ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಫಲ- ಪುಷ್ಪ ಪ್ರದರ್ಶನ: ಅರಳುತ್ತಿದೆ ಕಮಲ ದೇವಸ್ಥಾನ

By ಯಶಸ್ವಿನಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್.21: ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿರುವ ವಿಶ್ವವಿಖ್ಯಾತ ದಸರೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಈ ಬಾರಿಯ ದಸರೆಯ ಆಕರ್ಷಣೆ ಕೇಂದ್ರ ಬಿಂದು ಗಾಜಿನ ಅರಮನೆ. ಇದಕ್ಕೆ ಮತ್ತಷ್ಟು ಮೆರಗು ಕೊಡಲು ಕಮಲ ದೇವಸ್ಥಾನದ ಹೂವಿನ ಮಾದರಿ ನಿರ್ಮಿಸಲಾಗುತ್ತಿದೆ.

ಪ್ರತಿ ವರ್ಷ ದಸರಾ ಮಹೋತ್ಸವ ಸಂದರ್ಭದಲ್ಲಿ ಕುಪ್ಪಣ್ಣ ಪಾರ್ಕ್ ನಲ್ಲಿ ಒಂದಲ್ಲ ಒಂದು ಹೂವಿನ ಮಾದರಿಯನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಫಲ- ಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ವಿಶೇಷ ಕಮಲ ದೇವಸ್ಥಾನ.

ಕಣ್ಮನ ಸೆಳೆಯುತ್ತಿದೆ ವರ್ಲಿ ಕಲೆಯಲ್ಲಿ ಅರಳಿದ ದಸರಾ ವೈಭವಕಣ್ಮನ ಸೆಳೆಯುತ್ತಿದೆ ವರ್ಲಿ ಕಲೆಯಲ್ಲಿ ಅರಳಿದ ದಸರಾ ವೈಭವ

ಕಮಲ ದೇವಸ್ಥಾನದ ಮಾದರಿಯನ್ನು ನಿರ್ಮಿಸಲು ಮೈಸೂರು ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ನಿರ್ಧರಿಸಿದ್ದು, 1986ರ ಡಿಸೆಂಬರ್‌ನಲ್ಲಿ ಬಹಾಯಿ ಪೂಜಾ ಮನೆಯಾಗಿ ಸಮರ್ಪಿಸಲ್ಪಟ್ಟ ಕಮಲ ದೇವಸ್ಥಾನದ ಹೂವಿನ ಮಾದರಿ ಈ ಬಾರಿ ಪ್ರವಾಸಿಗರನ್ನು ಸೆಳೆಯಲಿದೆ.

Dasara flower show centre of attraction is the glass palace

ತಂಪಾದ ವಾತಾವರಣ ಒದಗಿಸುವ ಗಾಜಿನ ಮನೆಯಲ್ಲಿ ಹೂವುಗಳ ತಾಜಾತನ ದೀರ್ಘಕಾಲ ಉಳಿಯಲಿದೆ. ಸಾವಿರಾರು ಗುಲಾಬಿ ಹೂವು, ಆರ್ಕಿಡ್ ಮತ್ತು ಕಮಲದ ಹೂವುಗಳನ್ನು ಬಳಸಿ ಈ ಕಮಲ ದೇವಸ್ಥಾನದ ಮಾದರಿ ನಿರ್ಮಿಸಲಾಗುತ್ತಿದೆ.

ಫಲ-ಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಮತ್ತು ಮಳಿಗೆಗಳ ಗುತ್ತಿಗೆಯನ್ನು ಮೈಸೂರು ಮೂಲದ ಪ್ರಮುಖ ಸಂಸ್ಥೆಯೊಂದಕ್ಕೆ 70.5 ಲಕ್ಷ ರೂ.ಗಳಿಗೆ ನೀಡಲಾಗಿದ್ದು, ಎಲ್ಲವನ್ನೂ ಸಂಸ್ಥೆಯೇ ನಿರ್ವಹಿಸಲಿದೆ.

 ಅಕ್ಟೋಬರ್.14ರಂದು ಓಪನ್ ಸ್ಟ್ರೀಟ್ ಫೆಸ್ಟಿವಲ್: ವಿಶೇಷತೆಗಳು ಏನು? ಅಕ್ಟೋಬರ್.14ರಂದು ಓಪನ್ ಸ್ಟ್ರೀಟ್ ಫೆಸ್ಟಿವಲ್: ವಿಶೇಷತೆಗಳು ಏನು?

ಬಹು ವಿಶೇಷವಾದ ಗಾಜಿನ ಮನೆ

ಮೈಸೂರಿನ ಪಾರಂಪರಿಕ ಕಟ್ಟಡಗಳ ಶೈಲಿಯ ವಿನ್ಯಾಸದಲ್ಲಿರುವ ಗಾಜಿನ ಅರಮನೆ ಕಾಮಗಾರಿ ಭರದಿಂದ ಸಾಗಿದೆ. ಪಿತೃಪಕ್ಷ ಆರಂಭಕ್ಕೂ ಮುನ್ನ ಅಂದರೆ ಈ ಹುಣ್ಣಿಮೆಯ ಒಳಗಾಗಿ ಶುಭ ದಿನ ನೋಡಿ ಗುತ್ತಿಗೆದಾರ ಗಾಜಿನ ಅರಮನೆಯನ್ನು ತೋಟಗಾರಿಕೆ ಇಲಾಖೆ ಸುಪರ್ದಿಗೆ ಒಪ್ಪಿಸಲಿದ್ದಾರೆಂದು ಹೇಳಲಾಗಿದೆ.

ಗಾಜಿನ ಮನೆಗೆ SAINT-GOBAIN GLASS ಬಳಸಿದ್ದು, ಮಧ್ಯ ಪದರದಲ್ಲಿ 1.52 ಎಂಎಂ ಅಳತೆಯ ಪಿವಿಸಿ ಫಿಲ್ಮ್ ಉಳ್ಳ 13.52 ಎಂಎಂ ದಪ್ಪದ ಒಡೆಯದ ಗಾಜು ಬಳಸಲಾಗಿದೆ. ನಾಲ್ಕು ದಿಕ್ಕಿನಲ್ಲಿ ದೊಡ್ಡ ಸೆನ್ಸಾರ್ ಯುಕ್ತ ಗಾಜಿನ ದ್ವಾರಗಳಿವೆ.

Dasara flower show centre of attraction is the glass palace

ತಳಮಟ್ಟದಿಂದ 21 ಮೀಟರ್ ಎತ್ತರ, 36 ಮೀಟರ್ ಸುತ್ತಳತೆ, 18 ಮೀಟರ್ ಡೂಮ್, 6 ಮೀಟರ್ ಎತ್ತರದ ಗೋಡೆ ಎಲ್ಲವೂ ಗಾಜಿನಲ್ಲಿಯೇ ನಿರ್ಮಾಣವಾಗಿದೆ.

 ದಸರಾ ಆಹಾರ ಮೇಳದಲ್ಲಿ ವಿದೇಶಿ ತಿನಿಸುಗಳನ್ನೂ ಸವಿಯಲು ಸಿದ್ಧರಾಗಿ ದಸರಾ ಆಹಾರ ಮೇಳದಲ್ಲಿ ವಿದೇಶಿ ತಿನಿಸುಗಳನ್ನೂ ಸವಿಯಲು ಸಿದ್ಧರಾಗಿ

ಮೈಸೂರಿಗೆ ಬರುವ ಪ್ರವಾಸಿಗರು ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ, ಸಂತ ಫಿಲೋಮಿನಾ ಚರ್ಚ್ ಇನ್ನಿತರೆ ಪ್ರವಾಸಿ ತಾಣಗಳನ್ನು ನೋಡುವುದರ ಜೊತೆಗೆ ಈ ಸುಂದರ ಗಾಜಿನ ಅರಮನೆಯನ್ನೂ ನೋಡಬಹುದು.

ಒಟ್ಟಾರೆ 7.45 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೇಲುಸ್ತುವಾರಿಯಲ್ಲಿ ಬೆಂಗಳೂರಿನ ನಿಖಿತಾ ಬಿಲ್ಡ್ ಟೆಕ್ ಕಂಪನಿಗೆ ಗಾಜಿನ ಅರಮನೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಪೂರ್ಣವಾಗಿದೆ.

English summary
This time Dasara flower show centre of attraction is the glass palace. In addition, Lotus Temple flower model is being constructed. These two specialties attract tourists very much.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X