ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡು ಬಿಟ್ಟು ಶಾಲೆಗೆ ಬಂದ ಜಿಂಕೆಗೆ ಕಾಂಪೌಂಡ್ ಹಾರುವಾಗ ಗಾಯ

By Yashaswini
|
Google Oneindia Kannada News

ಮೈಸೂರು, ಜೂನ್ 22 : ಜಿಂಕೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಶುಕ್ರವಾರದಂದು ಅಂತಹ ಜಿಂಕೆಯೊಂದು ಶಾಲೆಯ ಕಾಂಪೌಂಡ್ ಹಾರಿ, ಒಳಗೆ ಬಂದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಪಿರಿಯಾಪಟ್ಟಣದ ಪುಷ್ಪಾ ಶಾಲೆಯಲ್ಲಿ ಜಿಂಕೆ ಪ್ರತ್ಯಕ್ಷವಾಯಿತು. ಎಲ್ಲಿಂದಲೋ ಬಂದ ಜಿಂಕೆಯು ನೇರವಾಗಿ ಶಾಲೆಯ ಕಾಂಪೌಂಡ್ ಹಾರಿ, ಶಾಲಾ ಅವರಣ ಪ್ರವೇಶಿಸಿತು. ಜಿಂಕೆಯನ್ನು ಕಂಡು ಪುಟ್ಟ ಮಕ್ಕಳು ಫುಲ್ ಖುಷ್ ಆದರು. ಈ ವೇಳೆ ಮಕ್ಕಳು ಕೂಗಾಟ ನಡೆಸಿದ್ದು, ಇದರಿಂದ ಬೆದರಿದ ಜಿಂಕೆ ಶಾಲೆಯ ಕಾಂಪೌಂಡ್ ಹಾರಿ ಹೊರ ಓಡಿದ ಘಟನೆ ನಡೆಯಿತು.

ವನ್ಯಜೀವಿಗಳನ್ನು ಗುರುತಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ವನ್ಯಜೀವಿಗಳನ್ನು ಗುರುತಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್

ಕಾಂಪೌಂಡ್ ಹಾರುವಾಗ ಜಿಂಕೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಗೆ ಚಿಕಿತ್ಸೆ ನೀಡಿದರು. ಚಿಕಿತ್ಸೆ ಕೊಟ್ಟ ನಂತರ ಆನೆಚೌಕೂರು ಅರಣ್ಯ ಪ್ರದೇಶಕ್ಕೆ ಜಿಂಕೆಯನ್ನು ಬಿಟ್ಟಿದ್ದಾರೆ.

Deer rescued after entered school in Piriyapatna

ಕೊರಟಗೆರೆ: ಕೋಳಿ ತಿನ್ನಲು ಬಂದು ಶೆಡ್‌ನಲ್ಲಿ ಬಂಧಿಯಾದ ಚಿರತೆಕೊರಟಗೆರೆ: ಕೋಳಿ ತಿನ್ನಲು ಬಂದು ಶೆಡ್‌ನಲ್ಲಿ ಬಂಧಿಯಾದ ಚಿರತೆ

ಅಂತೂ ಪಿರಿಯಾಪಟ್ಟಣದ ಪುಷ್ಪಾ ಶಾಲೆಯ ಮಕ್ಕಳಿಗೆ ಜಿಂಕೆ ನೋಡುವುದಕ್ಕೇನೋ ಸಾಧ್ಯವಾಯಿತು. ಆದರೆ ಈ ರೀತಿ ಬರುವುದಕ್ಕೆ ಏನು ಕಾರಣ ಎಂಬುದು ಬಹಳ ಮುಖ್ಯ. ಒಂದು ವೇಳೆ ದುಷ್ಕರ್ಮಿಗಳ ಕೈಗೆ ಜಿಂಕೆ ಸಿಕ್ಕಿಬಿದ್ದಿದ್ದರೆ ಗತಿ ಏನಾಗಿರ್ತಿತ್ತು ಎಂಬ ಆತಂಕ ಕಾಡುತ್ತದೆ.

English summary
Deer rescued by forest department staffs and leave it to forest after it entered school and injured in Piriyapatna, Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X