ಏನು ತಿಂತೀರಿ, ಎಷ್ಟು ತಿಂತೀರಿ, ದಸರಾ ಆಹಾರ ಮೇಳಕ್ಕೆ ಬನ್ರೀ..

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 2: ಮೈಸೂರು ದಸರಾದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಆಹಾರ ಮೇಳವೂ ಒಂದಾಗಿದ್ದು, ವಿವಿಧ ಬಗೆಯ, ವಿವಿಧ ಊರಿನ ತಿನಿಸುಗಳನ್ನು ಸವಿಯಲೆಂದೇ ಜನ ಬರುತ್ತಾರೆ.

ಈ ಬಾರಿಯ ದಸರಾ ಆಹಾರ ಮೇಳವು ಅಕ್ಟೋಬರ್ 1ರಿಂದ 9ರ ವರೆಗೆ 9 ದಿನಗಳ ಕಾಲ ಮೈಸೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಬೇಡನ್ ಶಾಲಾ ಆವರಣದಲ್ಲಿ ನಡೆಯಲಿದೆ. ಅಷ್ಟೇ ಅಲ್ಲದೆ ಯುವ ದಸರಾ ನಡೆಯುವ ಮಹಾರಾಜ ಕಾಲೇಜು ಮೈದಾನ ಮತ್ತು ರೈತ ದಸರಾ ನಡೆಸುವ ಜೀವನ ರಾಯನ ಕಟ್ಟೆ, ಜೆ.ಕೆ. ಮೈದಾನದಲ್ಲಿಯೂ ಈ ಬಾರಿ ಆಹಾರ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ.[ಮೈಸೂರು ದಸರಾ ಸಮಿತಿಗಳಿಗೆ ಅಧಿಕಾರಿಗಳ ನೇಮಕ]

Dasara food festival will start on October 1st

ದಸರಾ ಮಹೋತ್ಸವಕ್ಕೆ ದೇಶ ವಿದೇಶ, ರಾಜ, ಹೊರ ರಾಜ್ಯಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡುವುದರಿಂದ ಅವರಿಗೆ ಇಷ್ಟವಾದ ಮತ್ತು ರುಚಿ-ಶುಚಿಯಾದ ವಿವಿಧ ಖಾದ್ಯಗಳನ್ನು ತಯಾರಿಸಿ ಉಣಬಡಿಸಬೇಕಾಗಿದೆ. ಪ್ರತಿ ವರ್ಷವೂ ಆಹಾರ ಮೇಳಕ್ಕೆ ವಿಶೇಷ ಮೆರುಗು ನೀಡಲು ಮತ್ತು ಎಲ್ಲ ಶೈಲಿಯ ಖಾದ್ಯಗಳನ್ನು ಸವಿಯಲು ಅವಕಾಶ ಒದಗಿಸಲಾಗುತ್ತದೆ.

ಬುಡಕಟ್ಟು ಶೈಲಿ, ಸಹಜಕೃಷಿ, ಮೈಸೂರು ಶೈಲಿ, ಕೊಡಗು ಶೈಲಿ, ಕರಾವಳಿ ಶೈಲಿ, ಮಲೆನಾಡು ಶೈಲಿ, ಉತ್ತರ ಕರ್ನಾಟಕ ಶೈಲಿ, ಕೇರಳ, ಉತ್ತರ ಭಾರತ, ಆಂಧ್ರ ಶೈಲಿ ಆಹಾರ ತಯಾರಿಸಿ ಮಾರಾಟ ಮಾಡುವವರಿಗೆ ಅವಕಾಶ ಮಾಡಿಕೊಡಲಾಗುತ್ತದೆ.[ದಸರಾ : ಕಾವಡಿ, ಮಾವುತರ ಮಕ್ಕಳ ಟೆಂಟ್ ಶಾಲೆ ನೋಡಿ]

ಅಷ್ಟೇ ಅಲ್ಲ, ಬೇಕರಿ ಮತ್ತು ಕಾಂಡಿಮೆಂಟ್ ಗಳು, ಚಾಕೊಲೇಟ್ ಮಳಿಗೆಗಳು, ಹಣ್ಣು ಮತ್ತು ಹಣ್ಣಿನ ರಸ, ಐಸ್ ಕ್ರೀಮ್ ಪಾರ್ಲರ್ ಗಳು, ಸಾಂಪ್ರದಾಯಿಕ ಸಿಹಿ ತಿಂಡಿ, ತಂಪು ಪಾನೀಯಗಳು, ಚಾಟ್ಸ್ ಗಳು, ಮಿನರಲ್ ವಾಟರ್ ಕಲ್ಪಿಸಲು ಸರಬರಾಜುದಾರರಿಗೆ ಅವಕಾಶವಿದೆ.

ಆಹಾರಮೇಳದಲ್ಲಿ ಭಾಗವಹಿಸಿ ತಮ್ಮ ಖಾದ್ಯವನ್ನು ಮಾರಾಟ ಮಾಡಲು ಇಚ್ಚಿಸುವವರು ಮೊದಲೇ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬೇಕಾಗುತ್ತದೆ. ಆಸಕ್ತರು ಅರ್ಜಿಯನ್ನು ಉಪ ನಿರ್ದೇಶಕರ ಕಾರ್ಯಾಲಯ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಮೈಸೂರು ಜಿಲ್ಲೆ ಅಥವಾ ಆಯಾ ಜಿಲ್ಲೆಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಸೆಪ್ಟೆಂಬರ್ 12 ರೊಳಗೆ ಸಲ್ಲಿಸಬಹುದಾಗಿದೆ.[ದಸರಾ ಆನೆಗಳ ಪೈಕಿ ಅರ್ಜುನನೇ ಬಲಶಾಲಿ!]

ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಆಹಾರ ಮೇಳದ ಕಾರ್ಯಾಧ್ಯಕ್ಷರಾದ ಡಾ. ಕೆ. ರಾಮೇಶ್ವರಪ್ಪ (0821-2422107 ಅಥವಾ 9611165367), ಎಸ್.ಎನ್. ಯತಿರಾಜ್ ಸಂಪತ್‍ಕುಮಾರನ್, ಸಹಾಯಕ ನಿರ್ದೇಶಕರು(ಪ್ರಭಾರ), ಅನೌಪಚಾರಿಕ ಪಡಿತರ ಪ್ರದೇಶ, ಮೈಸೂರು ಮೊಬೈಲ್ ಸಂಖ್ಯೆ 9342003824 ಇವರನ್ನು ಸಂಪರ್ಕಿಸಿ, ಪಡೆಯಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru Dasara food festival will start on October 1st. Varieties food and beverages shops will open. Karnataka's different food culture may seen in the festival.
Please Wait while comments are loading...