ದಸರಾ ಆಚರಣೆಗೆ ಆದ್ಯತೆ: ಮೈಸೂರು ಹೊಸ ಡಿಸಿ ರಣದೀಪ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 13: ಮೈಸೂರು ಜಿಲ್ಲಾಧಿಕಾರಿಯಾಗಿ ಡಿ.ರಣದೀಪ್ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಂದ ವರ್ಗಾವಣೆಯಾದ ಸಿ.ಶಿಖಾ ಅವರ ಸ್ಥಾನಕ್ಕೆ ರಣದೀಪ್ ನೇಮಕವಾಗಿದೆ. 'ಈ ಬಾರಿ ದಸರಾವನ್ನು ಸುಸೂತ್ರವಾಗಿ ನಡೆಸುವುದಕ್ಕೆ ಆದ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ. [ವಿಶ್ರಾಂತಿಯಲ್ಲಿರುವ ಡಿಸಿ ಶಿಖಾ ಟೀ ಮಾಡಿಕೊಟ್ಟರು]

ಕುಟುಂಬ ಸಮೇತ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆ ತೆರಳಿ, ದೇವಿ ದರ್ಶನ ಮಾಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ಅವರು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು. ಆ ನಂತರ ಮಾತನಾಡಿ, ದಸರಾ ಆಚರಣೆಗೆ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇನೆ ಎಂದು ಹೇಳಿದರು.

Ranadeep

ದಸರಾ ಸಿದ್ಧತೆಗೆ ತುಂಬ ಕಡಿಮೆ ಸಮಯ ಇದೆ. ಈ ವರೆಗೆ ನಡೆದ ಮತ್ತು ನಡೆಯಬೇಕಾಗಿರುವ ಕಾರ್ಯಕ್ರಮಗಳನ್ನು ತಿಳಿದುಕೊಂಡು, ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ರಣದೀಪ್ ಹೇಳಿದರು.

ಹಿಂದಿನ ಜಿಲ್ಲಾಧಿಕಾರಿ ಸಿ.ಶಿಖಾ ಪ್ರಕರಣವನ್ನು ನೆನಪಿಸಿ, ಜನಪ್ರತಿನಿಧಿಗಳ ಒತ್ತಡ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಸಿಎಂ ಅವರ ತವರು ಜಿಲ್ಲೆ ಆಗಿರುವುದರಿಂದ ಒತ್ತಡ ಸಾಮಾನ್ಯ. ಜನರ ಆಶೋತ್ತರಗಳ ಜತೆಗೆ ಜನಪ್ರತಿನಿಧಿಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇನೆ' ಎಂದು ಹೇಳಿದರು. [ಮೈಸೂರು ಜಿಲ್ಲಾಧಿಕಾರಿ ಸಿ ಶಿಖಾ ವರ್ಗಾವಣೆ]

ವಿಜಯಪುರದಲ್ಲಿ 2 ವರ್ಷ 2 ತಿಂಗಳು ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ಅನುಭವವಿದೆ. ಅಲ್ಲದೆ ವಿಜಯಪುರ ಜಿಲ್ಲೆಯಂತೆ ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸಿ ತಾಣವಾಗಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೂ ಒತ್ತು ನೀಡುತ್ತೇನೆ ಎಂದರು [ಜಿಲ್ಲಾಧಿಕಾರಿಗೆ ಧಮ್ಕಿ : ಕಾಂಗ್ರೆಸ್‌ನಿಂದ ಕೆ.ಮರೀಗೌಡ ಅಮಾನತು].

ರಣದೀಪ್ ವೈಯಕ್ತಿಕ ವಿವರ:
ಮೂಲತಃ ಬೆಂಗಳೂರಿನ ನಿವೃತ್ತ ಹಿರಿಯ ಅಧಿಕಾರಿ ಟಿ.ದೇವೇಂದ್ರನ್ ಹಾಗೂ ವೈದ್ಯೆ ಯಮುನಾ ದಂಪತಿ ಪುತ್ರ ಡಿ.ರಣದೀಪ್ ಹಾವೀಕ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ್ದಾರೆ.

ಬೆಂಗಳೂರಿನ ಇಂದಿರಾಗಾಂಧಿ ಯೂನಿವರ್ಸಿಟಿಯಲ್ಲಿ ಎಂಎ ಮುಗಿಸಿದ್ದಾರೆ. 2006 ಐಎಎಸ್ ಬ್ಯಾಚ್ ನ ಅವರು, ವಿವಿಧ ಸರ್ಕಾರಿ ಇಲಾಖೆಗಳಲ್ಲಿ 10 ವರ್ಷ ಕೆಲಸ ನಿರ್ವಹಿಸಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿವಾಹಿತರಾಗಿರುವ ರಣದೀಪ್, ಕೆಲ ದಿನಗಳ ಹಿಂದಷ್ಟೇ ತಂದೆಯಾಗಿದ್ದಾರೆ.

ರಣದೀಪ್ ಅವರ ತಂದೆ ಕೆಲ ದಿನಗಳ ಕಾಲ ಮಂಡ್ಯ ಜಿಲ್ಲಾಧಿಕಾರಿಗಳಾಗಿ ಕೆಲಸ ನಿರ್ವಹಿಸಿದ್ದರು. ಅವರಿಂದ ಕೆಲವು ಸಲಹೆಗಳನ್ನು ಪಡೆದಿದ್ದಾರೆ. ಪ್ರವಾಸೋದ್ಯಮ ಜಿಲ್ಲೆಯಾಗಿ ಅಭಿವೃದ್ಧಿಪಡಿಸಲು ವಿಜಯಪುರದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ರಣದೀಪ್ ತೆಗೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New DC of Mysuru D.Ranadeep said, Dasara celebration is my priority. Political pressure will be there, but needs to handle. He is successor of C.Shikha.
Please Wait while comments are loading...