ತ್ರಿ ಅವರಿಂದ ಸಂಕ್ರಾಂತಿ ರಾಶಿ ಫಲ

ಇದು ಆರೋಗ್ಯಕ್ಕೆ ಹಾನಿಕಾರಕ

ಇದು ಆರೋಗ್ಯಕ್ಕೆ ಹಾನಿಕಾರಕ

ಸಕ್ಕರೆಯ ಪಾಕಕ್ಕೆ ಹಾಲು ಸೇರಿಸಿ ತಯಾರಿಸುವ ಅಚ್ಚುಗಳಿಗೆ ಮಾಡರ್ನ್ ಟಚ್ ಬರಲಾರಂಭಿಸಿದೆ. ಪೆಪ್ಪರ್ ಮೆಂಟ್ ಪಾಕವನ್ನು ಶುಗರ್ ಕ್ಯಾಂಡಿ ಮೋಲ್ಡ್ ಗಳಿಗೆ ಹಾಕಿ ಸಕ್ಕರೆ ಅಚ್ಚುಗಳನ್ನು ಮಾರಾಟ ಮಾಡಲಾಗುತ್ತದೆ. ಹಾಗಾಗಿ ಮರದ ಅಚ್ಚಿನ ಬದಲು ಇತರೆ ಮೌಲ್ಯಗಳನ್ನು ಬಳಸಲಾಗುತ್ತಿದೆ. ಅದರಿಂದಾಗಿ ಹೊಸ ಹೊಸ ವಿನ್ಯಾಸಗಳನ್ನು ಪ್ರಾಯೋಗಿಕವಾಗಿ ತರಲು ಸಾಧ್ಯವಾಗುತ್ತದೆ ಎನ್ನುವ ವಾದ ಒಂದೆಡೆಯಾದರೆ, ಮತ್ತೊಂದೆಡೆ ಇದು ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತು ಕೇಳಿಬರುತ್ತದೆ.

ಬಣ್ಣಗಳನ್ನು ಬಳಸಿಯೇ ಮಾಡಿರುತ್ತಾರೆ

ಬಣ್ಣಗಳನ್ನು ಬಳಸಿಯೇ ಮಾಡಿರುತ್ತಾರೆ

ಮರದ ಅಚ್ಚು ಅಪ್ಪಟ ಆರೋಗ್ಯ ಸ್ನೇಹಿ. ಸಿಲಿಕಾನ್ ಮೌಲ್ಡ್ ಗಳು ಎಷ್ಟಾದರೂ ಪ್ಲಾಸ್ಟಿಕ್ ಸಾಧನ. ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವ ಅಚ್ಚುಗಳಂತೂ ಹೇಳುವುದೇ ಬೇಡ. ಕೆಮಿಕಲ್ ಹಾಗೂ ಬಣ್ಣಗಳನ್ನು ಬಳಸಿಯೇ ಮಾಡಿರುತ್ತಾರೆ ಎಂಬುದು ಬಣ್ಣವನ್ನು ನೋಡಿಯೇ ತಿಳಿದುಕೊಳ್ಳಬಹುದು. ಇದು ನಮ್ಮ ದೇಹದ ಮೇಲೂ ಪರಿಣಾಮ ಬೀರುತ್ತದೆ. ಒಟ್ಟಾರೆ ನಮ್ಮ ಹಿರಿಯರು ನಮ್ಮ ಒಳಿತಿಗಾಗಿ ಮಾಡಿದ ನಿಯಮವನ್ನೇ ನಮಗೆ ಬೇಕಾದ ಹಾಗೇ ಬದಲಿಸಿಕೊಳ್ಳುತ್ತಿರುವ ನಮ್ಮ ಮನಸ್ಥಿತಿಗೆ ಏನೆನ್ನೋಣ ನೀವೇ ಹೇಳಿ?

English summary
In recent times demand to Chinese sugar candy mold has increased. Different sugar mold is now widely used instead of wooden mold. Here's a brief report on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X