ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ವಿಚಾರದಲ್ಲಿ ರಾಜಕೀಯ ಬೇಡ: ಪರಮೇಶ್ವರ ಮನವಿ

|
Google Oneindia Kannada News

ಮೈಸೂರು, ಅಕ್ಟೋಬರ್ 10: ಮೈಸೂರು ಭಾಗದ ಎರಡು ಶಾಸಕರು, ಸಚಿವರು ಉತ್ಸವಕ್ಕೆ ಹೋಗಿಲ್ಲ ಎನ್ನುವ ಮಾಹಿತಿ ಬಂದಿದೆ, ಅವರೊಂದಿಗೆ ಮಾತನಾಡುತ್ತೇನೆ, ನಾಡಹಬ್ಬದಲ್ಲಿ ರಾಜಕೀಯ ಬೇಡ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ದಸರಾ ಉತ್ಸವದಲ್ಲಿ ಮೂರು ದಿನ ಪಾಲ್ಗೊಳ್ಳಲಿದ್ದೇನೆ, ಮೂರು ದಿನ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮೊದಲ ದಿನ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.‌

ಮೈಸೂರು ದಸರಾ ಉದ್ಘಾಟನೆ LIVE: ಇದು ನನ್ನ ಪೂರ್ವಜನ್ಮದ ಪುಣ್ಯ ಎಂದ ಸುಧಾಮೂರ್ತಿ ಮೈಸೂರು ದಸರಾ ಉದ್ಘಾಟನೆ LIVE: ಇದು ನನ್ನ ಪೂರ್ವಜನ್ಮದ ಪುಣ್ಯ ಎಂದ ಸುಧಾಮೂರ್ತಿ

ದಸರಾ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ದಸರಾಗೆ ಚಾಲನೆ ನೀಡಿದ ಸುಧಾಮೂರ್ತಿ ಅವರು ಕೊಡಗು ಮರುನಿರ್ಮಾಣಕ್ಕೆ 25 ಕೋಟಿ ರೂ. . ನೀಡುತ್ತಿರುವುದು ಶ್ಲಾಘನೀಯ ಎಂದರು.

DCM clarifies he will take part in Dasara celebration

ಸಚಿವ ಸಂಪುಟ ವಿಸ್ತರಣೆ ಮಾಡುವುದರಲ್ಲಿ‌ ಅನುಮಾನವಿಲ್ಲ. ಸದ್ಯ ಉಪಚುನಾವಣೆ ಎದುರಾಗಿರುವ ಕಾರಣ ಸದ್ಯಕ್ಕೆ ಇತ್ತ ಗಮನ ಹರಿಸಲಾಗಿದೆ.‌

ದಸರಾ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್ ನಾಯಕರು: ಕಾರಣವೇನು?ದಸರಾ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್ ನಾಯಕರು: ಕಾರಣವೇನು?

ಉಪಚುನಾವಣೆ ಹಾಗೂ ಲೋಕಸಭೆ ಚುನಾವಣೆ ಸಂಬಂಧ ವೇಣುಗೋಪಾಲ್‌ ಅವರ ನೇತೃತ್ವದಲ್ಲಿ ಎಲ್ಲ ನಾಯಕರೊಂದಿಗೆ ಚರ್ಚೆ ಮಾಡಲಾಗಿದೆ. ಉಪಚುನಾವಣೆಗೆ ಅಭ್ಯರ್ಥಿಗಳ ಸಮಸ್ಯೆ ಇಲ್ಲ.‌ಲೋಕಸಭೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಬಿಡಿಎ ಅಧಿಕಾರಗಳ ಮೇಲೆ ಐಟಿ ದಾಳಿ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಡಿಎ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.‌

ಮೈಸೂರು ದಸರಾಕ್ಕೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ ಮೈಸೂರು ದಸರಾಕ್ಕೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ

ಸಮ್ಮಿಶ್ರ ಸರ್ಕಾರವನ್ನು ಅಸ್ತಿತಗೊಳಿಸುವ ಪ್ರಯತ್ನವನ್ನು ಬಿಜೆಪಿ ನಿತ್ಯ ಮಾಡುತ್ತಿದೆ.‌ ನಮ್ಮ‌ ಶಾಸಕರನ್ನು ಅಷ್ಟು ಸುಲಭವಾಗಿ ಎಳೆದುಕೊಳ್ಳಲು ಸಾಧ್ಯವಿಲ್ಲ.‌ಅವರ ಶಾಸಕಸ್ಥಾನ ಅಸ್ತಿರಗೊಳ್ಳುವ ಭಯ ಇದ್ದೇ ಇರುತ್ತದೆ ಎಂದು ಹೇಳಿದರು.

English summary
Deputy chief minister Dr.G.Parameshwara has clarified that he will be taking part in Dasara celebration of Mysuru for three days and no one should play politics in this issue .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X