ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಸತ್ತ ಕಾಡಾನೆಯ ದಂತ ಅಪಹರಣ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 22 : ಕಂದಕದಲ್ಲಿ ಬಿದ್ದು ಸಾವನ್ನಪ್ಪಿದ್ದ ಕಾಡಾನೆಯ ದಂತವನ್ನು ಕಳ್ಳರು ಅಪಹರಿಸಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ನಡೆದಿದೆ. ದಂತಕ್ಕಾಗಿಯೇ ಆನೆ ಹತ್ಯೆ ನಡೆದಿದೆಯೇ ಎಂದು ತನಿಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಸಾವನ್ನಪ್ಪಿದ್ದು, ಈ ಪೈಕಿ ಒಂದು ಕಾಡಾನೆಯ ದಂತವನ್ನು ಅಪಹರಿಸಲಾಗಿದೆ. ಒಂದು ವಾರದ ಹಿಂದೆಯೇ ಸಾವನ್ನಪ್ಪಿರುವ ಶಂಕೆ ಇದ್ದು, ದೇಹ ಕೊಳತ ಸ್ಥಿತಿಯಲ್ಲಿದೆ. [ಎಚ್ಡಿ ಕೋಟೆ ಬಳಿ ವಿದ್ಯುತ್ ತಂತಿ ತಗುಲಿ ಸಲಗ ಸಾವು]

elephant

ಕಲ್ಲಹಳ್ಳ ವಲಯದ ಕಾರ್ಮಾಡು ಬಳಿಯಿಂದ ನಗರದತ್ತ ಬರುವ ಸಲುವಾಗಿ ಸುಮಾರು 35 ವರ್ಷದ ಸಲಗ ಕಂದಕ ದಾಟಲು ತಡೆಗೋಡೆಗೆ ಅಳವಡಿಸಿದ್ದ ಸಿಮೆಂಟ್ ಕಂಬದ ಮೇಲೆ ಹತ್ತಿ ಹೊರಬರಲು ಪ್ರಯತ್ನಿಸಿದ್ದು ಈ ಸಂದರ್ಭ ಜಾರಿ ಕಂದಕದೊಳಕ್ಕೆ ಬಿದ್ದು ಮೃತಪಟ್ಟಿದ್ದರೆ, ಮತ್ತೊಂದು ಸುಮಾರು 40 ವರ್ಷದ ಕಾಡಾನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಲ್ಲಹಳ್ಳ ವಲಯದ ತಟ್ಟೆಕಟ್ಟೆ ಬೀಟ್‍ನಲ್ಲಿ ಸಾವನ್ನಪ್ಪಿದೆ. [ಮೈಸೂರು ದಸರಾ ಮಾವುತರ ಕರಾಳ ಬದುಕಾ ಕಂಡೀರಾ?]

ಕಾಡಾನೆ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದು, ಸತ್ತ ಬಳಿಕ ದಂತವನ್ನು ಕತ್ತರಿಸಿ ಸಾಗಿಸಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಶ್ವಾನದಳ ಕರೆಸಿ ಪರಿಶೀಲನೆ ನಡೆಸಲಾಯಿತಾದರೂ ಯಾವುದೇ ಸುಳಿವು ಸಿಗಲಿಲ್ಲ. ಎರಡು ಕಾಡಾನೆಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಗಿದೆ. [ಮೈಸೂರು ಮೃಗಾಲಯದ 'ಟಿಂಬೋ' ಇನ್ನಿಲ್ಲ]

English summary
Dead elephant's ivory stolen in Nagarahole forest, Mysuru. Forest department officials visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X