ದಸರಾ ಮುಗಿದ ಬಳಿಕ ಶಿಕ್ಷಣ ಇಲಾಖೆಯಿಂದ ರಜೆ ಘೋಷಣೆ!

Posted By:
Subscribe to Oneindia Kannada

ಮೈಸೂರು, ಆಗಸ್ಟ್ 22 : ದಸರಾ ಅಂದರೆ ಸಾಕು ಹೆಚ್ಚು ಖುಷಿಪಡುವುದು ನಮ್ಮ ಮನೆಯಲ್ಲಿರುವ ಚಿಣ್ಣರು. ಅಬ್ಬಾ, ಶಾಲೆ ಮುಗಿಯಿತು, ಇನ್ನೇನಿದ್ರೂ ರಜಾ ಶುರುವಾಯಿತಲ್ಲ ಎಂದು ಸಂಭ್ರಮದಿಂದಿರುತ್ತಾರೆ. ಎಲ್ಲರೂ ದಸರೆಯ ಆಸ್ವಾದವನ್ನು ಟಿವಿ ಮುಂದೆ ಕುಳಿತು ಸವಿಯುತ್ತಾರೆ. ಆದರೆ ಈ ಬಾರಿ, ಸರಿಯಾಗಿದಸರೆಯ ಹಬ್ಬದ ಸಂದರ್ಭದಲ್ಲಿ ದೀರ್ಘವಾಗಿ ಸಿಗುತ್ತಿದ್ದ ರಜೆ ಮೈಸೂರು ಹೊರತುಪಡಿಸಿದಂತೆ ನಮ್ಮ ರಾಜ್ಯದ ಇತರ ಜಿಲ್ಲೆಗಳ ಚಿಣ್ಣರ ಪಾಲಿಗೆ ಇಲ್ಲವಾಗಿದೆ.

ದಸರಾ ಉದ್ಘಾಟಿಸಲಿರುವ ನಿಸಾರ್ ಅಹಮದ್ ವ್ಯಕ್ತಿಚಿತ್ರ

ನಿಜ, 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮಧ್ಯಂತರ ರಜೆಯನ್ನು ಅಕ್ಟೋಬರ್ 11 ರಿಂದ 25 ರವರೆಗೆ ಒಟ್ಟು 15 ದಿನಗಳ ರಜೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ದಸರೆ ಮುಗಿದ ಮೇಲೆ ಶಿಕ್ಷಣ ಇಲಾಖೆ ದಸರೆ ರಜೆ ನೀಡಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕ ವಲಯದಲ್ಲಿ ಮೂಡಿರುವ ಪ್ರಶ್ನೆ. ಆದರೆ, ಮೈಸೂರು ಜಿಲ್ಲೆಯ ಮಕ್ಕಳಿಗೆ ಮಾತ್ರ ಸರಿಯಾಗಿ ದಸರೆ ಹಬ್ಬದ ಹೊತ್ತಿಗೇ ದಸರೆ ರಜೆ ಸಿಗುವಂತೆ ಮಾಡುವಲ್ಲಿ ಜಿಲ್ಲಾಡಳಿತ ವಿಶೇಷ ಕಾಳಜಿ ತೋರಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಕೊಂಚ ಖುಷಿ ತಂದಿದ್ದರೂ, ಇತರ ಜಿಲ್ಲೆಯ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗಿರುವುದರ ಬಗ್ಗೆ ಅಸಮಾಧಾನವೂ ವ್ಯಕ್ತವಾಗಿದೆ.

Dasara limited to Mysore? Why government doesn't give holidy in other places?

ಮೈಸೂರಿನ ಚಿಣ್ಣರಿಗೆ ಮಾತ್ರ ದಸರೆ ರಜೆ:
ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿರುವ ಶಾಲೆಗಳಿಗೆ ದಸರಾ ಮಧ್ಯಂತರ ರಜೆಯ ಅವಧಿಯನ್ನು ಮಾರ್ಪಡಿಸಿರುವ ದಸರಾ ವಿಶೇಷಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಮೈಸೂರು ದಸರಾ ಮಹೋತ್ಸವವು ಸೆಪ್ಟೆಂಬರ್ 21 ರಿಂದ 30 ರವರೆಗೆ ನಡೆಯುವುದರಿಂದ ಈ ಅವಧಿಯಲ್ಲಿ ಮಕ್ಕಳ ದಸರಾ ಹಾಗೂ ದಸರಾ ಕಾರ್ಯಕ್ರಮಗಳಲ್ಲಿ ಶಾಲಾ ವಿದ್ಯಾರ್ಥಿಗಳು/ ಶಿಕ್ಷಕರು ಪಾಲ್ಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮೈಸೂರು ದಸರಾ ಅಂಗವಾಗಿ ಜಿಲ್ಲೆಯಲ್ಲಿನ ಶಾಲೆಗಳಿಗೆ ದಸರಾ ಮಧ್ಯಂತರ ರಜೆಯನ್ನು ಸೆ.21 ರಿಂದ ಅಕ್ಟೋಬರ್ 5 ರವರೆಗೆ ನೀಡುವುದು ಸೂಕ್ತವಾಗಿರುತ್ತದೆ.

ಆಗಸ್ಟ್ 12 ರ ಗಜಪಯಣಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಿದ್ಧ

ಆದ್ದರಿಂದ 2017-18ನೇ ಸಾಲಿನ ಮಧ್ಯಂತರ ರಜೆಯನ್ನು ಮಾರ್ಪಾಡು ಮಾಡಿ ಸೆ.21 ರಿಂದ ಅಕ್ಟೋಬರ್ 5ರವರೆಗೆ ರಜೆಯನ್ನು ಘೋಷಿಸಲು ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಡಿಸಿ ಪತ್ರ ಬರೆದಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆಯು ಸಹ ಸಮ್ಮತಿ ಸೂಚಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

ಬೇರೇ ಜಿಲ್ಲೆಗಳಿಗೆ ದಸರೆಯ ನಂತರ ರಜೆ?
ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿರುವ ದಸರ ರಜೆಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಅಕ್ಟೋಬರ್ 15ರಿಂದ 25ರವರೆಗೆ ಶಾಲೆಗಳಿಗೆ ದಸರ ರಜೆ ಘೋಷಿಸಲಾಗಿದೆ. ದಸರಾ ರಜೆಯನ್ನು ಮೈಸೂರು ಜಿಲ್ಲೆಗೆ ಸೀಮಿತಗೊಂಡಂತೆ ಸೆಪ್ಟೆಂಬರ್ 21ರಿಂದ ಅಕ್ಟೋಬರ್ 5ರವರೆಗೆ ನೀಡಿ, ಇನ್ನುಳಿದ ಜಿಲ್ಲೆಗಳಿಗೆ ಅಕ್ಟೋಬರ್ 15ರಿಂದ 25ರವರೆಗೆ ನೀಡಿದರೆ ಆಗ ನಾಡಹಬ್ಬವಾದ ದಸರೆಯ ಸಂಭ್ರಮ ಕೇವಲ ಮೈಸೂರಿಗರಿಗೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಬೇರೆ ಜಿಲ್ಲೆಯಲ್ಲಿಯೂ ದಸರೆ ನಡೆಯುವುದಿಲ್ಲವೇ?
ಇತ್ತ ಮೈಸೂರಿನಲ್ಲಿ ದಸರಾ ಉತ್ಸವ ನಡೆಯುತ್ತಿರುವ ವೇಳೆಯಲ್ಲಿ ಇತರ ಎಲ್ಲ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು ನಡೆಯುತ್ತಿರುತ್ತವೆ. ಹೀಗಾಗಿ ರಾಜ್ಯದ ಇತರೆ ಜಿಲ್ಲೆಗಳ ಮಕ್ಕಳು ಮೈಸೂರಿಗೆ ಆಗಮಿಸಿ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ದಸರಾ ನಾಡಹಬ್ಬವೋ? ಅಥವಾ ಮೈಸೂರು ಹಬ್ಬವೋ? ಎಂಬ ಪ್ರಶ್ನೆ ಎದ್ದಿದೆ.

ಮಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ದಾವಣಗೆರೆ ಸೇರಿದಂತೆ ಎಲ್ಲೆಡೆ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇಷ್ಟಲ್ಲದೇ ಮೈಸೂರು ಅಕ್ಕಪಕ್ಕದ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮಂಡ್ಯದಲ್ಲೂ ನವರಾತ್ರಿ ಆಚರಣೆ ಇರುತ್ತದೆ. ಆದರೆ ಈ ಸಂದರ್ಭದಲ್ಲಿ ರಜೆ ಇರುವುದಿಲ್ಲ. ಇದು ನಾಡ ಹಬ್ಬದ ಆಚರಣೆ ಬಗ್ಗೆ ಜಿಜ್ಞಾಸೆ ಮೂಡಿಸಿದೆ.

ದ್ವಂದ್ವ ರಜೆಯಿಂದ ಹಲವರಲ್ಲಿ ಗೊಂದಲ
ಶೈಕ್ಷಣಿಕ ವಿಚಾರಕ್ಕೆ ಬಂದರೆ ವರ್ಷದ ಪಾಠ-ಪ್ರವಚನಗಳು ಪರೀಕ್ಷೆಗಳು ರಾಜ್ಯಾದ್ಯಂತ ರಜೆಯ ಆಧಾರದ ಮೇಲೆ ವಿಂಗಡಣೆಯಾಗುತ್ತದೆ. ಅರ್ಧ ವಾರ್ಷಿಕ ಪರೀಕ್ಷೆ ಮತ್ತು ಸೆಮಿಸ್ಟರ್ ರಜೆ ಏಕರೂಪದಲ್ಲಿರುವುದಿಲ್ಲ. ರಜೆ ಏಕರೂಪದಲ್ಲಿ ಇಲ್ಲದಿರುವಾಗ ಇದಕ್ಕೆಲ್ಲ ತೊಂದರೆಯಾಗುವುದಿಲ್ಲವೇ? ಶಿಕ್ಷಣ ಇಲಾಖೆ ವಾರ್ಷಿಕ ಕ್ಯಾಲೆಂಡರ್ ನೋಡಿ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ನಿರ್ಧರಿಸದಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಒಟ್ಟಾರೆ ಏಕರೂಪ ಶಿಕ್ಷಣ ಪದ್ಧತಿ ಜಾರಿ ತಂದಿರುವ ನಮ್ಮ ಶಿಕ್ಷಣ ಇಲಾಖೆ, ಏಕರೂಪ ರಜೆ ನಿಯಮಾವಳಿಯನ್ನೇಕೆ ಜಾರಿಗೆ ತರುವಲ್ಲಿ ಮುಂದಾಗುತ್ತಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If the Dasara holiday is limited to Mysore district from September 21 to October 5, while the other districts will be given from October 15 to 25, then the question of whether the celebration of the festival will be limited to Mysore alone.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ