ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ನಗರದಾದ್ಯಂತ ಪಸರಿಸಿದೆ ಹೈಬ್ರಿಡ್ ಅವರೆಯ ಘಮಲು

|
Google Oneindia Kannada News

ಮೈಸೂರು, ನವೆಂಬರ್.20:ಮಳೆ ಕೊರತೆಯ ನಡುವೆಯೂ ನಗರದ ಮಾರುಕಟ್ಟೆಯಲ್ಲಿ ದಿನೇ ದಿನೇ ಹೈಬ್ರಿಡ್ ಅವರೆಕಾಯಿ ಆವಕ ಹೆಚ್ಚಳವಾಗುತ್ತಿದ್ದು, ಎಲ್ಲೆಂದರಲ್ಲಿ ಕಾಣುವ ಚಳಿಗಾಲದ ಸೊಗಡಿನ ಅವರೆಯ ಘಮಲು ಭೋಜನ ಪ್ರಿಯರ ಜಿಹ್ವಾ ಚಾಪಲ್ಯ ಹೆಚ್ಚಿಸಿದೆ.

ಕಳೆದ ಬಾರಿ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಅವರೆ ಬೆಳೆಯುವ ಪ್ರದೇಶದಲ್ಲಿಯೂ ಬೆಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿರುವ ಅವರೆ ಬೆಳೆ ಕಾಯಿ ಕಟ್ಟುವ ಹಂತದಲ್ಲಿದೆ.

ಮಾಗಿಯ ಚಳಿಗೆ ಅವರೆಕಾಯಿ ಸುಗ್ಗಿಮಾಗಿಯ ಚಳಿಗೆ ಅವರೆಕಾಯಿ ಸುಗ್ಗಿ

ಇದರ ನಡುವೆಯೇ ನೆರೆಯ ಆಂಧ್ರಪ್ರದೇಶದ ರೈತರು ತೋಟದಲ್ಲಿ ಬೆಳೆಯುವ ಅವರೆಯನ್ನು ಮಾರುಕಟ್ಟೆಗೆ ಪೂರೈಕೆ ಮಾಡುತ್ತಿದ್ದು, ಮಾರುಕಟ್ಟೆಯ ಹಾದಿಬೀದಿಯಲ್ಲೆಲ್ಲಾ ಅವರೆಯ ದರ್ಶನವಾಗುತ್ತಿದೆ.

ಸದ್ಯ ಮಾರುಕಟ್ಟೆಗೆ ರೈತರು ತೋಟದಲ್ಲಿ ಬೆಳೆಯುವ ಹೈಬ್ರಿಡ್‌ ಅವರೆಯನ್ನು ನಗರದ ಮಾರುಕಟ್ಟೆಗೆ ಪೂರೈಸಲು ಮುಗಿಬೀಳುತ್ತಿದ್ದಾರೆ. ನಿತ್ಯ ನಗರಕ್ಕೆ 100 ಮೂಟೆಗಿಂತಲೂ ಅಧಿಕ ಅವರೆ ಆವಕವಾಗುತ್ತಿದೆ. ರೈತರು ಪ್ರತಿ ಕೆ.ಜಿ.ಗೆ 23 ರೂಪಾಯಿಯಂತೆ ಸಗಟು ಬೆಲೆಗೆ ವರ್ತಕರಿಗೆ ಅವರೆಕಾಯಿ ಮಾರಾಟ ಮಾಡುತ್ತಿದ್ದಾರೆ. ವರ್ತಕರು ಪ್ರತಿ ಕೆ.ಜಿ. ಮೇಲೆ ಕನಿಷ್ಠ 5-10 ರೂ.ವರೆಗೆ ಲಾಭವಿಟ್ಟು ವ್ಯಾಪಾರ ಮಾಡುತ್ತಿದ್ದಾರೆ.

 ಅವರೆಕಾಯಿ ದರ್ಶನ

ಅವರೆಕಾಯಿ ದರ್ಶನ

ಮಾರುಕಟ್ಟೆ, ಸಂತೆ ಹೀಗೆ ಎಲ್ಲಿ ಹೋದರೂ ಸದ್ಯ ಅವರೆಕಾಯಿ ದರ್ಶನವಾಗುತ್ತದೆ. ಇನ್ನು ತಳ್ಳುಗಾಡಿಯಲ್ಲಿ ತರಕಾರಿ ಮಾರುವವರು ತರಕಾರಿ ಜತೆಗೆ ಅವರೆ ಮಾರುತ್ತಿರುವುದರಿಂದ ನಗರವೆಲ್ಲ ಅವರೆ ಘಮಲು ಆವರಿಸಿಕೊಂಡಂತೆ ಭಾಸವಾಗುತ್ತಿದೆ.

 ಕೆ.ಜಿ.ಗೆ 10 ರೂಪಾಯಿ ಲಾಭ

ಕೆ.ಜಿ.ಗೆ 10 ರೂಪಾಯಿ ಲಾಭ

"ಆಂಧ್ರದ ರೈತರಿಂದ ಕೆ.ಜಿ. ಹಾಗೂ ಮೂಟೆ ಲೆಕ್ಕದಲ್ಲಿ ಅವರೆಕಾಯಿ ಖರೀದಿಸಿ ತಂದು ಮಾರುಕಟ್ಟೆಯಲ್ಲಿ ಐದಾರೂ ವ್ಯಾಪಾರಸ್ಥರು ಕೂತು ಮಾರಾಟ ಮಾಡುತ್ತಿದ್ದೇವೆ. ಇನ್ನು ಎರಡ್ಮೂರು ತಿಂಗಳು ಅವರೆ ಸೀಸನ್ ಇರುತ್ತದೆ. ಕೆ.ಜಿ.ಗೆ 10 ರೂಪಾಯಿ ಲಾಭವಿಟ್ಟುಕೊಂಡು ನಿತ್ಯ 700-800 ಕೆ.ಜಿ ಮಾರಾಟ ಮಾಡುತ್ತೇವೆ. ಜೀವನಕ್ಕೆ ಯಾವುದೇ ತೊಂದರೆ ಇಲ್ಲ. ಸುಗ್ಗಿಯಲ್ಲಿ ನಷ್ಟವೇನೂ ಇಲ್ಲ" ಎಂದು ಸ್ಥಳೀಯ ನಿವಾಸಿ ಗಣೇಶ್ ಹೇಳಿದರು.

 ಚಳಿಗಾಲದ ಸಮೃದ್ಧ ಬೆಳೆ: ಅವರೆ ಸೊಗಡನ್ನು ಸವಿದವರೇ ಬಲ್ಲರು! ಚಳಿಗಾಲದ ಸಮೃದ್ಧ ಬೆಳೆ: ಅವರೆ ಸೊಗಡನ್ನು ಸವಿದವರೇ ಬಲ್ಲರು!

 50 ರೂಪಾಯಿಗೆ ಒಂದೂವರೆ ಕೆ.ಜಿ.

50 ರೂಪಾಯಿಗೆ ಒಂದೂವರೆ ಕೆ.ಜಿ.

ಇತ್ತೀಚೆಗಷ್ಟೇ ಅವರೆಕಾಯಿ ವ್ಯಾಪಾರ ಚುರುಕಾಗುತ್ತಿದೆ. ಮಳೆ ಇಲ್ಲದೆ ಈ ಬಾರಿ ನಮ್ಮಲ್ಲಿ ಅವರೆ ಬೆಳೆ ತುಂಬಾ ಕಡಿಮೆಯಾಗಿದೆ. ಹೀಗಾಗಿ ಹೈಬ್ರಿಡ್‌ ಅವರೆಯೇ ಗತಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ 50 ರೂಪಾಯಿಗೆ ಒಂದೂವರೆ ಕೆ.ಜಿ. ಕಾಯಿ ಮಾರುತ್ತಿದ್ದೇನೆ. ನಿತ್ಯ 150 ಕೆ.ಜಿ ಅವರೆಕಾಯಿ ಮಾರಾಟವಾಗುತ್ತಿದೆ' ಎಂದು ತಳ್ಳುಗಾಡಿ ವ್ಯಾಪಾರಿ ಲಂಕಪ್ಪ ತಿಳಿಸಿದರು.

 ನಾಟಿ ಅವರೆಯ ರುಚಿ ಚೆನ್ನ

ನಾಟಿ ಅವರೆಯ ರುಚಿ ಚೆನ್ನ

ನಿತ್ಯ ತರಕಾರಿಯೊಂದಿಗೆ ಮಾಡುವ ಸಾಂಬರ್ ತಿಂದು ಬಾಯಿ ರುಚಿ ಕೆಟ್ಟು ಹೋಗಿದೆ. ಹೈಬ್ರಿಡ್‌ ಅವರೆ ಕಾಯಿ ಮಾರುಕಟ್ಟೆಯಲ್ಲಿ ವರ್ಷಪೂರ್ತಿ ಆಗಾಗ ಸಿಗುತ್ತಲೇ ಇರುತ್ತದೆ. ಆದರೆ ಅದು ಅಷ್ಟಾಗಿ ರುಚಿ ಇರುವುದಿಲ್ಲ. ಅದೇ ಚಳಿಗಾಲದಲ್ಲಿ ಬೆಳೆಯುವ ನಾಟಿ ಅವರೆಯ ರುಚಿ ತುಂಬಾ ಚೆನ್ನಾಗಿರುತ್ತದೆ ಎನ್ನುತ್ತಾರೆ ಗೃಹಿಣಿ ವಸುಧಾ.

ಒಟ್ಟಾರೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಅವರೆಕಾಯಿ ರುಚಿಕರ ಪಾಲಿನ ಆರಾಧ್ಯ ದೈವದಂತಿರುವುದರಲ್ಲಿ ಸಂಶಯವಿಲ್ಲ.

ಅವರೇ: ಅಡುಗೆಗೆ ಬೇಕಿಲ್ಲ, ಕೋತಿನಾಷ್ಟಕ್ಕೆ ಇರದಿರೇ ಆಗಲ್ಲಅವರೇ: ಅಡುಗೆಗೆ ಬೇಕಿಲ್ಲ, ಕೋತಿನಾಷ್ಟಕ್ಕೆ ಇರದಿರೇ ಆಗಲ್ಲ

English summary
Demand for Hybrid Avarekai increased in the Mysore city market.Here is news about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X